ಮೊದಲ ರಾತ್ರಿಯಂದೇ ಪಕ್ಕದ ಮನೆಯವನ ಜೊತೆ ವಧು ಪರಾರಿ; ಕಂಗಾಲಾದ ವರ…!

ಉತ್ತರ ಪ್ರದೇಶದ ರಾಯ್ಬರೇಲಿಯಲ್ಲಿ ನಡೆದ ಘಟನೆಯೊಂದರಲ್ಲಿ ಮದುವೆಯ ಸಂಭ್ರಮಾಚರಣೆಯ ಕೆಲವೇ ಗಂಟೆಗಳಲ್ಲಿ ವಧು ನಿಗೂಢವಾಗಿ ನಾಪತ್ತೆಯಾಗಿದ್ದು, ಎರಡೂ ಕುಟುಂಬಗಳನ್ನು ಆಘಾತಕ್ಕೀಡು ಮಾಡಿದೆ.

ದಂಪತಿಗಳು ನವೆಂಬರ್ 2 ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ಆದರೆ ನವವಿವಾಹಿತೆ ಮೊದಲ ರಾತ್ರಿಯಂದು ನಿಗೂಢವಾಗಿ ಕಾಣೆಯಾಗಿದ್ದಾಳೆ.

ವಧು ಕಣ್ಮರೆಯಾದ ನಂತರ, ವರ ತನ್ನ ಕುಟುಂಬದೊಂದಿಗೆ ರಾತ್ರಿಯಿಡೀ ಅವಳನ್ನು ಹುಡುಕಿದರೂ ಅವರ ಪ್ರಯತ್ನಗಳು ಫಲಪ್ರದವಾಗಿರಲಿಲ್ಲ. ಮರುದಿನ, ಸತ್ಯ ಸಂಗತಿ ಬೆಳಕಿಗೆ ಬಂದಿದ್ದು, ವಧು ತನ್ನೂರಿನ ನೆರೆಮನೆಯಾತನ ಜೊತೆ ಓಡಿಹೋಗಿದ್ದಾಳೆ ಎಂಬುದು ಬಹಿರಂಗವಾಗಿದೆ. ಅಲ್ಲದೇ ಇಬ್ಬರು ಯುವಕರು ಆಕೆಗೆ ತಪ್ಪಿಸಿಕೊಳ್ಳಲು ಸಹಾಯ ಮಾಡಿದ್ದಾರೆ ಎಂದು ಹೇಳಲಾಗಿದೆ.

ವಧುವಿನ ಕುಟುಂಬವು ಆಕೆಯ ಕೃತ್ಯದಿಂದ ಮುಜುಗರಕ್ಕೊಳಗಾಗಿದ್ದು, ಎರಡೂ ಕುಟುಂಬಗಳು ಸ್ಥಳೀಯ ಪೊಲೀಸರಿಗೆ ಔಪಚಾರಿಕ ದೂರುಗಳನ್ನು ಸಲ್ಲಿಸಿದ್ದಾರೆ. ಜೈಸ್ ಪೊಲೀಸ್ ಠಾಣಾ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ಸಂಭವಿಸಿದ್ದು, ವಧು ತನ್ನ ಮದುವೆಯ ನಂತರ ಗಂಡನ ಮನೆಗೆ ಬಂದಿದ್ದಳು.

ವಧುವಿನ ತಂದೆಯ ಪ್ರಕಾರ, ಕುಟುಂಬವು ಆಕೆಯ ಇಚ್ಛೆಗೆ ವಿರುದ್ಧವಾಗಿ ಜೈಸ್‌ನ ಯುವಕನೊಂದಿಗೆ ಮದುವೆಯನ್ನು ಏರ್ಪಡಿಸಿತ್ತು, ಅವಳು ಪಕ್ಕದ ಮನೆಯಲ್ಲಿ ವಾಸಿಸುವ ಯುವಕನೊಂದಿಗೆ ಸಂಬಂಧ ಹೊಂದಿದ್ದು ತಿಳಿದ ಬಳಿಕವೂ ಮತ್ತೊಬ್ಬನೊಂದಿಗೆ ಅವರು ಮದುವೆ ಮಾಡಿದ್ದರು.

“ನಮ್ಮ ಮಗಳು ನೆರೆಮನೆಯಲ್ಲಿ ವಾಸಿಸುವ ಯುವಕನೊಂದಿಗೆ ಓಡಿಹೋಗಿದ್ದಾಳೆ, ಅವಳು ಆ ಹುಡುಗನೊಂದಿಗೆ ಸಂಬಂಧ ಹೊಂದಿದ್ದಳು, ಅದನ್ನು ನಾವು ಒಪ್ಪಲಿಲ್ಲ” ಎಂದು ಔಧುವಿನ ತಂದೆ ಹೇಳಿದ್ದಾರೆ. ಮದುವೆಯ ನಂತರ ನವೆಂಬರ್ 3 ರಂದು ಅಳಿಯ ಆಘಾತಕಾರಿ ಬೆಳವಣಿಗೆಯನ್ನು ತಿಳಿಸಿದ್ದು, ವಧುವಿನ ಗೆಳೆಯ ಕೂಡ ನಾಪತ್ತೆಯಾಗಿದ್ದಾನೆ ಎಂಬದು ಅನುಮಾನಕ್ಕೆ ಕಾರಣವಾಯಿತು ಎಂದು ತಂದೆ ವಿವರಿಸಿದ್ದಾರೆ.

ವಧು ನಾಪತ್ತೆಯಾದ ನಂತರ, ಪೊಲೀಸರು ಕ್ಷಿಪ್ರ ಕ್ರಮ ಕೈಗೊಂಡಿದ್ದು, ವಧು ಮತ್ತು ಆಕೆಯ ಪ್ರಿಯಕರ ಸೇರಿದಂತೆ ನಾಲ್ವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. “ನಾವು ವಧುವನ್ನು ಹುಡುಕಲು ಹಲವಾರು ಪೊಲೀಸ್ ತಂಡಗಳನ್ನು ರಚಿಸಿದ್ದೇವೆ” ಎಂದು ಹೇಳಿದ್ದು, ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read