ಕೇಶ ಕಸಿ ಮಾಡಿಕೊಳ್ಳಲು ಹೋದ ಮಹಿಳೆ ಪಾಡು ಏನಾಯ್ತು ನೋಡಿ….!

ಕೂದಲು ಕಸಿಯಿಂದಾಗಿ ನನ್ನ ನೆತ್ತಿಗೆ ಹಾನಿ ಉಂಟಾಗಿದೆ. ಅಲ್ಲದೇ ಇದರಿಂದ ನಾನು ನನ್ನ ಕೂದಲನ್ನು ಕಳೆದುಕೊಂಡಿದ್ದೇನೆ ಎಂದು ಯುಕೆ ಯ ಮಹಿಳೆಯೊಬ್ಬರು ಆರೋಪಿಸಿದ್ದಾರೆ. ಶೌನಾ ಹಿಗ್ಗಿನ್ಸ್ ಎಂಬ ಮಹಿಳೆಯು ಫೇಸ್‌ಬುಕ್ ಪೋಸ್ಟ್‌ನಲ್ಲಿ, ತನ್ನ ಕೂದಲು ಉದುರುವ ಸಮಸ್ಯೆಗೆ ಕೇಶ ಕಸಿಗಾಗಿ ಲಂಡನ್‌ನ ಸಲೂನ್‌ಗೆ ಸುಮಾರು 1.39 ಲಕ್ಷ ಪಾವತಿಸಿದ್ದೆ. ಆದ್ರೆ ಈ ಕಸಿ ಮಾಡಿದ ನಂತರ ಬೋಳು ತಲೆಯಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ‌

ಸೆಲೂನ್ ನ ಮಾಲೀಕ ಮ್ಯಾಂಡಿ ಕಾಲಿನ್ಸ್ ಪ್ರಶಸ್ತಿ-ವಿಜೇತ ಹೇರ್ ಸ್ಟೈಲಿಸ್ಟ್ ಮತ್ತು ಕಸಿ ತಜ್ಞ ಎಂದು ಹೆಸರುವಾಸಿಯಾಗಿದ್ದರು. ಆದರೆ ಶೌನಾ ಹಿಗ್ಗಿನ್ಸ್ ಅವರಿಗೆ ಕೂದಲು ಕಸಿ ಪ್ರಕ್ರಿಯೆ ಪ್ರಾರಂಭಿಸಿದ ನಂತರ ಸಮಸ್ಯೆಗಳು ಉದ್ಭವಿಸಿದವು ಎಂದು ಹೇಳಲಾಗಿದೆ.

ಈ ದುಬಾರಿ ಬೆಲೆಯ ಕೂದಲು ಕಸಿ, ಕೂದಲು ಉದುರುವಿಕೆಗೆ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ ಎಂದು ಸೆಲೂನ್ ಮಾಲೀಕ ಕಾಲಿನ್ಸ್ ಭರವಸೆ ನೀಡಿದ್ದರು. ಹೀಗಾಗಿ ಚಿಕಿತ್ಸೆಯ ಮೊದಲು ಸಂಪೂರ್ಣ ಪಾವತಿಯನ್ನು ಮಾಡಿದ್ದೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ.

ಹಿಗ್ಗಿನ್ಸ್ ತನ್ನ ಫೇಸ್‌ಬುಕ್ ಪೇಜ್​ನಲ್ಲಿ ನೆತ್ತಿಯಿಂದ ಕೂದಲು ಉದುರುವುದನ್ನು ತೋರಿಸುವ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಅವರು ಕಾಲಿನ್ಸ್‌ರನ್ನು ಭೇಟಿಯಾದಾಗ ಪರ್ಯಾಯ ವಿಧಾನವನ್ನು ಬಳಸಿಕೊಂಡು ಸಮಸ್ಯೆಗಳನ್ನು ಪರಿಹರಿಸಲು ಮತ್ತಷ್ಟು ಹಣ ಕೇಳಿದ್ದಾರೆ. ಒಂದೊಂದೆ ಚಿಕಿತ್ಸೆ ಪ್ರಾರಂಭಿಸಿದಂತೆ ಕೂದಲು ಉದುರಲು ಆರಂಭವಾಯಿತು. ನಂತರ ನನ್ನ ನೆತ್ತಿಯಲ್ಲಿ ರಕ್ತಸ್ರಾವ ಮತ್ತು ಗುಳ್ಳೆ ಪ್ರಾರಂಭವಾಯಿತು ಎಂದು ಮಹಿಳೆ ಹೇಳಿದ್ದಾರೆ. ನಾಲ್ಕು ವಾರಗಳ ನಂತರ, ಮಿಸ್ ಹಿಗ್ಗಿನ್ಸ್ ತನ್ನ ನೆತ್ತಿಯಲ್ಲಿ ಗುಳ್ಳೆಗಳು ಮತ್ತು ರಕ್ತದಿಂದ ಆವೃತವಾದಾಗ ಸಮಸ್ಯೆ ಇನ್ನಷ್ಟು ಹೆಚ್ಚಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಕೂಡಲೇ ಮಹಿಳೆ  ಚರ್ಮರೋಗ ವೈದ್ಯರ ಸಂಪರ್ಕ ಮಾಡಿದ್ದಾರೆ, ಅವರು ಕೂದಲು ಕಸಿ ಚಿಕಿತ್ಸೆಯಿಂದ ನೆತ್ತಿಗೆ ಸಾಕಷ್ಟು ಹಾನಿಯನ್ನುಂಟಾಗಿದೆ ಎಂದು ತಿಳಿಸಿದರು. ಇನ್ನು ಈ ಗಾಯ ಮತ್ತು ಆದ ಅವಮಾನಕ್ಕೆ ಮಹಿಳೆ ಸೆಲೂನ್ ಮಾಲೀಕ ಕಾಲಿನ್ಸ್‌ನಿಂದ ಮರುಪಾವತಿಗೆ ಬೇಡಿಕೆಯಿಟ್ಟಾಗ, ಹೊಸ ಕೂದಲಿನ ವ್ಯವಸ್ಥೆ ನೀಡುತ್ತೇವೆ ಎಂದರು. ಆದ್ರೆ ನನ್ನಲ್ಲಿ ಕೂದಲು ಉಳಿದಿಲ್ಲದಿರುವಾಗ ನಾನು ಅದನ್ನು ಹೇಗೆ ಬಳಸಬಹುದು ಎಂದು ಮಹಿಳೆ ಪ್ರಶ್ನಿಸಿದರು. ಆದ್ರೆ ಮಹಿಳೆಯ ಮನವಿಗಳನ್ನು ಸೆಲೂನ್ ಮಾಲೀಕರು ನಿರ್ಲಕ್ಷಿಸಿದರು. ಹೀಗಾಗಿ ತನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡ ಮಹಿಳೆಯು ಈ ಸಲೂನ್​ನಿಂದ ಎಚ್ಚರದಿಂದಿರಿ ಎಂದು ಸಲಹೆ ನೀಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read