ಟರ್ಕಿಯಲ್ಲಿ ಭೀಕರ ಭೂಕಂಪ ಸಂಭವಿಸಿದ 5 ದಿನದ ಬಳಿಕ ಪವಾಡಸದೃಶ ರೀತಿಯಲ್ಲಿ 2 ತಿಂಗಳ ಹಸುಗೂಸನ್ನ ಅವಶೇಷಗಳಡಿಯಿಂದ ಸುರಕ್ಷಿತವಾಗಿ ರಕ್ಷಿಸಲಾಗಿದೆ.
ಟರ್ಕಿ ಮತ್ತು ಸಿರಿಯಾದಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದ ಸುಮಾರು ಐದು ದಿನಗಳ ನಂತರ, ಶನಿವಾರ ಟರ್ಕಿಯ ಹಟಾಯ್‌ನಲ್ಲಿ ಎರಡು ತಿಂಗಳ ಮಗುವನ್ನು ಅವಶೇಷಗಳಡಿಯಿಂದ ರಕ್ಷಿಸಲಾಗಿದೆ.
“ಮಗು ಪ್ರಾಣಾಪಾಯದಿಂದ ಪಾರಾಗಿದೆ ಮತ್ತು ತಕ್ಷಣ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು” ಎಂದು ಅನಾಡೋಲು ಏಜೆನ್ಸಿ ಟ್ವೀಟ್ ಮಾಡಿದೆ.
ಸೋಮವಾರದ ಮಾರಣಾಂತಿಕ ಭೂಕಂಪದ ನಂತರ ಟರ್ಕಿ ಮತ್ತು ಸಿರಿಯಾದಲ್ಲಿ ಸಾವಿನ ಸಂಖ್ಯೆ 28,000 ಕ್ಕೆ ಏರಿದೆ. ಆಗ್ನೇಯ ಟರ್ಕಿಯಲ್ಲಿ ಸಂಭವಿಸಿದ ಭೀಕರ ಭೂಕಂಪಗಳಲ್ಲಿ ಕನಿಷ್ಠ 24,617 ಜನರು ಸಾವನ್ನಪ್ಪಿದ್ದಾರೆ ಎಂದು ಟರ್ಕಿಯ ಉಪಾಧ್ಯಕ್ಷ ಫುಟ್ ಒಕ್ಟೇ ಹೇಳಿದ್ದಾರೆ. ಸಿರಿಯಾದಲ್ಲಿ 3,500 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.
ವಿನಾಶಕಾರಿ ಸ್ಥಿತಿಯ ನಡುವೆಯೂ ಪ್ರಪಂಚದಾದ್ಯಂತದ ಧಾವಿಸಿದ ರಕ್ಷಣಾ ತಂಡಗಳು ಬದುಕಿರುವ ಜೀವಗಳನ್ನು ಉಳಿಸುವ ಪ್ರಯತ್ನದಲ್ಲಿವೆ.
https://twitter.com/anadoluagency/status/1624367981374349312?ref_src=twsrc%5Etfw%7Ctwcamp%5Etweetembed%7Ctwterm%5E1624367981374349312%7Ctwgr%5E4428ad10c5096228c13c1495e6175b3d6cb9539c%7Ctwcon%5Es1_&ref_url=https%3A%2F%2Fwww.businesstoday.in%2Flatest%2Fworld%2Fstory%2Fturkey-earthquake-2-month-old-baby-found-alive-in-rubble-after-128-hours-of-the-deadly-disaster-369912-2023-02-12
https://twitter.com/anadoluagency/status/1624539610423480321?ref_src=twsrc%5Etfw%7Ctwcamp%5Etweetembed%7Ctwterm%5E1624539610423480321%7Ctwgr%5E4428ad10c5096228c13c1495e6175b3d6cb9539c%7Ctwcon%5Es1_&ref_url=https%3A%2F%2Fwww.businesstoday.in%2Flatest%2Fworld%2Fstory%2Fturkey-earthquake-2-month-old-baby-found-alive-in-rubble-after-128-hours-of-the-deadly-disaster-369912-2023-02-12