ಟ್ವಿಟ್ ಬಳಕೆದಾರರೊಬ್ಬರು ತಮ್ಮ ಮೃತ ತಾಯಿಯ ಬಗ್ಗೆ ಹೃದಯ ಸ್ಪರ್ಶಿಸುವ ಕಥೆಯನ್ನು ಹಂಚಿಕೊಂಡಿದ್ದು, ಇದು ನೆಟ್ಟಿಗರನ್ನು ಭಾವುಕರಾಗಿಸುತ್ತದೆ. ಪ್ಲೇಟ್‌ನಂತೆ ಕಾಣುವ ಫೋಟೋವನ್ನು ಹಂಚಿಕೊಂಡ ವಿಕ್ರಮ್ ಎಸ್ ಬುದ್ಧನೇಶನ್ ಎನ್ನುವವರು ಇದು ತಮ್ಮ ತಾಯಿಗೆ ಹೇಗೆ ವಿಶೇಷವಾಗಿತ್ತು ಎನ್ನುವುದನ್ನು ಬರೆದಿದ್ದಾರೆ.
ಅಮ್ಮ ತಿನ್ನುವ ತಟ್ಟೆಯ ಬಗ್ಗೆ ಭಾವುಕರಾಗಿ ಬರೆದುಕೊಂಡಿದ್ದಾರೆ. “ಇದು ಅಮ್ಮನ ತಟ್ಟೆ. ಕಳೆದ 2 ದಶಕಗಳಿಂದ ಅಮ್ಮ ಇದರಲ್ಲಿ ತಿನ್ನುತ್ತಿದ್ದರು. ಇದು ಒಂದು ಸಣ್ಣ ತಟ್ಟೆ. ಇದು ಆಕೆಗೆ ಪಂಚ ಪ್ರಾಣ. ಅಪ್ಪಿ ತಪ್ಪಿಯೂ ಇದನ್ನು ನನಗಾಗಲೀ, ನನ್ನ ಪತ್ನಿ ಶ್ರುತಿಗಾಗಲೀ ಅದರಲ್ಲಿ ತಿನ್ನಲು ಕೊಡುತ್ತಿರಲಿಲ್ಲ. ಸದಾ ಆಕೆ ಅದನ್ನು ತಮ್ಮ ಬಳಿಯೇ ಇಟ್ಟುಕೊಳ್ಳುತ್ತಿದ್ದರು ಎಂದಿದ್ದಾರೆ.
ಈ ಪ್ಲೇಟ್ನ ಮಹತ್ವವನ್ನೂ ಬರೆದಿರುವ ಅವರು, ಈ ಪ್ಲೇಟ್ ನಾನು 7ನೇ ಕ್ಲಾಸ್ನಲ್ಲಿ ಗೆದ್ದ ಬಹುಮಾನ. ಅಂದಿನಿಂದ ಇಂದಿನವರೆಗೂ ಈ 24 ವರ್ಷಗಳಲ್ಲಿ ಅವಳು ನನ್ನಿಂದ ಗೆದ್ದ ಈ ತಟ್ಟೆಯಿಂದ ಆಹಾರವನ್ನು ಸೇವಿಸಿದ್ದಳು. ಇದನ್ನು ಯಾರೂ ಮುಟ್ಟಬಾರದು ಎಂದೂ ಹೇಳುತ್ತಿದ್ದಳು ಎಂದು ಬರೆದುಕೊಂಡಿದ್ದಾರೆ. ಇದನ್ನು ಕೇಳಿ ಅನೇಕರು ಭಾವುಕರಾಗಿದ್ದಾರೆ. “ತಾಯಿಯ ಪ್ರೀತಿ, ಎಂದಿಗೂ ಯೋಚಿಸಲಾಗದ ಆದರೆ ಹೋಲಿಸಲಾಗದ್ದು ” ಎಂದಿದ್ದಾರೆ.