ಸ್ಪೋರ್ಟ್ಸ್ ಬೈಕ್ ತಯಾರಕರು ಬಜಾಜ್ ಸಹಭಾಗಿತ್ವದಲ್ಲಿ ಟ್ರಯಂಫ್ ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಅನ್ನು ಪರಿಚಯಿಸಿದಾಗಿನಿಂದ, ಇದು ಭಾರತದಲ್ಲಿ ದ್ವಿಚಕ್ರ ವಾಹನ ವಿಭಾಗದಲ್ಲಿ ಭಾರಿ ಕ್ರೇಜ್ ಅನ್ನು ಸೃಷ್ಟಿಸಿತು. ಇತ್ತೀಚೆಗೆ, ಕಂಪನಿಯು ಅಧಿಕೃತ ಹೇಳಿಕೆಯನ್ನು ಹಂಚಿಕೊಂಡಿದ್ದು, ಎರಡೂ ಬೈಕ್‌ಗಳು ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ಮೂರೇ ದಿನಗಳಲ್ಲಿ ಒಟ್ಟಾರೆಯಾಗಿ 10,000 ಬುಕಿಂಗ್‌ಗಳನ್ನು ಪಡೆದಿವೆ ಎಂದು ಹೇಳಿದೆ.
ಸ್ಪೀಡ್ 400 ಮತ್ತು ಸ್ಕ್ರ್ಯಾಂಬ್ಲರ್ 400 ಎಕ್ಸ್ ಎರಡೂ ಬೈಕ್‌ಗಳಿಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆಯನ್ನು ಪಡೆಯುತ್ತಿವೆ ಎಂದು ಕಂಪನಿ ತಿಳಿಸಿದೆ. ಗ್ರಾಹಕರು ಕೇವಲ 2,000 ರೂಪಾಯಿಗಳ ಟೋಕನ್ ಮೊತ್ತವನ್ನು ಪಾವತಿಸಿ ಆನ್‌ಲೈನ್‌ನಲ್ಲಿ ಬೈಕ್‌ಗಳನ್ನು ಬುಕ್ ಮಾಡಬಹುದಾಗಿದೆ.
ನಮಗೆ ದೊರೆತ ಅಗಾಧ ಪ್ರತಿಕ್ರಿಯೆಯಿಂದ ನಾವು ಉತ್ಸುಕರಾಗಿದ್ದೇವೆ. ಇಷ್ಟು ಕಡಿಮೆ ಅವಧಿಯಲ್ಲಿ 10,000 ಬೈಕ್ ಗಳ ಮುಂಗಡ ಆರ್ಡರ್ ಪಡೆದಿರುವುದು ಅಭೂತಪೂರ್ವವಾಗಿದೆ. ಬಜಾಜ್ ಆಟೋ ಮತ್ತು ಟ್ರಯಂಫ್ ಮೋಟಾರ್ ಸೈಕಲ್‌ಗಳಲ್ಲಿ ಸವಾರರು ಇಟ್ಟಿರುವ ಅಚಲ ನಂಬಿಕೆಗೆ ಇದು ಸಾಕ್ಷಿಯಾಗಿದೆ. ತಮ್ಮ ಕಾರ್ಯಕ್ಷಮತೆ, ವಿನ್ಯಾಸ ಮತ್ತು ತಂತ್ರಜ್ಞಾನದಿಂದ ಸವಾರರನ್ನು ಆಕರ್ಷಿಸುವ ಅಸಾಧಾರಣ ಮೋಟಾರ್‌ಸೈಕಲ್‌ಗಳನ್ನು ತಯಾರಿಸುವ ನಮ್ಮ ಭರವಸೆಗೆ ನಾವು ಬದ್ಧರಾಗಿದ್ದೇವೆ ಎಂದು ಬಜಾಜ್ ಆಟೋ ಲಿಮಿಟೆಡ್‌ನ ಕಾರ್ಯನಿರ್ವಾಹಕ ನಿರ್ದೇಶಕ ರಾಕೇಶ್ ಶರ್ಮಾ ಹೇಳಿದ್ದಾರೆ.
ಕಂಪನಿಯು ಬಹುನಿರೀಕ್ಷಿತ ಸ್ಪೀಡ್ 400 ಅನ್ನು ಆರಂಭಿಕ ಬೆಲೆ ರೂ. 2.33 ಲಕ್ಷವಿದೆ (ಎಕ್ಸ್ ಶೋ ರೂಂ ದೆಹಲಿ). ಆದರೆ, ಈ ಮೊತ್ತವನ್ನು 10 ಸಾವಿರ ರೂ.ಗೆ ಇಳಿಸಲಾಗಿದೆ. ಮೊದಲ 10,000 ಗ್ರಾಹಕರಿಗೆ 2.23 ಲಕ್ಷ ರೂ. (ಎಕ್ಸ್ ಶೋ ರೂಂ ದೆಹಲಿ) ನಿಗದಿಪಡಿಸಲಾಗಿದೆ.