ಹಾವೇರಿ: ಕಳ್ಳರು ನಿಧಿ ಆಸೆಗಾಗಿ ಕೋಣಕಲ್ಲ ಭರಮ ದೇವರ ಕಲ್ಲು ಅಗೆದಿರುವ ಘಟನೆ ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಮಲಗುಂದ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಜನರು ಆರಾಧಿಸುತ್ತಿದ್ದ ಕೋಣಕಲ್ಲ ಭರಮ ದೇವರ ಕಲ್ಲನ್ನು ಅಗೆದು ನಿಧಿಗಾಗಿ ಕಳ್ಳರು ಶೋಧ ನಡೆಸಿದ್ದಾರೆ. ಆರಾಧ್ಯ ದೇವರ ಕಲ್ಲು ಅಗೆದ ನಿಧಿಗಳ್ಳರ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪುರಾತನ ಕಾಲದ ದೇವಾಲಯಗ್ಳ ಬಳಿ ಕಳ್ಳರು ಓಡಾಟ ನಡೆಸುತ್ತಿದ್ದು, ದುಷ್ಕರ್ಮಿಗಳ ಪತ್ತೆ ಮಾಡಿ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ. ಆದೂಋ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.