ಆಹಾರ ಸೇವಿಸಲು ಮುಂದಾದ ವಿದ್ಯಾರ್ಥಿಗೆ ಶಾಕ್: ವೆಜ್ ಗ್ರೇವಿಯಲ್ಲಿತ್ತು ಸತ್ತ ಇಲಿ

ಉತ್ತರ ಪ್ರದೇಶದ ಹಾಪುರ್ ನ ರಾಮ ವೈದ್ಯಕೀಯ ಕಾಲೇಜಿನಲ್ಲಿ ಬಡಿಸಿದ ಆಹಾರದಲ್ಲಿ ಸತ್ತ ಇಲಿ ಪತ್ತೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.

ಹಾಪುರ್‌ನಲ್ಲಿರುವ ಕಾಲೇಜಿನ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗಳು ಆಹಾರದ ತಯಾರಿಕೆಯಲ್ಲಿ ಗ್ರೇವಿಯೊಳಗೆ ‘ಇಲಿ’ ನೆನೆಸಿರುವುದನ್ನು ತಿಳಿದು ಅಸಹ್ಯಗೊಂಡಿದ್ದಾರೆ.

ಘಟನೆಯ ವಿಡಿಯೋವನ್ನು ಪತ್ರಕರ್ತರೊಬ್ಬರು ಹಂಚಿಕೊಂಡಿದ್ದು, ಈ ಬಗ್ಗೆ ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳ ಗಮನ ಸೆಳೆದಿದ್ದಾರೆ. ವಿಡಿಯೊದಲ್ಲಿ ಸತ್ತ ಇಲಿಯನ್ನು ತರಕಾರಿ ಆಧಾರಿತ ಗ್ರೇವಿಯಿಂದ ಹೊರಹಾಕಲಾಗಿದೆ. ಯುಪಿಯ ರಾಮಾ ಮೆಡಿಕಲ್ ಕಾಲೇಜಿನಲ್ಲಿ ಯಾವುದೇ ತರಕಾರಿಗಳಿಲ್ಲ. ಆದರೆ ಇಲಿಯನ್ನು ಬೇಯಿಸಲಾಗುತ್ತದೆ ಎಂದು ಹೇಳಲಾಗಿದೆ.

ಇದುವರೆಗೆ ಸಂಬಂಧಿತ ಶಿಕ್ಷಣ ಸಂಸ್ಥೆಯಿಂದ ಯಾವುದೇ ಪ್ರತಿಕ್ರಿಯೆಯಾಗಿಲ್ಲ. ಈ ಬಗ್ಗೆ ಯಾವುದೇ ಪೊಲೀಸ್ ಕ್ರಮದ ಬಗ್ಗೆ ವರದಿಯಾಗಿಲ್ಲ.

https://twitter.com/BagYusuf24/status/1672094192099803138

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read