
ತಿರುಪತಿ: ತಿರುಪತಿ ತಿರುಮಲ ದೇವಸ್ಥಾನಂ ಸಮಿತಿ -ಟಿಟಿಡಿ ಅಧೀನದಲ್ಲಿರುವ ಪುಷ್ಕರಣಿಯಲ್ಲಿ ಚರ್ಚ್ ನವರು ಮತಾಂತರ ಚಟುವಟಿಕೆ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಿಸಲಾಗಿದೆ.
ಟಿಟಿಡಿ ಅಧೀನದಲ್ಲಿರುವ ಯಾವುದೇ ದೇವಾಲಯಗಳು, ಪುಷ್ಕರಣೆಯಲ್ಲಿ ಅನ್ಯಧರ್ಮದ ಚಟುವಟಿಕೆಗಳಿಗೆ ನಿಷೇಧವಿದೆ. ಹೀಗಿರುವ ಸಂದರ್ಭದಲ್ಲಿ ಚಿತ್ತೂರು ಜಿಲ್ಲೆಯ ಕಾರವೇಟಿನಗರದಲ್ಲಿರುವ ವೇಣುಗೋಪಾಲ ಸ್ವಾಮಿ ದೇವಾಲಯದ ಪುಷ್ಕರಣೆಯಲ್ಲಿ ಕ್ರಿಶ್ಚಿಯನ್ನರು ಮತಾಂತರ ಪ್ರಕ್ರಿಯೆ ನಡೆಸಿದ್ದಾರೆ ಎಂದು ಟಿಟಿಡಿ ಮಾಜಿ ಸದಸ್ಯ ಜಿ. ಭಾನುಪ್ರಕಾಶ್ ರೆಡ್ಡಿ ಆರೋಪಿಸಿದ್ದರು. ಟಿಟಿಡಿ ಮತಾಂತರ ನಡೆದ ಬಗ್ಗೆ ಪರಿಶೀಲನೆ ಬಳಿಕ ದೂರು ದಾಖಲಿಸಿದೆ.