6 ವರ್ಷಗಳ ಬಳಿಕ ಸಿಕ್ತು ಕಳೆದುಹೋದ ಬೆಕ್ಕು…! ಆದರೆ ಸಾಗಿಸಲು ಬೇಕು 2 ಲಕ್ಷ ರೂ.

ಸಾಕುಪ್ರಾಣಿಯನ್ನು ನಿಮ್ಮೊಂದಿಗೆ ಇಟ್ಟುಕೊಳ್ಳುವುದರಿಂದ ಅದು ಉದ್ದೇಶಪೂರ್ವಕವಾಗಿ ಎಲ್ಲೋ ಅಲೆದಾಡಬಹುದು ಮತ್ತು ಕಳೆದುಹೋಗಬಹುದು ಎಂಬ ಭಯ ಇದ್ದೇ ಇರುತ್ತದೆ. ಜನರು ತಮ್ಮ ಸಾಕುಪ್ರಾಣಿಗಳನ್ನು ಈ ರೀತಿ ಕಳೆದುಕೊಂಡ ಅನೇಕ ನಿದರ್ಶನಗಳಿವೆ ಮತ್ತು ಲಂಡನ್‌ನ ಲೀಸಾ ಗ್ರೆಗೊರಿ ಅವರಿಗೂ ಹೀಗೆ ಆಗಿದೆ.

ಇವರ ಬೆಕ್ಕು ತಲಲಾ 2017 ರಲ್ಲಿ ಉತ್ತರ ಲಂಡನ್‌ನ ಕೆಂಟಿಶ್ ಟೌನ್‌ನಲ್ಲಿರುವ ಅವರ ಮನೆಯಿಂದ ನಾಪತ್ತೆಯಾಗಿತ್ತು. ಆದರೆ ಈಗ ಆರು ವರ್ಷಗಳ ಬಳಿಕ ಬೆಕ್ಕು ಅವರಿಗೆ ಸಿಕ್ಕಿದೆ. ಇಡೀ ಕುಟುಂಬ ಸಂತೋಷದಲ್ಲಿ ಇದೆ.

ಆದರೆ ಈಗ ಈ ಬೆಕ್ಕಿಗಾಗಿ ಕುಟುಂಬ ಭಾರಿ ಬೆಲೆ ತೆರಬೇಕಾಗಿದೆ. ಅವರು ಈಗ ತಮ್ಮ ಹೊಸ ನಿವಾಸಕ್ಕೆ ಬೆಕ್ಕನ್ನು 10,500 ಮೈಲುಗಳಷ್ಟು ಸಾಗಿಸಬೇಕಿದೆ. ಅವರು ಮನೆ ಬದಲಾವಣೆ ಮಾಡಿದ್ದು, ಬೆಕ್ಕು ಹಳೆಯ ಮನೆಯ ಕಡೆಗೆ ಹೋಗಿತ್ತು. ಬಲು ಶ್ರಮದಿಂದ ಬೆಕ್ಕು ಸಿಕ್ಕಿದೆ. ಆದರೆ ಈಗ ಇದಕ್ಕಾಗಿ ಹಲವಾರು ಕಾನೂನು ತೊಡಕುಗಳು ಬರುತ್ತಿವೆ ಎಂದು ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಈಗ ಇರುವ ನಿಯಮದ ಪ್ರಕಾರ ಹೋದರೆ ಬೆಕ್ಕನ್ನು ಆಸ್ಟ್ರೇಲಿಯಾಕ್ಕೆ ತರುವ ವಿಧಾನವು 12 ತಿಂಗಳವರೆಗೆ ತೆಗೆದುಕೊಳ್ಳಬಹುದು. ಅದಕ್ಕೆ ಸುಮಾರು 2 ಲಕ್ಷ ರೂ. ಖರ್ಚಾಗಬಹುದು ಎಂದಿದ್ದಾರೆ ಮಾಲೀಕರು. ಸದ್ಯ ಅವರು ಬೆಕ್ಕಿನ ಸಹೋದರಿಯನ್ನು ಸಾಕಿಕೊಂಡಿದ್ದಾರೆ. ಈಗ ಮುಂದೇನು ಮಾಡಬೇಕು ಎಂಬ ಚಿಂತೆಯಲ್ಲಿ ಅವರು ಇದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read