ಮೊಬೈಲ್ ಗೆ ತುರ್ತು ಸಂದೇಶ : ಬಿಜೆಪಿಯವರೂ ‘ಅಲರ್ಟ್’ ಆಗಲಿ ಎಂದು ಹಾಸ್ಯ ಚಟಾಕಿ ಹಾರಿಸಿದ ಡಿಸಿಎಂ ಡಿಕೆಶಿ

ಬೆಂಗಳೂರು : ಇಂದು ಇದ್ದಕ್ಕಿದ್ದಂತೆ ಹಲವರ ಮೊಬೈಲ್ ಗೆ ತುರ್ತು ಸಂದೇಶ ಬಂದಿದ್ದು, ಎಲ್ಲರೂ ಒಂದು ಸಲ ಬೆಚ್ಚಿ ಬಿದ್ದಿದ್ದಾರೆ.

ದೇಶದಲ್ಲಿ ನೈಸರ್ಗಿಕ ವಿಕೋಪ ನಡೆದರೆ ಅಥವಾ ಎಮರ್ಜೆನ್ಸಿ ಸಂದರ್ಭದಲ್ಲಿ ಜನರನ್ನು ಎಚ್ಚರಿಸಲು ಮೊಬೈಲ್ಗಳಿಗೆ ತುರ್ತು ಸಂದೇಶ ರವಾನಿಸುವ ಹೊಸ ಟೆಕ್ನಾಲಜಿಯ ಪ್ರಯೋಗ ನಡೆಯುತ್ತಿದೆ. ಇಂದು ಹಲವರ ಮೊಬೈಲ್ ಗೆ ಈ ತುರ್ತು ಸಂದೇಶ ಬಂದಿದ್ದು, ಎಲ್ಲರೂ ಒಂದು ಸಲ ಬೆಚ್ಚಿ ಬಿದ್ದಿದ್ದಾರೆ.

ಇನ್ನೂ, ಕಾಂಗ್ರೆಸ್ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ನಾಯಕರ ಮೊಬೈಲ್ ಗಳಿಗೂ ಈ ಸಂದೇಶ ಬಂದಿದ್ದು, ಒಂದು ಕ್ಷಣ ಎಲ್ಲರೂ ಗಲಿಬಿಲಿಯಾದರು. ಎಲ್ಲಾ ಕಾಂಗ್ರೆಸ್ ನಾಯಕರ ಮೊಬೈಲ್ ಗಳು ಒಂದೇ ಸಲ ಸೌಂಡ್ ಮಾಡಿದೆ. ಈ ವೇಳೆ ಬಿಜೆಪಿಯವರೂ ಅಲರ್ಟ್ ಆಗಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಇದು ತುರ್ತು ಸಂದರ್ಭದಗಳಲ್ಲಿ ಎಚ್ಚರಿಕೆ ವ್ಯವಸ್ಥೆ ಎಂಬುದು ಪರಿಣಾಮಕಾರಿಯಾಗಿರುತ್ತದೆಯೇ ಎಂಬುದನ್ನು ನಿರ್ಣಯಿಸಲು ಮತ್ತು ಯಾವುದೇ ಸಂಭಾವ್ಯ ಸಮಸ್ಯೆಗಳನ್ನು ಗುರುತಿಸಲು ನಡೆಸಿದ ಪರೀಕ್ಷೆಯಾಗಿದೆ. 11:30ರಿಂದ 11:44ರ ನಡುವೆ ಈ ಸಂದೇಶ ದೇಶಾದ್ಯಂತ ಕೋಟ್ಯಂತರ ಜನರ ಮೊಬೈಲ್ ಗಳಿಗೆ ಕಳುಹಿಸಲಾಗಿದೆ.

 

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read