ಮತ್ತೊಂದು ಪೈಶಾಚಿಕ ಕೃತ್ಯ: ಬಲವಂತವಾಗಿ ಮೂತ್ರ ಕುಡಿಸಿ ಖಾಸಗಿ ಭಾಗಕ್ಕೆ ಮೆಣಸಿಕಾಯಿ ಉಜ್ಜಿ ವಿಕೃತಿ

ಸಿದ್ಧಾರ್ಥನಗರ: ಉತ್ತರ ಪ್ರದೇಶದ ಸಿದ್ಧಾರ್ಥನಗರ ಜಿಲ್ಲೆಯಲ್ಲಿ ಇಬ್ಬರು ಅಪ್ರಾಪ್ತ ಬಾಲಕರಿಗೆ ಮೂತ್ರ ಕುಡಿಸಿ, ಅವರ ಗುದದ್ವಾರದಲ್ಲಿ ಹಸಿಮೆಣಸಿನಕಾಯಿಯನ್ನು ಉಜ್ಜಿದ ಘಟನೆ ನಡೆದಿದೆ.

ಕಳ್ಳತನದ ಶಂಕೆಯ ಮೇಲೆ 10 ಮತ್ತು 15 ವರ್ಷದ ಬಾಲಕರ ಮೇಲೆ ದೌರ್ಜನ್ಯ ನಡೆಸಲಾಗಿದೆ. ಘಟನೆಯ ವಿಡಿಯೋಗಳು ಜಾಲತಾಣಗಳಲ್ಲಿ ಹರಿದಾಡಿವೆ. ಬಾಟಲಿಯಲ್ಲಿ ತುಂಬಿದ ಮೂತ್ರ ಸೇವಿಸುವುದು ವಿಡಿಯೋದಲ್ಲಿ ಕಂಡು ಬಂದಿದೆ. ಪುರುಷರ ಗುಂಪು ಅವರನ್ನು ನಿಂದಿಸುವುದನ್ನು ಮತ್ತು ಅದನ್ನು ಅನುಸರಿಸದಿದ್ದರೆ ಅವರನ್ನು ಥಳಿಸುವುದಾಗಿ ಬೆದರಿಕೆ ಹಾಕುತ್ತಿರುವುದು ಕೇಳಿಬರುತ್ತಿದೆ.

ಹಣ ದೋಚಿದ್ದಾರೆ ಎಂದು ಆರೋಪಿಸಿ ಗೂಂಡಾಗಳು ಹುಡುಗರನ್ನು ಹಿಡಿದು ಕಟ್ಟಿ ಹಾಕಿದ್ದಾರೆ ಎನ್ನಲಾಗಿದೆ.

ಹುಡುಗರ ಕೈಗಳನ್ನು ಬೆನ್ನಿನ ಹಿಂದೆ ಕಟ್ಟಿ ಪ್ಯಾಂಟ್ ಕೆಳಕ್ಕೆ ಎಳೆದು ನೆಲದ ಮೇಲೆ ಮಲಗಿಸಲಾಗಿದ್ದು, ಒಬ್ಬ ವ್ಯಕ್ತಿ ಅವರ ಗುದದ್ವಾರದಲ್ಲಿ ಹಸಿರು ಮೆಣಸಿನಕಾಯಿಯನ್ನು ಉಜ್ಜುತ್ತಾನೆ ನೋವಿನಿಂದ ಚೀರಾಡುತ್ತಿದ್ದ ಹುಡುಗರಿಗೆ ಚಿತ್ರಹಿಂಸೆ ನೀಡಲಾಗಿದೆ.

ಆಗಸ್ಟ್ 4 ರಂದು ಚಿತ್ರೀಕರಿಸಲಾದ ವಿಡಿಯೋ ಪತ್ರಾ ಬಜಾರ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಂಕಟಿ ಚೌರಾಹಾ ಬಳಿಯ ಅರ್ಶನ್ ಚಿಕನ್ ಶಾಪ್‌ನಿಂದ ಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ಆಕ್ಷೇಪಾರ್ಹ ಕೃತ್ಯದ ವಿಡಿಯೋ ಗಮನಕ್ಕೆ ಬಂದ ಕೂಡಲೇ ಪ್ರಕರಣ ದಾಖಲಿಸಿದ್ದೇವೆ. ಹಲ್ಲೆ ನಡೆಸಿದವರನ್ನು ಗುರುತಿಸಲಾಗಿದ್ದು, ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿದ್ಧಾರ್ಥ ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read