ಸರಿಯಾದ ರೀತಿಯ ಆಹಾರ ಪದ್ಧತಿ ಇಲ್ಲದಿದ್ದರೆ ಪಿತ್ತದ ಸಮಸ್ಯೆ ತಲೆದೂರುತ್ತದೆ. ಪಿತ್ತ ಹೆಚ್ಚಾದರೆ ವಾಕರಿಕೆ, ತಲೆಸುತ್ತು, ಊಟ ಸೇರದೇ ಇರುವ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪಿತ್ತದ ನಿವಾರಣೆಗೆ ಈ ಕ್ರಮ ಅನುಸರಿಸಿ.
* ಪಿತ್ತದ ಸಮಸ್ಯೆ ಎದುರಿಸುತ್ತಿರುವವರು ಏಲಕ್ಕಿ ಸೇವಿಸುವುದರಿಂದ ಇದನ್ನು ಕಡಿಮೆ ಮಾಡಿಕೊಳ್ಳಬಹುದು. ಏಲಕ್ಕಿಯಲ್ಲಿನ ಪೋಷಕಾಂಶಗಳು ಪಿತ್ತದ ನಿವಾರಣೆ ಮಾಡುತ್ತದೆ.
*ಕೇಸರಿ ಸೇವನೆ ಕೂಡ ಪಿತ್ತ ನಿವಾರಣೆಗೆ ಉತ್ತಮ ಮನೆ ಮದ್ದು. ಇದು ರಕ್ತ ಪರಿಚಲನೆಯನ್ನು ಹೆಚ್ಚಿಸುತ್ತದೆ. ಪಿತ್ತವನ್ನು ನಿವಾರಿಸುತ್ತದೆ.
* 2 ಚಮಚ ಹುಣಸೆಹುಳಿಗೆ 4 ಚಮಚದಷ್ಟು ಬೆಲ್ಲವನ್ನು ಸೇರಿಸಿ ಇದಕ್ಕೆ ಬೇಕಾದಷ್ಟು ನೀರು ಸೇರಿಸಿ ಪಾನಕ ಮಾಡಿಕೊಳ್ಳಿ. ಈ ಪಾನಕವನ್ನು ಸೇವಿಸುವುದರಿಂದ ಪಿತ್ತದ ಸಮಸ್ಯೆ ನಿವಾರಣೆಯಾಗುತ್ತದೆ.
*ಮಜ್ಜಿಗೆಯನ್ನು ಸೇವಿಸುವುದರಿಂದ ಕೂಡ ಪಿತ್ತ ನಿವಾರಿಸಿಕೊಳ್ಳಬಹುದು.
* ಎಳನೀರು, ಬಾಳೆ ಹಣ್ಣು ಕೂಡ ಪಿತ್ತ ನಿವಾರಕಗಳಾಗಿವೆ.