alex Certify ವಿದೇಶ ಪ್ರವಾಸದ ವೇಳೆಯೂ ಬಳಸಬಹುದು UPI; ಇಲ್ಲಿದೆ ʼಪೇಮೆಂಟ್‌ʼ ಮಾಡುವ ಸಂಪೂರ್ಣ ವಿವರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶ ಪ್ರವಾಸದ ವೇಳೆಯೂ ಬಳಸಬಹುದು UPI; ಇಲ್ಲಿದೆ ʼಪೇಮೆಂಟ್‌ʼ ಮಾಡುವ ಸಂಪೂರ್ಣ ವಿವರ

ಭಾರತದಲ್ಲಿ ಸದ್ಯ UPI ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವಿಧಾನಗಳಲ್ಲಿ ಒಂದಾಗಿದೆ. ಇದು ವೇಗವಾದ ಪ್ರಕ್ರಿಯೆ. ಜೊತೆಗೆ ಅನುಕೂಲಕರ ಮತ್ತು ಸುರಕ್ಷಿತವಾಗಿದೆ. UPI ಐಡಿ ಅಥವಾ ಬ್ಯಾಂಕ್ ಖಾತೆ ಸಂಖ್ಯೆಯನ್ನು ಹೊಂದಿರುವ ಯಾರಿಗಾದರೂ ಹಣ ಪಾವತಿ  ಮಾಡಲು ಯುಪಿಐನಲ್ಲಿ ಬಳಕೆದಾರರಿಗೆ ಅವಕಾಶವಿದೆ.

ದೇಶೀಯ ಬಳಕೆಗಾಗಿ ಪ್ರಾರಂಭಿಸಲಾದ ಈ ವ್ಯವಸ್ಥೆಯು ಸದ್ಯ ಭಾರತದ ಅತ್ಯಂತ ಆದ್ಯತೆಯ ಪೇಮೆಂಟ್‌ ವಿಧಾನವಾಗಿ ಮಾರ್ಪಟ್ಟಿದೆ. ಈಗ ಯುಪಿಐಗೆ ವಿದೇಶಗಳಲ್ಲೂ ಬೇಡಿಕೆ ಹೆಚ್ಚುತ್ತಿದೆ. ಪ್ರಸ್ತುತ ಭಾರತೀಯ UPI ಅನ್ನು ಫ್ರಾನ್ಸ್, ಭೂತಾನ್, ನೇಪಾಳ, ಓಮನ್ ಮತ್ತು ಯುನೈಟೆಡ್‌ ಅರಬ್‌ ಎಮಿರೇಟ್ಸ್‌ ದೇಶಗಳಲ್ಲಿ ಬಳಸಬಹುದು.

UPI ಅನ್ನು ಅಂತಾರಾಷ್ಟ್ರೀಯವಾಗಿ ಸ್ವೀಕಾರಾರ್ಹಗೊಳಿಸಲು ಭಾರತ ಸರ್ಕಾರ ಮಲೇಷ್ಯಾ, ಥೈಲ್ಯಾಂಡ್, ಫಿಲಿಪೈನ್ಸ್, ಜಪಾನ್, ದಕ್ಷಿಣ ಕೊರಿಯಾ ಜೊತೆ ಒಪ್ಪಂದದಗಳಿಗೆ ಸಹಿ ಹಾಕಿದೆ. ಈ ಒಪ್ಪಂದಗಳ ಅಡಿಯಲ್ಲಿ, ಈ ದೇಶಗಳಲ್ಲಿ UPI ಪಾವತಿಗಳನ್ನು ಸ್ವೀಕರಿಸಲಾಗುತ್ತದೆ.

UPI ಪೇಮೆಂಟ್‌ ಅಪ್ಲಿಕೇಶನ್‌ಗಳನ್ನು ಬಳಸಲು ಅಂತರರಾಷ್ಟ್ರೀಯ ಪಾವತಿಗಳನ್ನು ಅನುಮತಿಸುವ UPI ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಕಾಗುತ್ತದೆ. ಭಾರತದಲ್ಲಿ, PhonePe, Paytm, Google Pay ಮತ್ತು Amazon Pay ಸೇರಿದಂತೆ ಅಂತರರಾಷ್ಟ್ರೀಯ ಪಾವತಿಗಳನ್ನು ಅನುಮತಿಸುವ ಹಲವಾರು UPI ಅಪ್ಲಿಕೇಶನ್‌ಗಳು ಲಭ್ಯವಿವೆ.

UPI ಪೇಮೆಂಟ್‌ ಅಪ್ಲಿಕೇಶನ್ ಅನ್ನು ಬಳಸಲು ನಿಮ್ಮ ಭಾರತೀಯ ಬ್ಯಾಂಕ್ ಖಾತೆಯನ್ನು ಅಪ್ಲಿಕೇಶನ್‌ಗೆ ಲಿಂಕ್ ಮಾಡಬೇಕಾಗುತ್ತದೆ. ಇದಕ್ಕಾಗಿ ಖಾತೆ ಸಂಖ್ಯೆ, IFSC ಕೋಡ್ ಮತ್ತು ನಾಮಿನೇಟರ್ ಹೆಸರು ಮುಂತಾದ ವಿವರಗಳನ್ನು ಒದಗಿಸಬೇಕು. ಒಮ್ಮೆ ಬ್ಯಾಂಕ್ ಖಾತೆಯನ್ನು ಅಪ್ಲಿಕೇಶನ್‌ಗೆ ಲಿಂಕ್ ಮಾಡಿದ ನಂತರ, UPI ಅನ್ನು ಸ್ವೀಕರಿಸುವ ವಿದೇಶದಲ್ಲಿರುವ ಯಾವುದೇ ಅಂಗಡಿ ಅಥವಾ ಸೇವಾ ಪೂರೈಕೆದಾರಿಗೆ ಪೇಮೆಂಟ್‌ ಮಾಡಬಹುದು. ಇದನ್ನು ಮಾಡಲು ಈ ಕೆಳಗಿನ ಹಂತಗಳನ್ನು ಅನುಸರಿಸಿ:

ಮೊದಲು ನಿಮ್ಮ UPI ಅಪ್ಲಿಕೇಶನ್ ತೆರೆಯಿರಿ.

“ಪೇ” ಟ್ಯಾಬ್ ಮೇಲೆ ಕ್ಲಿಕ್ ಮಾಡಿ.

“UPI” ಆಯ್ಕೆಯನ್ನು ಆಯ್ಕೆಮಾಡಿ.

ನಿಮ್ಮ UPI ಐಡಿಯನ್ನು ನಮೂದಿಸಿ.

ಪಾವತಿಸಬೇಕಾದ ಮೊತ್ತವನ್ನು ನಮೂದಿಸಿ.

ಪಾಸ್‌ವರ್ಡ್ ಅಥವಾ ಪಿನ್ ನಮೂದಿಸಿ.

“ಪಾವತಿಸು” ಬಟನ್ ಕ್ಲಿಕ್ ಮಾಡಿ.

UPI ಪಾವತಿಗಳನ್ನು ಮಾಡಲು ಫೋನ್‌ನಲ್ಲಿ ಇಂಟರ್ನೆಟ್‌ ಕನೆಕ್ಷನ್‌ ಇರಬೇಕು. Wi-Fi ಅಥವಾ ಮೊಬೈಲ್ ಡೇಟಾವನ್ನು ಬಳಸಬಹುದು. ವಿಶ್ವಾದ್ಯಂತ UPI ಅನ್ನು ಸ್ವೀಕಾರಾರ್ಹಗೊಳಿಸಲು ಭಾರತ ಸರ್ಕಾರ ಪ್ರಯತ್ನಿಸುತ್ತಿದೆ. ಯುಪಿಐ ಅನ್ನು ವಿಶ್ವದ ಅತ್ಯಂತ ಜನಪ್ರಿಯ ಡಿಜಿಟಲ್ ಪಾವತಿ ವೇದಿಕೆಯನ್ನಾಗಿ ಮಾಡುವ ಗುರಿ ಸರ್ಕಾರದ್ದು.

 

 

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...