ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ರಕ್ಷಿಸಿಕೊಳ್ಳೋದು ಹೇಗೆ ? ವಿಡಿಯೋ ವೈರಲ್​

ಭಾರತೀಯ ಅರಣ್ಯ ಸೇವಾ ಅಧಿಕಾರಿ ಸುಶಾಂತ್​ ನಂದಾ ಅವರು ಟ್ವಿಟರ್‌ನಲ್ಲಿ ಆಗಿದ್ದಾಂಗೆ ಕೆಲವು ಆಸಕ್ತಿದಾಯಕ ವೀಡಿಯೊವನ್ನು ಹಂಚಿಕೊಳ್ಳುತ್ತಿರುತ್ತಾರೆ. ಇವರು ಶೇರ್​ ಮಾಡುವ ವಿಡಿಯೋಗಳು ಹೆಚ್ಚಿನದ್ದಾಗಿ ವನ್ಯಮೃಗಗಳಿಗೆ ಸಂಬಂಧಿಸಿದ್ದಾಗಿರುತ್ತವೆ. ಈಗ ಅಂಥದ್ದೇ ಒಂದು ವಿಡಿಯೋ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಹುಲಿ ಪ್ರಾಬಲ್ಯದ ಪ್ರದೇಶಗಳಲ್ಲಿ ಚಿರತೆ ಹೇಗೆ ಬದುಕುಳಿಯುತ್ತದೆ, ಅದು ತನ್ನನ್ನು ಹೇಗೆ ರಕ್ಷಣೆ ಮಾಡಿಕೊಳ್ಳುತ್ತದೆ ಎಂಬುದನ್ನು ನೋಡಬಹುದು. ಚಿಕ್ಕ ವಿಡಿಯೋದಲ್ಲಿ ಇದಕ್ಕೆ ಸ್ಪಷ್ಟವಾದ ಉತ್ತರ ಸಿಗುತ್ತದೆ.

ಇದು 30 ಸೆಕೆಂಡುಗಳ ವಿಡಿಯೋವಾಗಿದೆ. ಈ ವಿಡಿಯೋದಲ್ಲಿ ಹುಲಿ, ಚಿರತೆಯ ಮೇಲೆ ದಾಳಿ ಮಾಡಲು ಸಿದ್ಧವಾಗುತ್ತಿರುವುದನ್ನು ಕಾಣಬಹುದು. ಅದು ಚಿರತೆಯ ಕಡೆಗೆ ಧಾವಿಸಿ ಬಂದಾಗ ಚಿರತೆ ಅಲ್ಲಿರುವ ಮರವನ್ನು ವೇಗದಲ್ಲಿ ಹತ್ತುತ್ತದೆ.

ಆದರೆ ಹುಲಿಗೆ ಅದರಷ್ಟು ವೇಗದಲ್ಲಿ ಹತ್ತಲು ಸಾಧ್ಯವಾಗದೇ ಅರ್ಧಕ್ಕೇ ವಾಪಸಾಗುತ್ತದೆ. ಈ ಕುರಿತು ತಿಳಿಸಿರುವ ಸುಸಂತಾ​ ನಂದಾ ಅವರು, ಹುಲಿಯು ಪ್ರಾಯದಲ್ಲಿ ವೇಗವಾಗಿ ಮರವನ್ನು ಹತ್ತಬಲ್ಲುವು. ಆದರೆ ಅವುಗಳಿಗೆ ಸ್ವಲ್ಪ ವಯಸ್ಸಾದರೆ ದೇಹದ ತೂಕ ಹೆಚ್ಚಾಗಿ ಮರ ಏರುವುದು ಕಷ್ಟವಾಗುತ್ತದೆ. ಇದರಿಂದ ಚಿರತೆಗಳು ಸುಲಭವಾಗಿ ರಕ್ಷಿಸಿಕೊಳ್ಳುತ್ತವೆ ಎಂದಿದ್ದಾರೆ.

https://twitter.com/susantananda3/status/1625326128754987010?ref_src=twsrc%5Etfw%7Ctwcamp%5Etweetembed%7Ctwterm%5E1625326128754987010%7Ctwgr%5E43273bc681201390e40e7174dc82c737d9a93d1f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftiger-attacks-leopard-but-fails-youll-figure-out-why-after-watching-this-viral-video-2334661-2023-02-14

https://twitter.com/WildLense_India/status/1625425465656905729?ref_src=twsrc%5Etfw%7Ctwcamp%5Etweetembed%7Ctwterm%5E1625425465656905729%7Ctwgr%5E43273bc681201390e40e7174dc82c737d9a93d1f%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Ftiger-attacks-leopard-but-fails-youll-figure-out-why-after-watching-this-viral-video-2334661-2023-02-14

https://twitter.com/anandkalyanji5/status/1625441599911264256?ref_src=twsrc%5Etfw%7Ctwcamp%5Etweetembed%7Ctwter

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read