ಸಾಮಾನ್ಯವಾಗಿ ಹೆರಿಗೆ ನಂತ್ರ ಮಹಿಳೆಯರು ಸೆಕ್ಸ್ ನಲ್ಲಿ ಆಸಕ್ತಿ ಕಳೆದುಕೊಳ್ತಾರೆ. ದೇಹದಲ್ಲಾದ ಬದಲಾವಣೆ, ಹಾರ್ಮೋನ್ ಬದಲಾವಣೆ ಹಾಗೂ ಮಕ್ಕಳ ಆರೈಕೆ ಇದಕ್ಕೆ ಮುಖ್ಯ ಕಾರಣವಾಗುತ್ತದೆ. ನಾರ್ಮಲ್ ಹೆರಿಗೆ ನಂತ್ರ ಸಂಗಾತಿ ಸೆಕ್ಸ್ ವಿಷ್ಯದ ಬಗ್ಗೆ ಕೆಲವೊಂದು ಸಂಗತಿಯನ್ನು ತಿಳಿದಿರಬೇಕಾಗುತ್ತದೆ.
ಸಾಮಾನ್ಯವಾಗಿ ಬಹುತೇಕ ದಂಪತಿ ಹೆರಿಗೆಯಾಗಿ 1 ತಿಂಗಳ ನಂತ್ರ ಸಂಭೋಗ ಬೆಳೆಸುತ್ತಾರೆ. ಕೆಲ ದಂಪತಿ ಮೂರರಿಂದ ನಾಲ್ಕು ತಿಂಗಳವರೆಗೆ ಸಮಯ ತೆಗೆದುಕೊಳ್ಳುತ್ತಾರೆ. ಯೋನಿಯಲ್ಲಿ ನೋವು ಕಾಣಿಸಿಕೊಳ್ಳುವ ಕಾರಣ ಮಹಿಳೆಯರು ಸೆಕ್ಸ್ ಗೆ ಹಿಂದೇಟು ಹಾಕುತ್ತಾರೆ.
ಹೆರಿಗೆ ವೇಳೆ ಯೋನಿ ದೊಡ್ಡ ಮಾಡಲು ಸ್ವಲ್ಪ ಭಾಗವನ್ನು ಕತ್ತರಿಸಲಾಗಿರುತ್ತದೆ. ನಂತ್ರ ಸ್ಟಿಚ್ ಮಾಡಲಾಗುತ್ತದೆ. ಇದ್ರ ನೋವು ಅನೇಕ ದಿನ ಕಾಡುತ್ತದೆ.
ಹೆರಿಗೆ ನಂತ್ರ ಮೊದಲ ಸೆಕ್ಸ್ ವೇಳೆ ಪುರುಷ ಸಂಗಾತಿಗೆ ಇದ್ರ ಬಗ್ಗೆ ತಿಳಿದಿರಬೇಕು. ಮಹಿಳಾ ಸಂಗಾತಿ ಇಚ್ಛಿಸಿದ್ರೆ ಮಾತ್ರ ಒಂದಾಗುವ ಪ್ರಯತ್ನ ನಡೆಸಬೇಕು. ಒಂದು ವೇಳೆ ಮಹಿಳಾ ಸಂಗಾತಿಗೆ ಹೆಚ್ಚು ನೋವು ಕಾಡಿದ್ರೆ ಲೈಂಗಿಕ ಕ್ರಿಯೆಯನ್ನು ಅಲ್ಲಿಗೆ ನಿಲ್ಲಿಸುವುದು ಸೂಕ್ತ.
ಮಹಿಳೆಯರು ಮಾನಸಿಕವಾಗಿ ಸೆಕ್ಸ್ ಗೆ ಸಿದ್ಧವಿದ್ದರೂ ಯೋನಿ ನಯವಾಗಿರುವುದಿಲ್ಲ. ಇದಕ್ಕೆ ಹೆರಿಗೆ ನಂತ್ರ ನೀಡುವ ಔಷಧಿಗಳು ಕಾರಣವಾಗುತ್ತವೆ. ಯೋನಿ ಶುಷ್ಕವಾಗಿದ್ದರೆ ಕಿರಿಕಿರಿಯಾಗುತ್ತದೆ. ಹಾಗಾಗಿ ರಫ್ ಸೆಕ್ಸ್ ನಿಂದ ದೂರವಿರುವುದು ಒಳ್ಳೆಯದು.