ಪ್ರತಿಯೊಬ್ಬರ ಮನೆಯಲ್ಲೂ ಗಾರ್ಡನ್ ಇರುತ್ತದೆ. ಅಲ್ಲಿ ಗಿಡಗಳು ಹಚ್ಚ ಹಸಿರಾಗಿ ಬೆಳೆದು ಹೂ ಬಿಟ್ಟರೆ ಮನಸ್ಸಿಗೆ ಖುಷಿ ಕೊಡುತ್ತದೆ. ಆದರೆ ಕೆಲವರ ಮನೆಯ ಗಾರ್ಡನ್ ನಲ್ಲಿ ಗಿಡಗಳು ಎಷ್ಟೇ ನೀರು ಹಾಕಿದರೂ ಒಣಗಿ ಹೋಗಿರುತ್ತದೆ. ಇದರಿಂದ ಗಾರ್ಡನ್ ನ ಅಂದ ಕೆಡುತ್ತದೆ. ಹಾಗಾಗಿ ನಿಮ್ಮ ಗಾರ್ಡನ್ ನಲ್ಲಿ ಗಿಡ ಹಚ್ಚ ಹಸಿರಾಗಿ ಬೆಳೆಯಲು ಈ ನೀರನ್ನು ಹಾಕಿ.
ಪ್ರತಿಯೊಬ್ಬರ ಮನೆಯಲ್ಲೂ ಊಟಕ್ಕೆ ಅನ್ನವನ್ನು ಮಾಡುತ್ತಾರೆ. ಆ ವೇಳೆ ಅನ್ನವನ್ನು ತಯಾರಿಸಲು ಅಕ್ಕಿಯನ್ನು ತೊಳೆಯಬೇಕು. ಆ ವೇಳೆ ಅಕ್ಕಿ ತೊಳೆದ ನೀರನ್ನು ಎಲೆಂದರಲ್ಲಿ ಎಸೆಯಬೇಡಿ. ಇದನ್ನು ಗಿಡಕ್ಕೆ ಹಾಕಿ. ಇದರಿಂದ ಗಿಡಗಳು ಚೆನ್ನಾಗಿ ಹಚ್ಚ ಹಸಿರಾಗಿ ಬೆಳೆಯುತ್ತದೆ.
ಅಕ್ಕಿಯ ನೀರಿನಲ್ಲಿ ಪ್ರೋಟೀನ್, ಫೈಬರ್, ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ರಂಜಕ, ಕಬ್ಬಿಣ, ಪೊಟ್ಯಾಶಿಯಂನ್ನು ಹೊಂದಿದೆ. ಇದು ಗಿಡಗಳಿಗೆ ಉತ್ತಮ ಪೋಷಕಾಂಶಗಳನ್ನು ನೀಡುತ್ತದೆ. ಹಾಗಾಗಿ ಈ ನೀರನ್ನು ಒಂದು ಬಕೆಟ್ ನಲ್ಲಿ 10-15 ದಿನಗಳ ಕಾಲ ಸಂಗ್ರಹಿಸಿಡಿ. ಇದರಿಂದ ಯಿಸ್ಟ್ ಬರುತ್ತದೆ. ಇದನ್ನು ಗಿಡಕ್ಕೆ ಹಾಕಿದರೆ ಗಿಡ ಚೆನ್ನಾಗಿ ಬೆಳೆಯುತ್ತದೆ.