ತುಳಸಿಗಿಡ ಪವಿತ್ರವಾದದ್ದು. ಅದರಲ್ಲಿ ಲಕ್ಷ್ಮೀದೇವಿ ನೆಲೆಸಿರುತ್ತಾಳೆ ಎನ್ನುತ್ತಾರೆ. ಹಾಗೇಯೇ ಇದು ಎಲ್ಲರ ಮನೆ ಮುಂದೆ ಇರುತ್ತದೆ. ಇದಕ್ಕೆ ಪೂಜೆ, ಪುನಸ್ಕಾರಗಳು ನಡೆಯುತ್ತಿರುತ್ತದೆ. ತುಳಸಿ ಗಿಡವನ್ನು ಚೆನ್ನಾಗಿ ಆರೈಕೆ ಮಾಡಿದರೆ ಲಕ್ಷ್ಮೀದೇವಿ ಪ್ರಸನ್ನಳಾಗುತ್ತಾಳೆ. ಮನೆಯಲ್ಲಿ ಆರೋಗ್ಯ, ಸಂಪತ್ತು ತುಳುಕುತ್ತಿರುತ್ತದೆ ಎನ್ನುತ್ತಾರೆ ಜೋತಿಷ್ಯ ಪಂಡಿತರು.
ತುಳಸಿಗಿಡಕ್ಕೆ ಯಾವುದೇ ಕಾರಣಕ್ಕೂ ಗಲೀಜು ನೀರು ಹಾಕಬಾರದಂತೆ. ಸ್ನಾನ ಮಾಡಿದ ನಂತರ ಶುದ್ಧವಾದ ನೀರನ್ನು ತುಳಸಿ ಗಿಡಕ್ಕೆ ಹಾಕಬೇಕು. ಶನಿವಾರ ಹಾಗೂ ಏಕಾದಶಿಯಂದು ತುಳಸಿ ಗಿಡದ ಎಲೆಗಳನ್ನು ಕೀಳಬಾರದಂತೆ. ಈಶಾನ್ಯದಿಕ್ಕಿನಲ್ಲಿ ಈ ತುಳಸಿ ಗಿಡವನ್ನು ನೆಟ್ಟು ಪೂಜೆ ಮಾಡಿದರೆ ನಿಮ್ಮ ಮನೆ ಸಂಪತ್ತು ಹೆಚ್ಚಾಗುತ್ತದೆ.