ರೈಲ್ವೆ ಟ್ರ್ಯಾಕ್ ನಲ್ಲಿ ರೀಲ್ಸ್ ಮಾಡುವಾಗ ರೈಲು ಡಿಕ್ಕಿಯಾಗಿ ಯುವತಿ ಸಾವು

ರೈಲ್ವೇ ಟ್ರ್ಯಾಕ್ ಬಳಿ ಇನ್‌ಸ್ಟಾಗ್ರಾಮ್ ರೀಲ್ ಚಿತ್ರೀಕರಣ ಮಾಡುವಾಗ ರೈಲಿಗೆ ಸಿಲುಕಿ 20 ವರ್ಷದ ವಿದ್ಯಾರ್ಥಿನಿಯೊಬ್ಬಳು ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರಾಖಂಡದ ರೂರ್ಕಿಯಲ್ಲಿ ನಡೆದಿದೆ.

ಪೊಲೀಸರ ಪ್ರಕಾರ ರೂರ್ಕಿಯ ಶಿವಪುರಂ ಪ್ರದೇಶದಲ್ಲಿ ಈ ಅಹಿತಕರ ಘಟನೆ ನಡೆದಿದೆ. ಸಂತ್ರಸ್ತೆಯನ್ನು ವೈಶಾಲಿ ಎಂದು ಗುರುತಿಸಲಾಗಿದ್ದು, ರೈಲು ಸಮೀಪಿಸಿದಾಗ ತನ್ನ ಸ್ನೇಹಿತನೊಂದಿಗೆ ರೀಲ್ ಶೂಟ್ ಮಾಡುತ್ತಿದ್ದಾಗ ಮಾರಣಾಂತಿಕ ಅಪಘಾತ ಸಂಭವಿಸಿದೆ. ವೈಶಾಲಿ ಪ್ರಾಣ ಕಳೆದುಕೊಂಡರೆ, ಆಕೆಯ ಸ್ನೇಹಿತ ಪಾರಾಗಿ ತಕ್ಷಣ ವೈಶಾಲಿಯ ಕುಟುಂಬ ಸದಸ್ಯರಿಗೆ ದುರಂತದ ಬಗ್ಗೆ ತಿಳಿಸಿದರು.

ರೂರ್ಕಿಯ ಇಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ವೈಶಾಲಿ, ಹರಿದ್ವಾರದ ಹರಿಪುರ ಟೋಂಗಿಯಾ ಗ್ರಾಮದವಳಾಗಿದ್ದು ರೂರ್ಕಿಯಲ್ಲಿ ಸಂಬಂಧಿಯ ಮನೆಯಲ್ಲಿ ಉಳಿದುಕೊಂಡಿದ್ದಳು.

ಮೇ 2 ರಂದು ವೈಶಾಲಿ ರೈಲ್ವೇ ಟ್ರ್ಯಾಕ್ ಬಳಿ ರೀಲ್ ಚಿತ್ರೀಕರಣ ಮಾಡುತ್ತಿದ್ದಾಗ ಬಾರ್ಮರ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿದೆ. ದುರಂತವೆಂದರೆ ಆಕೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ ಹೇಳಿದ್ದಾರೆ.

ಈ ದುರಂತ ಘಟನೆಯ ನಂತರ ಹರಿದ್ವಾರ ಪೊಲೀಸರು ಸಾಮಾಜಿಕ ಮಾಧ್ಯಮಕ್ಕಾಗಿ ವಿಡಿಯೋ, ರೀಲ್ಸ್ ಚಿತ್ರೀಕರಿಸುವಾಗ ಅಪಾಯಕಾರಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳದಂತೆ ಜನರಲ್ಲಿ ಮನವಿ ಮಾಡಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read