ಬಿಸಿಬಿಸಿ ಚಹಾ, ಖಡಕ್ ಚಹ, ಮಸಾಲಾ ಚಹ ಹೀಗೆ ಚಹದಲ್ಲೇ ಹತ್ತಾರು ವೆರೈಟಿಗಳಿವೆ. ಕೆಲವರಿಗೆ ಹಾಲಲ್ಲೇ ಮಾಡೋ ಚಹಾ ಇಷ್ಟವಾಗುತ್ತೆ. ಇನ್ನು ಕೆಲವರಿಗೆ ಹೆಚ್ಚು ಚಹಾದ ಪುಡಿ ಹಾಕಿ ಮಾಡೋ ಸ್ಟ್ರಾಂಗ್ ಚಹಾ ಇಷ್ಟ. ಎಲ್ಲರದ್ದೂ ಒಂದೊಂದು ಟೇಸ್ಟ್. ಒಟ್ಟಿನಲ್ಲಿ ದಿನಕ್ಕೆ ಎರಡು ಕಪ್ ಟೀ ಕುಡಿದ್ರೆ ಈ ಚಹಾ ಪ್ರಿಯರಿಗೆ ಸ್ವರ್ಗ ಸುಖ ಸಿಕ್ಕಂತೆ.
ಇತ್ತಿಚೆಗೆ ಟ್ವಿಟ್ಟರ್ನಲ್ಲಿ ಪೊಸ್ಟ್ ಮಾಡಲಾಗಿರೋ ಅರ್ಧ ಕಪ್ ಚಹಾ ಮತ್ತು ಅರ್ಧ ತಿಂದುಳಿದ ಸ್ಯಾಂಡ್ವಿಚ್ ಫೋಟೋ ಎಲ್ಲರ ಗಮನ ಸೆಳೆಯುತ್ತಾ ಇದೆ. ಇದೇ ಫೋಟೋ ಶೀರ್ಷಿಕೆಯಲ್ಲಿ ”ಗುಡ್‌ಮಾರ್ನಿಂಗ್, ಇದು ಮುಂಜಾನೆಯ ಟೀ. ನಿಮ್ಮ ಕಡೆ ಚಹಾಕ್ಕೆ ಏನಂತಿರಾ? “ ಎಂದು ಬರೆಯಲಾಗಿದೆ. ಈ ಪ್ರಶ್ನೆ ಹಾಗೂ ಕಪ್‌ನಲ್ಲಿರೋ ಟೀ ನೋಡಿ, ನೆಟ್ಟಿಗರು ಫುಲ್ ಗರಂ ಆಗ್ಹೋಗಿದ್ದಾರೆ. ಅಷ್ಟಕ್ಕೂ ಈ ಫೋಟೋ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿರೋದು ರಾಹುಲ್ ವರ್ಮಾ.
ರಾಹುಲ್ ವರ್ಮಾ ಸಹಜವಾಗಿ ಈ ಫೋಟೋ ಪೋಸ್ಟ್ ಮಾಡಿದ್ದಾರೆ. ಆದರೆ ಅವರು ಕೇಳಿದ್ದ ಒಂದು ಪ್ರಶ್ನೆಗೆ ಚಹಾ ಪ್ರಿಯರು ಫುಲ್ ಗರಂ ಆಗ್ಹೋಗಿದ್ದಾರೆ. ತಮ್ಮ ಸಿಟ್ಟನ್ನ ಕಾಮೆಂಟ್ ಹಾಕುವುದರ ಮೂಲಕ ತೋರಿಸಿದ್ದಾರೆ. ಒಬ್ಬರು“ ಇದು ಟೀ ನಾ? ನನಗಂತೂ ಇದು ಟೀ ಅಂತ ಅನಿಸ್ತಾನೇ ಇಲ್ಲ“ ಎಂದು ಬರೆದಿದ್ದಾರೆ. ಇನ್ನೊಬ್ಬರು “ಸರ್ ನಿಮಗೆ ಟೀ ಎಂದು ಹಾರ್ಲಿಕ್ಸ್ ಕೊಡಲಾಗುತ್ತಿದೆ. ಚಿಕ್ಕವರಿದ್ದಾಗ ನಮಗೆ ಇದೇ ರೀತಿ ಹೇಳಿ ಕುಡಿಸುತ್ತಿದ್ದರು“ ಎಂದು ಬರೆದಿದ್ದಾರೆ.
ಇನ್ನೊಬ್ಬ ಮಹಾಶಯರಂತೂ “ ಇದು ಟೀ ಅಲ್ಲ ಹಾಲು ಅಷ್ಟೆ. ನೀವು ಅಸಲಿ ಟೀ ಕುಡಿಯಬೇಕಂದ್ರೆ @thesatbir ಹತ್ತಿರ ಹೋಗಿ ಕಡಕ್ ಟೀ ಕುಡಿಯಿರಿ“ ಎಂದು ಬಿಟ್ಟಿ ಸಲಹೆಯನ್ನ ಕೊಟ್ಟಿದ್ದಾರೆ. ಇದೇ ರೀತಿ ಸಾವಿರಾರು ಕಾಮೆಂಟ್ ಬಂದ ಮೇಲೆ ರಾಹುಲ್ ವರ್ಮಾ. ನನ್ನ ಟೀ ಯಾರಿಗೂ ಯಾಕೆ ಇಷ್ಟವಾಗ್ತಿಲ್ಲ. ಎಷ್ಟು ಟೇಸ್ಟಿಯಾಗಿದೆ ಇದು ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.
https://twitter.com/rahulverma08/status/1613030512129605634?ref_src=twsrc%5Etfw%7Ctwcamp%5Etweetembed%7Ctwterm%5E1613030512129605634%7Ctwgr%5E67eef34e073326e3a79059f14456c8b339b38ed1%7Ctwcon%5Es1_&ref_url=https%3A%2F%2Fwww.indiatoday.in%2Ftrending-news%2Fstory%2Fthis-mans-morning-chai-pic-has-left-tea-lovers-super-annoyed-on-twitter-heres-why-2320684-2023-01-12