
ಬೆಂಗಳೂರು: ಕೆಳಗಿನನಾಯಕರಂಡಹಳ್ಳಿಯಲ್ಲಿ ರೈಲಿಗೆ ಸಿಲುಕಿ ದಂಪತಿ ಸಾವನ್ನಪ್ಪಿದ್ದಾರೆ. ಹಳಿ ಮೇಲೆ ಕುರಿ, ಮೇಕೆಗಳನ್ನು ಮೇಯಿಸುತ್ತಿದ್ದ ವೇಳೆ ದಂಪತಿಗೆ ರೈಲು ಡಿಕ್ಕಿ ಹೊಡೆದಿದೆ.
ಕೆಳಗಿನನಾಯಕರಂಡಹಳ್ಳಿಯ ಚಂದ್ರನಾಯ್ಕ್, ಜಯಾಬಾಯಿ ಮೃತಪಟ್ಟವರು ಎಂದು ಹೇಳಲಾಗಿದೆ. ಮೇಕೆ ಮೇಯಿಸಲು ಹೋಗಿದ್ದ ವೇಳೆ ಚಂದ್ರ ನಾಯ್ಕ್ ರೈಲ್ವೆ ಹಳಿ ಮೇಲೆ ಹೋಗಿದ್ದಾರೆ. ರೈಲು ಬರುತ್ತಿರುವುದನ್ನು ಕಂಡು ಪತಿಯ ರಕ್ಷಣೆಗೆ ಜಯಾ ಬಾಯಿ ಧಾವಿಸಿ ಬಂದಿದ್ದಾರೆ. ಈ ವೇಳೆ ರೈಲು ಡಿಕ್ಕಿಯಾಗಿ ಚಂದ್ರನಾಯ್ಕ್, ಜಯಾ ಬಾಯಿ ಸಾವನ್ನಪ್ಪಿದ್ದಾರೆ. ಯಶವಂತಪುರ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.