ಅರ್ಬನ್ ಕ್ರೂಸರ್ ಹೈರೈಡರ್ ‘ಫೆಸ್ಟಿವಲ್ ಲಿಮಿಟೆಡ್ ಎಡಿಷನ್’ ಅನಾವರಣ; ಇಲ್ಲಿದೆ ಡಿಟೇಲ್ಸ್

ತನ್ನ ನಾವೀನ್ಯತೆ ಮತ್ತು ಗ್ರಾಹಕ ಸ್ನೇಹಿ ನಡವಳಿಕೆಯಿಂದ ಗಮನ ಸೆಳೆಯುತ್ತಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಇಂದು ಅರ್ಬನ್ ಕ್ರೂಸರ್ ಹೈರೈಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ವಾಹನವು ಎಕ್ಸ್ ಕ್ಲೂಸಿವ್ ಟೊಯೋಟಾದ ಪರಿಕರಗಳ (ಟಿಜಿಎ- ಟೊಯೋಟಾ ಜೆನ್ಯೂನ್ ಆಕ್ಸೆಸರೀಸ್) ಪ್ಯಾಕೇಜ್ ಅನ್ನು ಒಳಗೊಂಡಿದೆ. ಅರ್ಬನ್ ಕ್ರೂಸರ್ ಹೈರೈಡರ್ ಉತ್ಪನ್ನ ಶ್ರೇಣಿಗೆ ಹೊಸತಾಗಿ ಸೇರ್ಪಡೆಗೊಂಡಿರುವ ಈ ಹೊಸ ಉತ್ಪನ್ನವು ವಿಶೇಷವಾಗಿ ವಿನ್ಯಾಸಗೊಳಿಸಿದ 13 ಟಿಜಿಎ ಪ್ಯಾಕೇಜ್ ನಲ್ಲಿ ದೊರೆಯಲಿದೆ. ಆ ಮೂಲಕ ಗ್ರಾಹಕರಿಗೆ ಪ್ರೀಮಿಯಂ ಗುಣಮಟ್ಟದ ಡ್ರೈವಿಂಗ್ ಅನುಭವ ಒದಗಿಸಲಿದೆ.

• ಎಕ್ಸ್ ಟೀರಿಯರ್ ನಲ್ಲಿ ಕ್ರೋಮ್ ಮತ್ತು ಅಲಂಕಾರಿಕ ಪರಿಕರಗಳು: ಮಡ್‌ ಫ್ಲ್ಯಾಪ್, ಡೋರ್ ವೈಸರ್ (ಎಸ್‌ಎಸ್ ಇನ್ಸರ್ಟ್‌ ಮೂಲಕ ಪ್ರೀಮಿಯಂ), ಮುಂಭಾಗ ಮತ್ತು ಹಿಂಭಾಗದ ಬಂಪರ್ ಗಾರ್ನಿಶ್, ಹೆಡ್ ಲ್ಯಾಂಪ್ ಗಾರ್ನಿಶ್, ಹುಡ್ ಎಂಬ್ಲಮ್, ಬಾಡಿ ಕ್ಲಾಡಿಂಗ್, ಫೆಂಡರ್ ಗಾರ್ನಿಶ್, ರೇರ್ ಡೋರ್ ಲಿಡ್ ಗಾರ್ನಿಶ್, ಮತ್ತು ಡೋರ್ ಕ್ರೋಮ್ ಹ್ಯಾಂಡಲ್ ಹೊಂದಿದೆ.

• ಇಂಟೀರಿಯರ್ ನಲ್ಲಿ ಪ್ರೀಮಿಯಂ ಮತ್ತು ಅತ್ಯಾಧುನಿಕ ಪರಿಕರಗಳು: ಆಲ್-ವೆದರ್ 3ಡಿ ಫ್ಲೋರ್‌ಮ್ಯಾಟ್, ಲೆಗ್ ರೂಮ್ ಲ್ಯಾಂಪ್ ಮತ್ತು ಡಿಜಿಟಲ್ ವಿಡಿಯೋ ರೆಕಾರ್ಡರ್ ಇದರ ವಿಶೇಷತೆಗಳು.

2022ರಲ್ಲಿ ಮಾರುಕಟ್ಟೆಗೆ ಪ್ರವೇಶ ಮಾಡಿದಾಗಿನಿಂದಲೂ ಅರ್ಬನ್ ಕ್ರೂಸರ್ ಹೈರೈಡರ್ ತನ್ನ ಅತ್ಯಾಧುನಿಕ ತಂತ್ರಜ್ಞಾನ, ಅದ್ಭುತ ಕಾರ್ಯಕ್ಷಮತೆ ಮತ್ತು ಅತ್ಯುತ್ತಮ ಇಂಧನ ದಕ್ಷತೆಯಿಂದ ದೇಶಾದ್ಯಂತ ಇರುವ ಗ್ರಾಹಕರ ಹೃದಯದಲ್ಲಿ ವಿಶೇಷ ಸ್ಥಾನವನ್ನು ಪಡೆದಿದೆ. ಇದರ ಬೋಲ್ಡ್ ಮತ್ತು ಅತ್ಯಾಧುನಿಕ ಸ್ಟೈಲ್ ನಿಂದಾಗಿ ಇದು ಟೊಯೋಟಾದ ಜನಪ್ರಿಯ ಜಾಗತಿಕ ಎಸ್ ಯು ವಿ ಹೆಗ್ಗಳಿಕೆಯನ್ನು ಗಳಿಸಿದೆ. ಜೊತೆಗೆ ಇದು ಬಿ- ಎಸ್ ಯು ವಿ ವಿಭಾಗದಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ಮಾಡೆಲ್ ಗಳಲ್ಲಿ ಒಂದಾಗಿ ಹೊರಹೊಮ್ಮಿದೆ. ನಿರಂತರವಾಗಿ ಬೆಳೆಯುತ್ತಲೇ ಇರುವ ಗ್ರಾಹಕರ ಬೇಡಿಕೆ ಮತ್ತು ರಾಷ್ಟ್ರದಾದ್ಯಂತ ದೊರಕಿರುವ ಜನಪ್ರಿಯತೆಗೆ ಪೂರಕವಾಗಿ ಗೆಲುವು ಸಾಧಿಸಿರುವ ಅರ್ಬನ್ ಕ್ರೂಸರ್ ಹೈರೈಡರ್ ಕಾರ್ಯಕ್ಷಮತೆ ಅಥವಾ ಸೌಕರ್ಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಹೆಚ್ಚು ಸುಸ್ಥಿರ ಡ್ರೈವಿಂಗ್ ಅನ್ನು ಬಯಸುವ ಗ್ರಾಹಕರ ಮೊದಲ ಆದ್ಯತೆಯಾಗಿ ಮೂಡಿ ಬಂದಿದೆ.

ಅರ್ಬನ್ ಕ್ರೂಸರ್ ಹೈರಿಡರ್ ಫೆಸ್ಟಿವಲ್ ಲಿಮಿಟೆಡ್ ಆವೃತ್ತಿಯು ಟಿಜಿಎ ಪ್ಯಾಕೇಜ್‌ ಜೊತೆಗೆ ದೊರೆಯಲಿದ್ದು, ಅನೇಕ ಪ್ರೀಮಿಯಂ ಸೌಲಭ್ಯಗಳನ್ನು ಒದಗಿಸುತ್ತದೆ. ವಿಶೇಷ ಪ್ಯಾಕೇಜ್ ಗಳ ಮೂಲಕ ವಾಹನದ ಸೌಂದರ್ಯ ಮತ್ತು ಅನುಕೂಲತೆಯನ್ನು ಮತ್ತಷ್ಟು ಉನ್ನತೀಕರಿಸಿ ವಿನ್ಯಾಸಗೊಳಿಸಲಾಗಿದೆ. ವಾಹನದ ಹೊರಭಾಗ ಮತ್ತು ಒಳಭಾಗ ಎರಡಕ್ಕೂ ಪರಿಷ್ಕೃತ ಪ್ರೀಮಿಯಂ ನೋಟವನ್ನು ಒದಗಿಸಲು ವಿಶೇಷವಾಗಿ 13 ಪರಿಕರಗಳ ಪ್ಯಾಕೇಜ್ ಅನ್ನು ವಿನ್ಯಾಸಗೊಳಿಸಲಾಗಿದೆ. ಈ ವಿಶೇಷ ಪ್ಯಾಕೇಜ್ ವಿ ಮತ್ತು ಜಿ ಗ್ರೇಡ್‌ ಗಳಲ್ಲಿ ನಿಯೋ ಡ್ರೈವ್ ಮತ್ತು ಹೈಬ್ರಿಡ್ ವೇರಿಯಂಟ್ ಗಳಿಗೆ ಲಭ್ಯವಿದೆ. ಈ ಮೂಲಕ ಗ್ರಾಹಕರಿಗೆ ವಿಶಿಷ್ಟ ಆಯ್ಕೆ ಸೌಲಭ್ಯ ಒದಗಿಸಲಾಗಿದೆ.

ಈ ವಿಶೇಷ ಆವೃತ್ತಿಯ ಬಿಡುಗಡೆಯ ಪ್ರಯುಕ್ತ 2024ರ ಅಕ್ಟೋಬರ್ 31ರವರೆಗೆ ಭಾರತದಾದ್ಯಂತ ಇರುವ ಎಲ್ಲಾ ಡೀಲರ್‌ ಶಿಪ್‌ ಗಳಲ್ಲಿ ಅರ್ಬನ್ ಕ್ರೂಸರ್ ಹೈರೈಡರ್ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ಅನ್ನು ಆಯ್ಕೆ ಮಾಡುವ ಗ್ರಾಹಕರಿಗೆ ಟಿಕೆಎಂ ಸಂಸ್ಥೆಯು ₹50,817 ಮೌಲ್ಯದ ಉಚಿತ ಪ್ಯಾಕೇಜ್ ಅನ್ನು ನೀಡುತ್ತಿದೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read