
ಯುಜಿನೀಟ್ 2024ರ ವೈದ್ಯಕೀಯ ಮಾಪ್ ಅಪ್ ಸುತ್ತಿನಲ್ಲಿ ವೈದ್ಯಕೀಯ ಸೀಟು ಹಂಚಿಕೆಯಾದ ಅಭ್ಯರ್ಥಿಗಳು ಶುಲ್ಕ ಪಾವತಿಯ ನಂತರ ನೇರವಾಗಿ ಸಂಬಂಧಿಸಿದ ಕಾಲೇಜಿನಲ್ಲಿ ಪ್ರವೇಶ ಪಡೆಯುವುದು.
ಮೂಲ ರಾಖಲೆಗಳನ್ನು ಪ್ರವೇಶಾತಿ ಪಡೆಯುವ ಸಂದರ್ಭದಲ್ಲಿ ಆಯಾ ಕಾಲೇಜಿನಲ್ಲಿಯೇ ಸಲ್ಲಿಸತಕ್ಕದ್ದು. ಈ ಮೊದಲು ತಿಳಿಸಿದಂತೆ 21-10-2024 ರಂದು ಮೂಲ ದಾಖಲೆಗಳನ್ನು ಸಲ್ಲಿಸಲು ಕೆಇಎ ಇಲ್ಲಿಗೆ ಬರುವಂತಿಲ್ಲ.
ಅಭ್ಯರ್ಥಿಗಳು ದಿನಾಂಕ 22-10-2024 ರ ವರೆಗೆ ಶುಲ್ಕ ಪಾವತಿಸಿ ಕಾಲೇಜಿನಲ್ಲಿ ಪ್ರವೇಶ ಪಡೆಯಬಹುದಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ) ಕಾರ್ಯನಿರ್ವಾಹಕ ನಿರ್ದೇಶಕರು ತಿಳಿಸಿದ್ದಾರೆ.
ಸಹಾಯವಾಣಿ: 080-23 460 460, ದೂರವಾಣಿ: 080-23 564 583, ವೆಬ್‌ಸೈಟ್: http://kea.kar.nic.in
