ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳ ಸಂಖ್ಯೆ ಹೆಚ್ಚುತ್ತಿದೆ. ಕೆಲ ವಾಹನಗಳ ಬಗ್ಗೆ ದೂರುಗಳು ಬರುತ್ತಿವೆ. ಆದರೆ ಕನ್ನಡಿಗರೇ ಸೇರಿಕೊಂಡು ತಯಾರಿಸಿರುವ ಈ ಎಲೆಕ್ಟ್ರಿಕ್ ಬೈಕ್ ಒಮ್ಮೆ ಚಾರ್ಜ್ ಮಾಡಿದರೆ ಸಾಕು 323 ಕೀ.ಮೀ.ವರೆಗೂ ಕ್ರಮಿಸುತ್ತದೆ.
ಅಲ್ಟ್ರಾವಯೊಲೆಟ್ ಕಂಪನಿ ತಯಾರಿಸಿರುವ ಹೊಸ ಇವಿ ಬೈಕ್ ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಅತ್ಯಾಕರ್ಷಕ ವಿನ್ಯಾಸದೊಂದಿಗೆ, ಅಕರ್ಷಕ ಬೆಲೆಯಲ್ಲಿ ರೋಡಿಗಿಳಿದಿದೆ. ಶೀಘ್ರದಲ್ಲೇ ವಿದೇಶಗಳಿಗೂ ರಫ್ತಾಗಲಿದೆ. ಒಂದು ಬಾರಿ ಚಾರ್ಜ್ ಮಾಡಿದರೆ 323 ಕಿ.ವರೆಗೂ ಚಲಿಸುವ ಸಾಮರ್ಥ್ಯವನ್ನು ಹೊಂದಿದೆ.
ಈ ಬಗ್ಗೆ ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ವತಃ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಉದ್ಯಮಶೀಲ ಕನ್ನಡಿಗರು ಸೇರಿಕೊಂಡು ಸ್ಥಾಪಿಸಿರುವ ಅಲ್ಟ್ರಾವಯೊಲೆಟ್ ಕಂಪನಿಯ ನಿರ್ದೇಶಕ ನೀರಜ್ ರಾಜಮೋಹನ್ ಮತ್ತು ತಂಡದವರು ಈದಿನ ಬೆಂಗಳೂರಿನ ನಮ್ಮ ಗೃಹಕಚೇರಿಯಲ್ಲಿ ಭೇಟಿಮಾಡಿದರು. ಕಂಪೆನಿ ಉತ್ಪಾದಿಸಿರುವ ಇ.ವಿ. ಮೋಟಾರ್ ಸೈಕಲ್ ವೈಶಿಷ್ಟ್ಯಗಳನ್ನು ವಿವರಿಸಿದರು.
ಒಮ್ಮೆ ಚಾರ್ಜ್ ಮಾಡಿದರೆ 323 ಕಿ.ಮೀ ಚಲಾಯಿಸಬಹುದಾದ ಈ ಮೋಟಾರ್ ಸೈಕಲ್ಲುಗಳ ಬೆಲೆ ರೂ. 2.99 ಲಕ್ಷ ಗಳಾಗಿದ್ದು ಸ್ಥಳೀಯವಾಗಿ ಈಗಾಗಲೇ ಲಭ್ಯವಿದೆ. ಈ ಬೈಕ್ ಯೂರೋಪಿನ ಹಲವು ರಾಷ್ಟ್ರಗಳಿಗೆ ರಫ್ತು ಪ್ರಕ್ರಿಯೆ ಸೆ. 24ರಿಂದ ಆರಂಭವಾಗಲಿದೆ. ರಾಜ್ಯ ಸರ್ಕಾರದ ವತಿಯಿಂದ ಕಂಪೆನಿಯ ಅಭಿವೃದ್ಧಿಗೆ ಅಗತ್ಯದ ಎಲ್ಲ ಸಹಕಾರಗಳನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.