ಬ್ರೆಜಿಲ್‌ನ ಆಗ್ನೇಯ ಭಾಗದ ಕರಾವಳಿ ಪ್ರದೇಶಗಳಲ್ಲಿ ಭಾರೀ ಮಳೆಯು ಪ್ರವಾಹ ಮತ್ತು ಭೂಕುಸಿತಕ್ಕೆ ಕಾರಣವಾಗಿದ್ದು, ಕನಿಷ್ಠ 24 ಜನರು ಸಾವನ್ನಪ್ಪಿದ್ದಾರೆ. ನೂರಾರು ಜನ ಸ್ಥಳಾಂತರಗೊಂಡಿದ್ದಾರೆ.
ರಕ್ಷಣಾ ಕಾರ್ಯಕರ್ತರು ಕಾರ್ಯಾಚರಣೆ ಮುಂದುವರೆಸಿದ್ದು, ರಸ್ತೆ ಸಂಪರ್ಕ ಕಡಿತವಾಗಿರುವುದರಿಂದ ಸಂಕಷ್ಟ ಎದುರಾಗಿದೆ. ಬ್ರೆಜಿಲ್‌ನ ಕಾರ್ನೀವಲ್ ಆಚರಣೆಗಳಿಗಾಗಿ ಬಂದಿದ್ದ ಅಸಂಖ್ಯಾತ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬ್ರೆಜಿಲ್‌ನ ಶ್ರೀಮಂತ ರಾಜ್ಯದ ಕರಾವಳಿಯಲ್ಲಿ 600 ಮಿಲಿಮೀಟರ್‌ಗಳಿಗಿಂತ ಹೆಚ್ಚು(23.62 ಇಂಚು) ಮಳೆ ಸುರಿದ ನಂತರ ಸಾವೊ ಪಾಲೊ ರಾಜ್ಯ ಸರ್ಕಾರವು 19 ಸಾವುಗಳ ಬಗ್ಗೆ ಮಾಹಿತಿ ನೀಡಿದೆ.
ಸಾವೊ ಪಾಲೊದ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆಯು ಮುಂದುವರಿಯುತ್ತದೆ ಎಂದು ಹವಾಮಾನ ಮುನ್ಸೂಚನೆ ನೀಡಲಾಗಿದ್ದು, ರಕ್ಷಣಾ ಕಾರ್ಯಕರ್ತರಿಗೆ ಸವಾಲು ಎದುರಾಗಿದೆ. ಮತ್ತು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ.
ಸಂತ್ರಸ್ತರಿಗೆ ಸಹಾಯ ಮಾಡಲು, ಮೂಲಸೌಕರ್ಯವನ್ನು ಪುನಃಸ್ಥಾಪಿಸಲು ಮತ್ತು ಪುನರ್ನಿರ್ಮಾಣ ಕಾರ್ಯವನ್ನು ಪ್ರಾರಂಭಿಸಲು ಹಲವಾರು ಸಚಿವಾಲಯಗಳ ಸಜ್ಜುಗೊಳಿಸುವಿಕೆಯನ್ನು ಫೆಡರಲ್ ಸರ್ಕಾರವು ನಿರ್ಧರಿಸಿದೆ.