alex Certify ವಿದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ ಇದು; ದೆಹಲಿಯಿಂದ ಕೇವಲ 5 ಗಂಟೆಗಳ ಪ್ರಯಾಣ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವಿದೇಶ ಪ್ರವಾಸಕ್ಕೆ ಹೇಳಿ ಮಾಡಿಸಿದಂತಹ ತಾಣ ಇದು; ದೆಹಲಿಯಿಂದ ಕೇವಲ 5 ಗಂಟೆಗಳ ಪ್ರಯಾಣ…!

ಪ್ರವಾಸ ಹೋಗೋದು ಎಲ್ಲರಿಗೂ ಇಷ್ಟವಾಗುವಂತಹ ಕೆಲಸ. ರಜಾದಿನಗಳಲ್ಲಿ ಸುಂದರ ತಾಣಗಳನ್ನು ವೀಕ್ಷಿಸಬೇಕು ಎಂಬ ಬಯಕೆ ಇದ್ದೇ ಇರುತ್ತದೆ. ವಿದೇಶಕ್ಕೆ ಪ್ರಯಾಣಿಸಲು ಯೋಜಿಸುತ್ತಿರುವವರಿಗೆ  ಜಾರ್ಜಿಯಾ ಅತ್ಯುತ್ತಮ ಆಯ್ಕೆಯಾಗಿದೆ.

ಜಾರ್ಜಿಯಾ ಯುರೋಪ್ ಮತ್ತು ಏಷ್ಯಾದ ನಡುವೆ ಇದೆ. ಇದು ಪ್ರಾಚೀನ ಸಂಸ್ಕೃತಿ,  ಅದ್ಭುತ ದೃಶ್ಯಾವಳಿ ಮತ್ತು ರುಚಿಕರವಾದ ಆಹಾರಕ್ಕಾಗಿ ಹೆಸರುವಾಸಿಯಾದ ದೇಶ. ದೆಹಲಿಯಿಂದ ಜಾರ್ಜಿಯಾಕ್ಕೆ ನೇರ ವಿಮಾನವಿದೆ. ಈ ವಿಮಾನದ ಮೂಲಕ ಕೇವಲ ಐದು ಗಂಟೆಗಳಲ್ಲಿ ಜಾರ್ಜಿಯಾ ತಲುಪಬಹುದು.

ಜಾರ್ಜಿಯಾಕ್ಕೆ ಭೇಟಿ ನೀಡಲು ಉತ್ತಮ ಸಮಯವೆಂದರೆ ಮೇ ನಿಂದ ಜೂನ್ ಅಥವಾ ಸೆಪ್ಟೆಂಬರ್‌ನಿಂದ ಅಕ್ಟೋಬರ್. ಈ ತಿಂಗಳುಗಳಲ್ಲಿ ಹವಾಮಾನವು ಆಹ್ಲಾದಕರವಾಗಿರುತ್ತದೆ ಮತ್ತು ಜನಸಂದಣಿ ಕಡಿಮೆ ಇರುತ್ತದೆ.

ಟಿಬಿಲಿಸಿ: ಜಾರ್ಜಿಯಾದ ರಾಜಧಾನಿ ಟಿಬಿಲಿಸಿ ಹಳೆಯ ಮತ್ತು ಹೊಸತನದ ಮಿಶ್ರಣದ ರೋಮಾಂಚಕ ನಗರ. ಇಲ್ಲಿ ಫ್ರೀಡಂ ಸ್ಕ್ವೇರ್, ನಾರಿಕಲಾ ಕೋಟೆ ಮತ್ತು ಸಮೀಬಾ ಕ್ಯಾಥೆಡ್ರಲ್‌ನಂತಹ ಪ್ರೇಕ್ಷಣೀಯ ಸ್ಥಳಗಳಿಗೆ ಭೇಟಿ ನೀಡಬಹುದು.

Mtskheta: ಜಾರ್ಜಿಯಾದ ಹಿಂದಿನ ರಾಜಧಾನಿ Mtskheta ಯುನೆಸ್ಕೋ ವಿಶ್ವ ಪರಂಪರೆಯ ಪ್ರಾಚೀನ ನಗರ. ಇಲ್ಲಿ ಜ್ವಾರಿ ಮತ್ತು ಸ್ವೆಟಿಟ್‌ಕೋವೆಲಿ ಕ್ಯಾಥೆಡ್ರಲ್‌ನಂತಹ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಬಹುದು.

ಗೋರಿ: ಜಾರ್ಜಿಯನ್ ನಾಯಕ ಜೋಸೆಫ್ ಸ್ಟಾಲಿನ್ ಅವರ ಜನ್ಮಸ್ಥಳ, ಗೋರಿ. ಇಲ್ಲಿ ಸ್ಟಾಲಿನ್ ಮ್ಯೂಸಿಯಂ ಮತ್ತು ಅಪ್ಲಿಸ್ಟಿಕೇ ಕೇವ್ ಸಿಟಿ ಬಹಳ ವಿಶೇಷವಾಗಿದೆ.

ಕಜ್ಬೆಗಿ ರಾಷ್ಟ್ರೀಯ ಉದ್ಯಾನವನ: ಈ ರಾಷ್ಟ್ರೀಯ ಉದ್ಯಾನವನವು ಕಾಕಸಸ್ ಪರ್ವತ ಶ್ರೇಣಿಯ ಮೂರನೇ ಅತಿ ಎತ್ತರದ ಶಿಖರವಾದ ಕಜ್ಬೆಕ್ ಪರ್ವತಕ್ಕೆ ನೆಲೆಯಾಗಿದೆ. ಇಲ್ಲಿ ಗೆರ್ಗೆಟಿ ಟ್ರಿನಿಟಿ ಚರ್ಚ್ ಅನ್ನು ನೋಡಬಹುದು. ಇದು ಬೆಟ್ಟದ ಮೇಲಿರುವ ಸುಂದರವಾದ ಜಾರ್ಜಿಯನ್ ಆರ್ಥೊಡಕ್ಸ್ ಚರ್ಚ್.

ಕಖೇತಿ: ಜಾರ್ಜಿಯಾದ ವೈನ್ ಪ್ರದೇಶವಿದು. ಇಲ್ಲಿನ ವೈನರಿಗಳು ಬಹಳ ಆಕರ್ಷಕವಾಗಿವೆ. ಜಾರ್ಜಿಯನ್ ವೈನ್‌ಗಳನ್ನು ಸವಿಯಬಹುದು. ಮನುಕುಲದ ಇತಿಹಾಸದಲ್ಲಿ ವೈನ್ ತಯಾರಿಕೆಯ ಮೊದಲ ಪುರಾವೆಯು ಇಲ್ಲಿ ಕಂಡುಬಂದಿದೆ. ಜಾರ್ಜಿಯನ್ನರು 8,000 ವರ್ಷಗಳಿಂದ ವೈನ್ ತಯಾರಿಸುತ್ತಿದ್ದಾರೆ ಮತ್ತು ಅವರ ವೈನ್ ತಯಾರಿಕಾ ವಿಧಾನ ವಿಶಿಷ್ಟವಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...