ನೋಯ್ಡಾ: ಸಾರ್ವಜನಿಕ ಉದ್ಯಾನವನದಲ್ಲಿ ಪ್ರೇಮಿಗಳಿಬ್ಬರು ಪರಸ್ಪರರ ಬಾಯಿಗೆ ನೀರು ಉಗುಳುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಉತ್ತರ ಪ್ರದೇಶದ ನೋಯ್ಡಾದಲ್ಲಿ ಈ ಘಟನೆ ನಡೆದಿದ್ದು, ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ವರ್ತಿಸಿದ್ದಕ್ಕೆ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ, ಪೊಲೀಸರ ಕಣ್ಣಿಗೂ ಬಿದ್ದಿದೆ. ಸಾರ್ವಜನಿಕ ಆವರಣದಲ್ಲಿ ಅಸಹ್ಯಕರವಾಗಿ ವರ್ತಿಸಿದ ಜೋಡಿ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಎಕ್ಸ್ ನಲ್ಲಿ ಪ್ರತಿಕ್ರಿಯಿಸಿದ ನೋಯ್ಡಾ ಡಿಸಿಪಿ, ಸೈಬರ್ ಸೆಲ್ ತಂಡವು ಈ ಜೋಡಿ ಯಾರೆಂದು ಗುರುತಿಸಲು ಹುಡುಕಾಟ ನಡೆಸುತ್ತಿದ್ದು, ಅವರ ವಿರುದ್ಧ ಸೂಕ್ತ ಕ್ರಮ ತೆಗೆದೊಳ್ಳಲಾಗುವುದು ಎಂದು ತಿಳಿಸಿದ್ರು. ಈ ಬಗ್ಗೆ ಪರಿಶೀಲಿಸಲು ಆಯಾ ಪೊಲೀಸ್ ಠಾಣೆಗೆ ಸೂಚಿಸಿದ ಅಧಿಕಾರಿ, ನೋಯ್ಡಾ ಸೆಕ್ಟರ್ 113 ರ ಸ್ಟೇಷನ್ ಇನ್‌ಚಾರ್ಜ್‌ಗೆ ಇಂತಹ ಪ್ರಕರಣಗಳ ಮೇಲೆ ನಿಗಾ ಇಡಲು ಸೂಚಿಸಿದ್ರು.
ನೋಯ್ಡಾದ ವೇದವನ ಪಾರ್ಕ್ ನಲ್ಲಿ ಜೋಡಿಗಳು ಅಸಭ್ಯವಾಗಿ ವರ್ತಿಸುತ್ತಿರುವುದನ್ನು ತೋರಿಸುವ ವಿಡಿಯೋ ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ಗೆಳತಿ ತನ್ನ ಗೆಳೆಯನ ಬಾಯಿಗೆ ನೀರು ಉಗುಳುವುದನ್ನು ಸೆರೆಹಿಡಿದಿದೆ. ಆತ ಕೂಡ ತನ್ನ ಗೆಳತಿಯ ಬಾಯಿಗೆ ನೀರು ಉಗುಳಿದ್ದಾನೆ.
ಸಾರ್ವಜನಿಕ ಸ್ಥಳಕ್ಕೆ ಮಹಿಳೆಯರು ಮತ್ತು ಮಕ್ಕಳು ಭೇಟಿ ನೀಡುವ ನಡುವೆ ಹಗಲು ಹೊತ್ತಿನಲ್ಲಿ ಈ ಘಟನೆ ನಡೆದಿದೆ. ಅಲ್ಲದೆ, ಉದ್ಯಾನವನವು ಧಾರ್ಮಿಕ ಮಹತ್ವವನ್ನು ಹೊಂದಿದ್ದರಿಂದ, ಇದು ಜನರ ಆಕ್ರೋಶಕ್ಕೆ ಕಾರಣವಾಯಿತು. ನೆಟ್ಟಿಗರು ಈ ಕೃತ್ಯವನ್ನು ಖಂಡಿಸಿದ್ದಾರೆ. ಇದು ಉದ್ಯಾನದ ಪಾವಿತ್ರ್ಯತೆ ಮತ್ತು ಪರಿಶುದ್ಧತೆಗೆ ಭಂಗ ತಂದಿದೆ ಎಂದು ನೆಟ್ಟಿಗರು ಕಿಡಿಕಾರಿದ್ದು, ಈ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
https://twitter.com/TheSquind/status/1719367858960921003?ref_src=twsrc%5Etfw%7Ctwcamp%5Etweetembed%7Ctwterm%5E1719367858960921003%7Ctwgr%5Eca8128cf8c4a25fa91ea8f7b48f2f9ded35bdc09%7Ctwcon%5Es1_&ref_url=https%3A%2F%2Fwww.freepressjournal.in%2Fviral%2Fup-news-noida-police-responds-to-viral-video-of-couple-spitting-water-into-each-others-mouth-at-ved-van-park