
ತುಮಕೂರು: 19 ವರ್ಷಗಳ ಬಳಿಕ ನಕ್ಸಲ್ ಕೊತ್ತಗೆರೆ ಶಂಕರನನ್ನು ಪೊಲೀಸರು ಬಂಧಿಸಿದ್ದಾರೆ.
ತುಮಕೂರು ಮತ್ತು ಬೆಂಗಳೂರು ಆಂತರಿಕ ಭದ್ರತಾ ವಿಭಾಗ ಹಾಗೂ ಸಿಐ ತಂಡ ನಕ್ಸಲ್ ಶಕರನನ್ನು ಬಂಧಿಸಿದೆ. 2005ರಲ್ಲಿ ತುಮಕೂರು ಜಿಲ್ಲೆಯ ಪಾವಗಡ ತಾಲೂಕಿನ ವೆಂಕಟಮ್ಮನಹಳ್ಳಿಯಲ್ಲಿ ಪೊಲೀಸ್ ಕ್ಯಾಂಪ್ ಮೇಲೆ 300 ನಕ್ಸಲರು ಹ್ಯಾಂಡ್ ಗ್ರೆನೇಡ್ ನೊಂದಿಗೆ ದಾಳಿ ನಡೆಸಿದ್ದರು. 7 ಪೊಲಿಸ್ ಅಧಿಕಾರಿಗಳು ಸೇರಿ ಖಾಸಗಿ ಬಸ್ ಕ್ಲೀನರ್ ಮೃತಪಟ್ಟಿದ್ದರು.
ದಾಳಿಯಲ್ಲಿ ಐವರು ಪೊಲೀಸ್ ಸಿಬ್ಬಂದಿ ಗಂಭಿರವಾಗಿ ಗಾಯಗೊಂಡಿದ್ದರು. ಈ ಪ್ರಕರಣ ಸಂಬಂಧ ಇದೀಗ ನಕ್ಸಲ್ ಶಂಕರನ್ನು ಬಂಧಿಸಲಾಗಿದೆ.