ಉತ್ತರ ಪ್ರದೇಶದ ದೇವರಿಯಾ ಜಿಲ್ಲೆಯ ಬಾರೈ ಪಟ್ಟಿ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಅತ್ತೆ-ಮಾವ ಮತ್ತು ನಾದಿನಿಯಿಂದ ಸೊಸೆಯ ಮೇಲೆ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ವಿಡಿಯೋದಲ್ಲಿ, ಮಹಿಳೆಯು ಸಹಾಯಕ್ಕಾಗಿ ಮೊರೆಯಿಡುತ್ತಿರುವುದು ಮತ್ತು ಆಕೆಯ ಮೇಲೆ ದೊಣ್ಣೆಗಳಿಂದ ಹಲ್ಲೆ ನಡೆಸುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ಘಟನೆಗೆ ಸಂಬಂಧಿಸಿದಂತೆ, ಮಹಿಳೆಯ ಗಂಡನೊಂದಿಗೆ ಇದ್ದ ಜಗಳವೇ ಕಾರಣವೆಂದು ತಿಳಿದುಬಂದಿದೆ.
ವಿಡಿಯೋ ವೈರಲ್ ಆದ ನಂತರ, ಪೊಲೀಸರು ತನಿಖೆ ಆರಂಭಿಸಿದ್ದಾರೆ. ತಾರ್ಕುಲ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
Beating of the victim by her brother-in-law, mother-in-law and father-in-law.
(Deoria, U.P.)#Deoriapic.twitter.com/etg5gEr9Wl— Bawaali Shots (@BawaaliShots) March 1, 2025
थाना तरकुलवा क्षेत्रान्तर्गत ग्राम बरई पट्टी में एक पीड़िता को उसके देवर, सास व ससुर द्वारा मारने पीटने के सम्बन्ध में थाना तरकुलवा पर सुसंगत धाराओं में अभियोग पंजीकृत कर, गिरफ्तारी हेतु पुलिस टीम गठित किया गया। नियमानुसार विधिक कार्यवाही की जा रही है।
बाईट- #COCity_Deoria pic.twitter.com/F4jUXP3UIg— DEORIA POLICE (@DeoriaPolice) February 28, 2025