ಮಕ್ಕಳು ತಮ್ಮ ತಾಯಂದಿರೊಂದಿಗೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಆದರೆ ದುಃಖಿತ ಮಗನು ತನ್ನ ತಾಯಿಯ ಶವವನ್ನು ಆಕೆಯ ಸಮಾಧಿಯಿಂದ ಅಗೆದು 13 ವರ್ಷಗಳ ಕಾಲ ತನ್ನ ಸೋಫಾದಲ್ಲಿ ಇಟ್ಟುಕೊಂಡಿರುವ ಭಯಾನಕ ಘಟನೆ ನಡೆದಿದೆ. ಆ ವ್ಯಕ್ತಿ ಈಗ ಜೈಲು ಶಿಕ್ಷೆಯನ್ನು ಎದುರಿಸುತ್ತಿದ್ದಾನೆ.
ಪೋಲೆಂಡ್‌ನ ರಾಡ್ಲಿನ್‌ನ ನಿವಾಸಿ ಮರಿಯನ್ ಎಲ್ ಅವರ ಮನೆಯೊಳಗೆ ಮಹಿಳೆಯ ರಕ್ಷಿತ ಅವಶೇಷಗಳನ್ನು ಪೊಲೀಸರು ಕಂಡುಕೊಂಡಿದ್ದಾರೆ. ಮರಿಯನ್ ಮನೆಬಿಟ್ಟು ಎಲ್ಲಿಯೂ ಬರಲಾಗದ ಕಾರಣ ಸಂದೇಹಗೊಂಡ ಸೋದರ ಮಾವ ಮನೆ ಪರಿಶೀಲಿಸಿದಾಗ ಈ ವಿಷಯ ತಿಳಿದುಬಂದಿದೆ.
ನಂತರ 76 ವರ್ಷದ ಈತನ ಮನೆಯನ್ನು ಪೊಲೀಸರು ತಪಾಸಣೆ ಮಾಡಿದಾಗ ಹಳೆಯ ದಿನಪತ್ರಿಕೆಗಳ ರಾಶಿಯ ನಡುವೆ ಅವನ ಮಂಚದ ಮೇಲೆ ತಾಯಿಯ ಅವಶೇಷಗಳು ಕಂಡುಬಂದಿವೆ. ರಾಸಾಯನಿಕ ಸಿಂಪಡಿಸುತ್ತಾ ಅದನ್ನು ಅವನು ಮನೆಯಲ್ಲಿ ಇಟ್ಟುಕೊಂಡಿರುವುದು ತಿಳಿದು ಬಂದಿದೆ. ಆ ಮಹಿಳೆಯು 13 ವರ್ಷಗಳ ಹಿಂದೆ ನಿಧನರಾಗಿರುವುದು ಶವ ಪರೀಕ್ಷೆ ವೇಳೆ ಬೆಳಕಿಗೆ ಬಂದಿದೆ. ನಂತರ ಅವಶೇಷವನ್ನು ಸಮಾಧಿ ಮಾಡಲಾಗಿದೆ.