alex Certify ಭಾರತದ ಈ ರಾಜ್ಯದಲ್ಲಿವೆ ಅತಿ ಹೆಚ್ಚು ಹಾವುಗಳು; ಪ್ರತಿ ಹಳ್ಳಿಯಲ್ಲೂ ರಾಶಿ ರಾಶಿ ‘ನಾಗರಹಾವು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾರತದ ಈ ರಾಜ್ಯದಲ್ಲಿವೆ ಅತಿ ಹೆಚ್ಚು ಹಾವುಗಳು; ಪ್ರತಿ ಹಳ್ಳಿಯಲ್ಲೂ ರಾಶಿ ರಾಶಿ ‘ನಾಗರಹಾವು’

ಹಾವುಗಳ ಹೆಸರು ಕೇಳಿದ್ರೆ ಎಲ್ಲರೂ ಭಯಪಡುವುದು ಸಹಜ. ಸಾವಿರಾರು ಜಾತಿಯ ಹಾವುಗಳು ಪ್ರಪಂಚದ ವಿವಿಧ ಭಾಗಗಳಲ್ಲಿ ಕಂಡುಬರುತ್ತವೆ. ಭಾರತದಲ್ಲಿ ಕೂಡ ಹಾವುಗಳಿಗೆ ಕೊರತೆಯಿಲ್ಲ. ಲಕ್ಷದ್ವೀಪವನ್ನು ಹೊರತುಪಡಿಸಿ ಬೇರೆಲ್ಲಾ ಸ್ಥಳಗಳಲ್ಲಿ ಹಾವುಗಳು ಕಂಡುಬರುತ್ತವೆ.

ಭಾರತದಲ್ಲಿ ಅತಿ ಹೆಚ್ಚು ಹಾವುಗಳಿರುವುದು ಎಲ್ಲಿ ಗೊತ್ತಾ? ಈ ರಾಜ್ಯವು ತನ್ನ ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾಗಿದೆ, ಪ್ರತಿ ವರ್ಷ ಲಕ್ಷಾಂತರ ಪ್ರವಾಸಿಗರು ಅಲ್ಲಿಗೆ ಭೇಟಿ ನೀಡುತ್ತಾರೆ. ಇಲ್ಲಿ ಹಾವುಗಳಿಲ್ಲದ ಹಳ್ಳಿಗಳೇ ಇಲ್ಲ.

ಕೇರಳದಲ್ಲಿ 350ಕ್ಕೂ ಹೆಚ್ಚು ಜಾತಿಯ ಹಾವುಗಳು ಕಾಣಸಿಗುತ್ತವೆ. ಇಲ್ಲಿ ಹಾವುಗಳಿಲ್ಲದ ಜಾಗವೇ ಇಲ್ಲ. ಸಾಕಷ್ಟು ಪ್ರಮಾಣದಲ್ಲಿ ಮಳೆಯಾಗುವುದರಿಂದ ಇಲ್ಲಿ ಹೇರಳವಾಗಿ ಪೊದೆಗಳು ಮತ್ತು ಮರಗಳು ಇವೆ. ಹಾಗಾಗಿ ಹಾವುಗಳಿಗೆ ಇದು ಹೇಳಿ ಮಾಡಿಸಿದಂತಹ ಜಾಗ.

ಭಾರತದಲ್ಲಿ ಕಂಡುಬರುವ ಅತ್ಯಂತ ವಿಷಕಾರಿ ಹಾವೆಂದರೆ ರಸೆಲ್ಸ್ ವೈಪರ್. ಇದು ಕಚ್ಚಿದರೆ ರಕ್ತ ಹೆಪ್ಪುಗಟ್ಟುತ್ತದೆ. ಸ್ವಲ್ಪ ಸಮಯದಲ್ಲಿ ವ್ಯಕ್ತಿ ಸಾಯುತ್ತಾನೆ. ಆದರೆ ಆದರೆ ಅತಿ ಹೆಚ್ಚು ಸಾವು ಸಂಭವಿಸುತ್ತಿರುವುದು ಗೆಹೂನ್‌ ಮತ್ತು ಕ್ರೈಟ್ ಹಾವುಗಳ ಕಡಿತದಿಂದ.ಇದು ಕೇರಳ, ಜಮ್ಮು ಮತ್ತು ಕಾಶ್ಮೀರ, ಗುಜರಾತ್‌, ಮೇಘಾಲಯ, ಅರುಣಾಚಲ ಪ್ರದೇಶದಲ್ಲಿ ಕಂಡುಬರುತ್ತವೆ.

ಹಾವು ಯಾವುದೇ ಮನುಷ್ಯನನ್ನು ಎಲ್ಲಿ ಬೇಕಾದರೂ ಕಚ್ಚಬಹುದು. ಆದರೆ ಸಾಮಾನ್ಯವಾಗಿ ಕಾಲು, ಕೈ ಅಥವಾ ಮುಖದ ಮೇಲೆ ಕಚ್ಚುತ್ತವೆ. ಹಾವು ಕಚ್ಚಿದ ಸ್ಥಳದಲ್ಲಿ ಸ್ವಲ್ಪ ತುರಿಕೆ ಕಾಣಿಸಿಕೊಳ್ಳುತ್ತದೆ, ವ್ಯಕ್ತಿಗೆ ಭಯವಾಗುವುದು ಕೂಡ ಸಹಜ. ಕ್ರಮೇಣ  ಬಾಯಿ ಒಣಗಲು ಪ್ರಾರಂಭಿಸುತ್ತದೆ, ದೃಷ್ಟಿ ಮಸುಕಾಗುತ್ತದೆ. ತಲೆನೋವು ಶುರುವಾಗುತ್ತದೆ. ಹಾವಿನ ವಿಷ ನಿಧಾನವಾಗಿ ದೇಹದಲ್ಲಿ ಹರಡುತ್ತದೆ.

ಜಗತ್ತಿನಲ್ಲಿ ಕಂಡುಬರುವ ಎಲ್ಲಾ ಹಾವುಗಳು ವಿಷಕಾರಿಯಲ್ಲ. ವಿಷವನ್ನು ಹೊಂದಿರುವ ಹಾವುಗಳಲ್ಲಿಯೂ ಅದರ ಪ್ರಮಾಣ ಏಕರೂಪವಾಗಿರುವುದಿಲ್ಲ. ವಿಷಕಾರಿ ಹಾವುಗಳ ಕಡಿತದ ಪರಿಣಾಮವೂ ಬೇರೆ ಬೇರೆಯಾಗಿರುತ್ತದೆ. ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾದ ಬ್ಲ್ಯಾಕ್ ಮಾಂಬಾ ಕಚ್ಚಿದರೆ ತಕ್ಷಣ ಚಿಕಿತ್ಸೆ ಸಿಗದೇ ಇದ್ದಲ್ಲಿ 6 ಗಂಟೆಗಳಲ್ಲಿ ವ್ಯಕ್ತಿ ಸಾಯುತ್ತಾನೆ. ಹಾವಿನ ಕಡಿತದ ನಂತರ ಸರಾಸರಿ ಬದುಕುಳಿಯುವ ಸಮಯ 15 ಗಂಟೆಗಳು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...