alex Certify ಆರೋಗ್ಯಕ್ಕೆ ಒಳ್ಳೆಯದಲ್ಲ ಊಟವಾದ ತಕ್ಷಣ ಮಾಡುವ ಈ ‘ಹವ್ಯಾಸ’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆರೋಗ್ಯಕ್ಕೆ ಒಳ್ಳೆಯದಲ್ಲ ಊಟವಾದ ತಕ್ಷಣ ಮಾಡುವ ಈ ‘ಹವ್ಯಾಸ’

ಕೆಲವರಿಗೆ ಊಟವಾದ ತಕ್ಷಣ ಕೆಲ ಅಭ್ಯಾಸವಿರುತ್ತದೆ. ಆದರೆ ಆ ಅಭ್ಯಾಸಗಳು ನಿಜಕ್ಕೂ ಆರೋಗ್ಯಕ್ಕೆ ಒಳ್ಳೆಯದಲ್ಲ. ಯಾವುದು ಆ ಅಭ್ಯಾಸಗಳು ತಿಳಿಬೇಕಾ?

* ಕೆಲವರು ಊಟವಾದ ತಕ್ಷಣ ಮಲಗುತ್ತಾರೆ. ಹೀಗೆ ನಿದ್ರಿಸುವುದರಿಂದ ಆಹಾರ ಸರಿಯಾಗಿ ಜೀರ್ಣವಾಗುವುದಿಲ್ಲ. ಇದರಿಂದ ಗ್ಯಾಸ್ಟ್ರಿಕ್ ನಂತಹ ಸಮಸ್ಯೆಗಳು ಕಂಡುಬರುತ್ತವೆ.

* ಊಟದ ಬಳಿಕ ಚಹಾ ಸೇವನೆ ಅನಾರೋಗ್ಯಕರ. ಯಾಕೆಂದರೆ ಚಹಾ ಎಲೆಗಳು ಹೆಚ್ಚಿನ ಪ್ರಮಾಣದ ಆಮ್ಲೀಯತೆಯನ್ನು ಹೊಂದಿರುವುದರಿಂದ ಆಹಾರದಲ್ಲಿನ ಪ್ರೊಟೀನ್ ಅಂಶ ದುಪ್ಪಟ್ಟಾಗಿ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.

* ಊಟದ ನಂತರ ಸ್ನಾನ ಮಾಡುವ ಹವ್ಯಾಸದಿಂದ ಕೈಕಾಲು ಮತ್ತು ದೇಹದಲ್ಲಿ ರಕ್ತದ ಹರಿಯುವಿಕೆಯು ತೀವ್ರಗೊಳ್ಳುವುದರಿಂದ ಜೀರ್ಣ ವ್ಯವಸ್ಥೆ ಬಲಹೀನಗೊಳ್ಳುತ್ತದೆ.

* ಊಟದ ನಂತರ ಹಣ್ಣುಗಳನ್ನು ತಿನ್ನುವ ಬದಲು ಕನಿಷ್ಠ ಪಕ್ಷ ಒಂದು ಗಂಟೆಗಳ ನಂತರ ಸೇವಿಸುವುದು ಒಳ್ಳೆಯದು. ಇಲ್ಲದಿದ್ದರೆ ಹೊಟ್ಟೆ ಉಬ್ಬಿದಂತಾಗುತ್ತದೆ.

* ಊಟದ ನಂತರ ಧೂಮಪಾನ ಮಾಡುವುದು ಸರಿಯಲ್ಲ. ಇದು ಅನೇಕ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...