ಈ ಆಯಿಲ್ ನಲ್ಲಿದೆ ಬಹಳಷ್ಟು ಆರೋಗ್ಯ ಪ್ರಯೋಜನ

ಆಲಿವ್ ಆಯಿಲ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಿಂದ ಹಲವು ರೋಗಗಳಿಗೆ ಚಿಕಿತ್ಸೆ ನೀಡಬಹುದು. ಇದು ಹಲವು ಬಗೆಯ ಪೋಷಕಾಂಶಗಳನ್ನು ಒಳಗೊಂಡಿದೆ. ಹಾಗಾದ್ರೆ ಈ ಆಲಿವ್ ಆಯಿಲ್ ನಿಂದ ಏನೆಲ್ಲಾ ಪ್ರಯೋಜನವಿದೆ ಎಂಬುದನ್ನು ತಿಳಿದುಕೊಳ್ಳೋಣ.

* ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ 1 ಚಮಚ ಆಲಿವ್ ಆಯಿಲ್ ಸೇವಿಸುವುದರಿಂದ ಮಲಬದ್ಧತೆಯನ್ನು ನಿವಾರಿಸಬಹುದು. ಆದರೆ ಇದನ್ನು ಮಕ್ಕಳಿಗೆ ಬಳಸಬಾರದು.

*ಚಳಿಗಾಲದಲ್ಲಿ ಕೈಗಳು ಡ್ರೈ ಆಗುವುದನ್ನು ತಡೆಯಲು ಆಲಿವ್ ಆಯಿಲ್ ನಿಂದ ಮಸಾಜ್ ಮಾಡಿ. ಇದರಿಂದ ಕೈಗಳು ಮೃದುವಾಗುತ್ತವೆ.

* ಆಲಿವ್ ಆಯಿಲ್ ನಲ್ಲಿ ನಂಜುನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿರುವುದರಿಂದ ಸಣ್ಣ ಗಾಯಗಳಿಗೆ ಆಲಿವ್ ಆಯಿಲ್ ಬಳಸಿದರೆ ಗಾಯಗಳು ಬೇಗ ವಾಸಿಯಾಗುತ್ತವೆ.

*ಮಕ್ಕಳಿಗೆ ಡೈಪರ್ ಬಳಸಿ ಅಲರ್ಜಿಯಾಗಿದ್ದರೆ ಅದನ್ನು ನಿವಾರಿಸಲು ಆಲಿವ್ ಆಯಿಲ್ ನಿಂದ ಮಸಾಜ್ ಮಾಡಿ. ಇದರಿಂದ ತುರಿಕೆ ಕಡಿಮೆಯಾಗುವುದರ ಜೊತೆಗೆ ಅಲರ್ಜಿ ಬೇಗ ನಿವಾರಣೆಯಾಗುತ್ತದೆ.

* ಆಲಿವ್ ಆಯಿಲ್ ನ್ನು ಸ್ವಲ್ಪ ಬಿಸಿ ಮಾಡಿ ಕೂದಲಿಗೆ ಹಚ್ಚಿ 30 ನಿಮಿಷ ಬಿಟ್ಟು ಕೂದಲು ವಾಶ್ ಮಾಡಿ. ಇದರಿಂದ ತಲೆಹೊಟ್ಟು, ಒಣಕೂದಲು, ಕೂದಲು ಕವಲೊಡೆಯುವ ಸಮಸ್ಯೆ ದೂರವಾಗುತ್ತದೆ.

* ಕಿವಿಯಲ್ಲಿರುವ ವ್ಯಾಕ್ಸ್ ಕ್ಲೀನ್ ಮಾಡಲು ಮತ್ತು ಕಿವಿ ಸೋಂಕನ್ನು ತಡೆಗಟ್ಟಲು ಆಲಿವ್ ಆಯಿಲ್ 2 ಹನಿ ಕಿವಿಯೊಳಗೆ ಹಾಕಿ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read