ಈ ಚಿತ್ರಗಳಲ್ಲಿರುವವರು ಕಮಲಹಾಸನ್‌ ಅಂದ್ರೆ ನೀವು ನಂಬಲೇಬೇಕು….!

ಡಿಜಿಟಲ್​ನ ಈ ಯುಗದಲ್ಲಿ ನಮ್ಮ ಒರಿಜಿನಲ್​ ಮುಖವನ್ನು ಬೇಕಾದ ರೀತಿಯಲ್ಲಿ ತಿರುಚಿ, ತಿದ್ದಿ ತೀಡಿ ಪೋಸ್ಟ್​ ಮಾಡಬಹುದು. ಸಾಮಾಜಿಕ ಜಾಲತಾಣದಲ್ಲಿ ಅದರಲ್ಲಿಯೂ ಹೆಚ್ಚಾಗಿ ಫೇಸ್​ಬುಕ್​ನಲ್ಲಿ ತಮ್ಮ ಫೋಟೋ ಹಾಕುವವರು ಅದನ್ನು ಎಡಿಟ್​ ಮಾಡಿ ಸುಂದರಗೊಳಿಸಿ ಹಾಕುವುದು ಹೆಚ್ಚು. ಇದು ಈಗ ದೊಡ್ಡ ಕೆಲಸವೇನಲ್ಲ. ಇದಕ್ಕಾಗಿಯೇ ಹತ್ತಾರು ಆ್ಯಪ್​ಗಳು ಕೂಡ ಕೆಲಸ ಮಾಡುತ್ತವೆ.

ಒಂದೇ ಒಂದು ಕ್ಲಿಕ್​ನಲ್ಲಿ ನಮ್ಮ ಮುಖವನ್ನು ಹೇಗೆ ಬೇಕಾದರೂ ಬದಲಿಸಬಹುದು. ಆದರೆ ಚಿತ್ರರಂಗದಲ್ಲಿ? ಅದೂ ದಶಕಗಳ ಹಿಂದೆ ಹೀಗೆಯೇ ಮಾಡುವುದು ಸಾಧ್ಯವಿತ್ತೆ?

ಹೌದು ಎನ್ನುತ್ತದೆ ಈಗ ವೈರಲ್​ ಆಗುತ್ತಿರುವ ಈ ಫೋಟೋಗಳು. ಚಿತ್ರಗಳನ್ನು ಎಡಿಟ್​ ಮಾಡುವಷ್ಟು ಸುಲಭವಲ್ಲ ನಮ್ಮ ಮುಖವನ್ನು ನಿಜವಾಗಿಯೂ ಅದೇ ರೂಪದಲ್ಲಿ ಬಣ್ಣ ಹಚ್ಚುವುದು. ಆದರೆ ಕೆಲವು ನಟ – ನಟಿಯರು ತಮ್ಮ ಪಾತ್ರಕ್ಕೆ ತಕ್ಕಂತೆ ಗಂಟೆಗಟ್ಟಲೆ ಕೂತು ಮುಖಚಹರೆಯನ್ನು ಬದಲಿಸಿಕೊಂಡಿದ್ದಾರೆ. ಇವರ ಸಾಲಿನಲ್ಲಿ ಘಟಾನುಘಟಿ ನಟ-ನಟಿಯರು ಸೇರಿದ್ದಾರೆ. ಎಷ್ಟೋ ತಿಂಗಳು ಪ್ರತಿದಿನವೂ ತಮ್ಮ ಪಾತ್ರಕ್ಕೆ ತಕ್ಕಂತೆ ಮೇಕ್​ ಓವರ್​ ಮಾಡಿಕೊಳ್ಳಲು ಎಷ್ಟೋ ಗಂಟೆ ಶ್ರಮ ಪಟ್ಟವರೂ ಇದ್ದಾರೆ.

ಅಂಥವರಲ್ಲಿ ಒಬ್ಬರು ನಟ ಕಮಲ ಹಾಸನ್​. ಅವರು ಬೇರೆಬೇರೆ ಚಿತ್ರಗಳಲ್ಲಿ ಭಿನ್ನಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಹಲವು ಚಿತ್ರಗಳಲ್ಲಿ ಇವರು ಕಮಲ್​ ಹಾಸನ್​ ಎಂದು ಗುರುತಿಸುವುದೇ ಕಷ್ಟ. ಆ ರೀತಿಯಲ್ಲಿ ಮೇಕಪ್​ ಮಾಡಲಾಗಿದೆ. ಅವರ ಎಲ್ಲಾ ವೇಷಗಳನ್ನು ಒಂದೆಡೆ ಕಲೆ ಹಾಕಲಾಗಿದ್ದು, ಅದೀಗ ವೈರಲ್​ ಆಗುತ್ತಿದೆ. ಇದೇ ರೀತಿಯ ಯಾವುದಾದರೂ ನಟರು ಇದ್ದರೆ ಹೇಳಿ ಎಂದು ತಿಳಿಸಲಾಗುತ್ತಿದ್ದು, ಕೆಲವರು ಕಂಗನಾ ರಣಾವತ್​ ಫೋಟೋ ಶೇರ್​ ಮಾಡಿದ್ದಾರೆ. ಜೊತೆಗೆ ಹಲವಾರು ಚಿತ್ರತಾರೆಯರ ಫೋಟೋಗಳು ಶೇರ್​ ಆಗುತ್ತಿವೆ.

https://twitter.com/jammypants4/status/1626625859640766464?ref_src=twsrc%5Etfw%7Ctwcamp%5Etweetembed%7Ctwterm%5E1626625859640766464%7Ctwgr%5E8925229ab06908151350a793cf39ac50ac80e98b%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-user-asks-for-craziest-indian-movie-transformations-for-a-role-and-responses-are-endless-7118497.html

https://twitter.com/Kameshwari93/status/1626642553704701953?ref_src=twsrc%5Etfw%7Ctwcamp%5Etweetembed%7Ctwterm%5E1626642553704701953%7Ctwgr%5E8925229ab06908151350a793cf39ac50ac80e98b%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-user-asks-for-craziest-indian-movie-transformations-for-a-role-and-responses-are-endless-7118497.html

https://twitter.com/DonalBishtt/status/1626735200884625411?ref_src=twsrc%5Etfw%7Ctwcamp%5Etweetembed%7Ctwterm%5E1626735200884625411%7Ctwgr%5E8925229ab06908151350a793cf39ac50ac80e98b%7Ctwcon%5Es1_&ref_url=https%3A%2F%2Fwww.news18.com%2Fbuzz%2Ftwitter-user-asks-for-craziest-indian-movie-transformations-for-a-role-and-responses-are-endless-7118497.html

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read