ತಿರುಪತಿ: ವಿಶ್ವದ ಶ್ರೀಮಂತ ದೇವಾಲಯ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳುವ ಭಕ್ತರಿಗೆ ಮುಖ್ಯ ಮಾಹಿತಿ ಇಲ್ಲಿದೆ.
ಅಕ್ಟೋಬರ್ ತಿಂಗಳಲ್ಲಿ ದೇವರ ದರ್ಶನಕ್ಕೆ ತೆರಳುವ ಭಕ್ತರಿಗೆ ತಿರುಮಲ ತಿರುಪತಿ ದೇವಸ್ಥಾನಂ(ಟಿಟಿಡಿ) ಶ್ರೀವಾರಿ ಸೇವಾ ಟಿಕೆಟ್ ಗಳನ್ನು ಜುಲೈ 18ರಂದು ಆನ್ಲೈನ್ ನಲ್ಲಿ ಬಿಡುಗಡೆ ಮಾಡಿದೆ. ಜುಲೈ 20ರ ಬೆಳಿಗ್ಗೆ 10 ಗಂಟೆಯವರೆಗೆ ಭಕ್ತರು ಟಿಕೆಟ್ ಬುಕ್ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ತಿರುಮಲ ಶ್ರೀವಾರಿ ಆರ್ಜಿತ ಸೇವೆ, ಕಲ್ಯಾಣೋತ್ಸವ, ಬ್ರಹ್ಮೋತ್ಸವ, ಸಹಸ್ರ ದೀಪಾಲಂಕಾರ, ಊಂಜಾಲ ಸೇವಾ ಟಿಕೆಟ್ ಗಳನ್ನು ಜುಲೈ 22ರಂದು ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. ಅದೇ ದಿನ ಮಧ್ಯಾಹ್ನ 3 ಗಂಟೆಗೆ ವರ್ಚುವಲ್ ಸೇವೆಗಳಿಗಾಗಿ ಅಕ್ಟೋಬರ್ ಕೋಟಾ ಮತ್ತು ಅವುಗಳ ವೀಕ್ಷಣೆ ಸ್ಲಾಟ್ ಗಳನ್ನು ಆನ್ಲೈನ್ ನಲ್ಲಿ ಬಿಡುಗಡೆ ಮಾಡಲಾಗುವುದು.
ಅಕ್ಟೋಬರ್ ತಿಂಗಳ ಅಂಗಪ್ರದಕ್ಷಣೆ ಟೋಕನ್ ಗಳ ಕೋಟಾ ಜುಲೈ 23ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. ವೃದ್ಧರು, ವಿಕಲಚೇತನರು, ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿರುವವರಿಗೆ ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ ಅನುವು ಮಾಡಿಕೊಡಲು ಅಕ್ಟೋಬರ್ ತಿಂಗಳ ಉಚಿತ ವಿಶೇಷ ದರ್ಶನಂ ಟೋಕನ್ ಗಳನ್ನು ಜುಲೈ 23ರ ಮಧ್ಯಾಹ್ನ 3 ಗಂಟೆಗೆ ಬಿಡುಗಡೆ ಮಾಡಲಾಗುವುದು.
ಅಕ್ಟೋಬರ್ ತಿಂಗಳ ವಿಶೇಷ ಪ್ರವೇಶ ದರ್ಶನ ಟಿಕೆಟ್ ಕೋಟಾ ಜುಲೈ 24ರಂದು ಬೆಳಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. ಟಿಟಿಡಿ ವ್ಯಾಪ್ತಿಯ ದೇವಾಲಯಗಳಲ್ಲಿ ಆಗಸ್ಟ್ ತಿಂಗಳ ಸೇವಾ ಕೋಟಾ ಜುಲೈ 25ರ ಬೆಳಿಗ್ಗೆ 10 ಗಂಟೆಗೆ ಬಿಡುಗಡೆ ಮಾಡಲಾಗುವುದು. ಟಿಟಿಡಿಯ https://ttdevasthanams.ap.gov.in ವೆಬ್ಸೈಟ್ ನಲ್ಲಿ ಟಿಕೆಟ್ ಕಾಯ್ದಿರಿಸಿಕೊಳ್ಳಬಹುದಾಗಿದೆ.