alex Certify ‌ʼಟೊಯೋಟಾ ರೂಮಿಯಾನ್‌ʼ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ರಿಲೀಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‌ʼಟೊಯೋಟಾ ರೂಮಿಯಾನ್‌ʼ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ರಿಲೀಸ್

ಕಾರು ಖರೀದಿಸಲು ಬಯಸುವ ಎಲ್ಲಾ ಗ್ರಾಹಕರಿಗೆ ಈ ಹಬ್ಬದ ಸೀಸನ್ ಅನ್ನು ವಿಶೇಷವಾಗಿಸಲು ಬಯಸಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ (ಟಿಕೆಎಂ) ಕಂಪನಿಯು ಇಂದು ಟೊಯೋಟಾ ರೂಮಿಯಾನ್‌ ನ ಫೆಸ್ಟಿವ್ ಎಡಿಷನ್ ಅನ್ನು ಅನಾವರಣಗೊಳಿಸಿದೆ. ಈ ಲಿಮಿಟೆಡ್ ಎಡಿಷನ್ ರೂಮಿಯಾನ್ ಜೊತೆಗೆ ವಿಶೇಷವಾದ ಟೊಯೋಟಾ ಜೆನ್ಯೂನ್ ಆಕ್ಸೆಸರಿ (ಟಿಜಿಎ) ಪ್ಯಾಕೇಜ್ ಗಳು ಲಭ್ಯವಾಗಲಿದ್ದು, ಆ ಪ್ಯಾಕೇಜ್ ಗಳು ವಾಹನದ ಸೌಂದರ್ಯವನ್ನು ಹೆಚ್ಚಿಸಲಿವೆ ಮತ್ತು ಗ್ರಾಹಕರಿಗೆ ಹೆಚ್ಚು ಸೌಕರ್ಯ ಒದಗಿಸಲಿವೆ. ಹಾಗಾಗಿ ಗ್ರಾಹಕರು ಈ ಹಬ್ಬದ ಸೀಸನ್ ಅನ್ನು ಸಂಭ್ರಮದಿಂದ ಆಚರಿಸಬಹುದಾಗಿದೆ.

ರೂಮಿಯಾನ್ ನ ಈ ವಿಶೇಷ ಹಬ್ಬದ ಆವೃತ್ತಿಯ ಎಲ್ಲಾ ಗ್ರೇಡ್‌ಗಳ ಮೇಲೆ ₹20,608 ಮೌಲ್ಯದ ಡೀಲರ್ ಅಳವಡಿಕೆಯ ಟಿಜಿಎ ಪ್ಯಾಕೇಜ್‌ ದೊರೆಯಲಿದೆ. ಆ ಮೂಲಕ ಗ್ರಾಹಕರು ಪ್ರೀಮಿಯಂ ಅನುಭವವನ್ನು ತಮ್ಮದಾಗಿಸಿಕೊಳ್ಳಬಹುದಾಗಿದೆ.

ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ನ ಟಿಜಿಎ ಪ್ಯಾಕೇಜ್ ವೈಶಿಷ್ಟ್ಯಗಳು:

ಬ್ಯಾಕ್ ಡೋರ್ ಗಾರ್ನಿಶ್

ಮಡ್ ಫ್ಲಾಪ್ಸ್

ರೇರ್ ಬಂಪರ್ ಗಾರ್ನಿಶ್

ಡಿಲಕ್ಸ್ ಕಾರ್ಪೆಟ್ ಮ್ಯಾಟ್ (ಆರ್ ಎಚ್ ಡಿ)

ಹೆಡ್ ಲ್ಯಾಂಪ್ ಗಾರ್ನಿಶ್

ನಂಬರ್ ಪ್ಲೇಟ್ ಗಾರ್ನಿಶ್

ಡೋರ್ ವೈಸರ್ – ಕ್ರೋಮ್

ರೂಫ್ ಎಡ್ಜ್ ಸ್ಪಾಯ್ಲರ್

ಬಾಡಿ ಸೈಡ್ ಮೋಲ್ಡಿಂಗ್ ಗಾರ್ನಿಶ್ ಫಿನಿಶ್

ಈ ಲಿಮಿಟೆಡ್ ಹಬ್ಬದ ಎಡಿಷನ್ ಅನಾವರಣದ ಕುರಿತು ಮಾತನಾಡಿರುವ ಟೊಯೋಟಾ ಕಿರ್ಲೋಸ್ಕರ್ ಮೋಟಾರ್‌ ನ ಸೇಲ್ಸ್ ಸರ್ವೀಸ್ ಯೂಸ್ಡ್ ಕಾರ್ ಬಿಸಿನೆಸ್ ವಿಭಾಗದ ಉಪಾಧ್ಯಕ್ಷರಾದ ಶ್ರೀ. ಶಬರಿ ಮನೋಹರ್ ಅವರು, “ಹೆಚ್ಚು ಸೌಂದರ್ಯ ಹೊಂದಿರುವ ಮತ್ತು ಹೆಚ್ಚು ಸೌಕರ್ಯ ಒದಗಿಸುವ ಟೊಯೋಟಾ ರೂಮಿಯಾನ್ ನ ಲಿಮಿಟೆಡ್ ಫೆಸ್ಟಿವಲ್ ಎಡಿಷನ್ ಅನ್ನು ಬಿಡುಗಡೆ ಮಾಡಲು ನಾವು ಸಂತೋಷ ಹೊಂದಿದ್ದೇವೆ. ಆರಾಮದಾಯಕ ಮತ್ತು ಉತ್ತಮ ಡ್ರೈವಿಂಗ್ ಅನುಭವವನ್ನು ಈ ಕಾರು ಒದಗಿಸುತ್ತದೆ. ದೀಪಾವಳಿ ಹಬ್ಬ ಸಮೀಪಿಸುತ್ತಿದ್ದಂತೆಯೇ ನಮ್ಮ ಗ್ರಾಹಕರಿಗೆ ವಿಶೇಷ ಸಂತೋಷಕರ ಅನುಭವ ಒದಗಿಸುವ ನಮ್ಮ ಉದ್ದೇಶಕ್ಕೆ ನಾವು ಬದ್ಧವಾಗಿದ್ದೇವೆ. ಹಾಗಾಗಿ ಈ ವಿಶೇಷ ಆವೃತ್ತಿಯ ಜೊತೆ ಪ್ರೀಮಿಯಂ ಪರಿಕರಗಳ ಪ್ಯಾಕೇಜ್ ಅನ್ನು ನೀಡುತ್ತಿದ್ದೇವೆ. ಜೊತೆಗೆ ಮಾರಾಟ ನಂತರದಲ್ಲಿ ಅತ್ಯುತ್ತಮ ಸೇವೆ ಒದಗಿಸುತ್ತೇವೆ. ವಿಸ್ತೃತ ವಾರಂಟಿ ಸೌಲಭ್ಯ ಕೂಡ ಲಭ್ಯವಿದೆ. ಇವೆಲ್ಲವನ್ನೂ ಭಾರತೀಯ ಗ್ರಾಹಕರ ಅಗತ್ಯಗಳನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ” ಎಂದು ಹೇಳಿದರು.

ಟೊಯೋಟಾ ರೂಮಿಯಾನ್ ಈಗಾಗಲೇ ವೈವಿಧ್ಯಮಯ ಮತ್ತು ಕುಟುಂಬ ಸ್ನೇಹಿ ಎಂಪಿವಿ ಆಗಿ ಭಾರಿ ಜನಪ್ರಿಯತೆ ಗಳಿಸಿದೆ. ವಿಶಾಲವಾದ ಒಳಾಂಗಣ, ಇಂಧನ ದಕ್ಷತೆ ಮತ್ತು ಅತ್ಯುನ್ನತ ಸುರಕ್ಷತಾ ಫೀಚರ್ ಗಳನ್ನು ಹೊಂದಿದದೆ. 5-ಸ್ಪೀಡ್ ಮ್ಯಾನ್ಯುವಲ್ ಟ್ರಾನ್ಸ್‌ ಮಿಷನ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಟ್ರಾನ್ಸ್‌ ಮಿಷನ್ ಆಯ್ಕೆಗಳಲ್ಲಿ ಈ ಟೊಯೋಟಾ ರೂಮಿಯಾನ್ ಲಭ್ಯವಿದೆ. ಆ ಮೂಲಕ ಮ್ಯಾನ್ಯುವಲ್ ಮತ್ತು ಅಟೋಮ್ಯಾಟಿಕ್ ಈ ಎರಡೂ ವಿಭಾಗ ಇಷ್ಟ ಪಡುವವರಿಗೂ ಸೂಕ್ತ ಆಯ್ಕೆ ನೀಡುತ್ತೆದ. ಈ ಎಂಪಿವಿ ನಿಯೋ ಡ್ರೈವ್ (ಐ ಎಸ್ ಜಿ) ತಂತ್ರಜ್ಞಾನ ಮತ್ತು ಇ-ಸಿಎನ್‌ಜಿ ತಂತ್ರಜ್ಞಾನ ಹೊಂದಿರುವ ಕೆ ಸೀರೀಸ್ ಸರಣಿಯ 1.5-ಲೀಟರ್ ಪೆಟ್ರೋಲ್ ಎಂಜಿನ್‌ ನಲ್ಲಿ ಲಭ್ಯವಿದೆ. ಅತ್ಯಾಧುನಿಕ ಕೆ ಸರಣಿಯ ಎಂಜಿನ್ ನ ಪೆಟ್ರೋಲ್ ವೇರಿಯಂಟ್ 20.51 ಕೆಮೀ/ ಲೀ ಮತ್ತು ಸಿ ಎನ್ ಜಿ ವೇರಿಯೆಂಟ್ 26.11 ಕಿಮೀ/ ಕೆಜಿ ಮೈಲೇಜ್ ಒದಗಿಸಲಿದೆ.

ಟೊಯೋಟಾ ರೂಮಿಯಾನ್ ಎಸ್ ಎಂಟಿ/ ಎಟಿ, ಜಿ ಎಂಟಿ ಮತ್ತು ವಿ ಎಂಟಿ/ಎಟಿ, ಎಸ್ ಎಂಟಿ ಸಿ ಎನ್ ಜಿ ಎಂಬ ಆರು ವೇರಿಯೆಂಟ್ ಗಳಲ್ಲಿ ದೊರೆಯುತ್ತದೆ.

ಟೊಯೋಟಾ ರೂಮಿಯನ್‌ ನ ಫೆಸ್ಟಿವಲ್ ಲಿಮಿಟೆಡ್ ಎಡಿಷನ್ ನ ಬುಕಿಂಗ್‌ ಗಳು ಆರಂಭವಾಗಿದ್ದು, ಎಲ್ಲಾ ಟೊಯೋಟಾ ಡೀಲರ್‌ಶಿಪ್‌ಗಳಲ್ಲಿ ಮತ್ತು ಆನ್‌ಲೈನ್‌ ನಲ್ಲಿ ಬುಕಿಂಗ್ ಮಾಡಬಹುದಾಗಿದೆ. ವೆಬ್ ಸೈಟ್- www.toyotabharat.com/online-booking.

Related News

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...