ನವದೆಹಲಿ: ಭಾರತೀಯ ರೈಲ್ವೇ ಇದಾಗಲೇ ಹಲವಾರು ಹೊಸ ಹೊಸ ಪ್ರಯೋಗಗಳೊಂದಿಗೆ ಜನರಿಗೆ ಉತ್ತಮ ಸೌಲಭ್ಯಗಳನ್ನು ನೀಡುತ್ತಿದೆ. ವಿಮಾನದ ರೀತಿಯಲ್ಲಿಯೇ ಸುಖಕರವಾದ ಆಸನಗಳುಳ್ಳ ರೈಲುಗಳು ಕೂಡ ಈಗ ಕೆಲವು ಕಡೆಗಳಲ್ಲಿ ಸಂಚಾರ ಆರಂಭಿಸಿವೆ. ವಂದೇ ಭಾರತ್ ರೈಲಿಗೆ ಕೂಡ ಕಳೆದ ತಿಂಗಳು ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದು, ಇದು ಕೂಡ ಐಷಾರಾಮಿ ವ್ಯವಸ್ಥೆಯನ್ನು ಕಲ್ಪಿಸಿದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಸಚಿವ ಅಶ್ವಿನಿ ವೈಷ್ಣವ್ ಅವರು ಕಿಟಕಿಯಿಂದ ಹೊರಗೆ ನೋಡುತ್ತಿರುವ ಮಗುವೊಂದರ ಫೋಟೋ ಶೇರ್ ಮಾಡಿಕೊಂಡು ಭಾರತೀಯ ರೈಲನ್ನು ಹೊಗಳಿದ್ದಾರೆ. ಈ ಫೋಟೋದಲ್ಲಿ ಪುಟ್ಟ ಮಗು ಹೊರಗೆ ನೋಡುತ್ತಿದೆ.
ಅಸಲಿಗೆ ಈ ಮಗು ಇರುವುದು ರೈಲಿನಲ್ಲಿ. ಆದರೆ ಇದನ್ನು ನೋಡಿದರೆ ಮಗು ವಿಮಾನದಲ್ಲಿ ಆರಾಮವಾಗಿ ಮಲಗಿದಂತೆ ಕಾಣಿಸುತ್ತದೆ. ಆದ್ದರಿಂದ ಇದನ್ನು ಶೇರ್ ಮಾಡಿಕೊಂಡಿರುವ ಸಚಿವರು ಇದು ರೈಲೋ, ವಿಮಾನವೋ ಎಂದು ಶೀರ್ಷಿಕೆ ಕೊಟ್ಟಿದ್ದಾರೆ. ಭಾರತೀಯ ರೈಲ್ವೆ ಇಷ್ಟೊಂದು ಉತ್ತಮವಾಗಿರುವುದಕ್ಕೆ ಶ್ಲಾಘನೆಗಳ ಸುರಿಮಳೆಯಾಗುತ್ತಿದೆ.