alex Certify ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲಿನ ಸಮಸ್ಯೆಗೆ ಕಾರಣವಾಗುತ್ತೆ ನೀವು ಸೇವಿಸುವ ಈ ಆಹಾರ

ನಮ್ಮ ಆಹಾರ ಕ್ರಮ, ಜೀವನ ಶೈಲಿಯಿಂದ ಕೂದಲುದುರುವ ಸಮಸ್ಯೆ ಕಾಡುತ್ತದೆ. ಇದಕ್ಕೆ ಸರಿಯಾದ ಆರೈಕೆ ಮಾಡಬೇಕು. ಇಲ್ಲವಾದರೆ ಬೊಕ್ಕ ತಲೆಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾಗಿ ಮಹಿಳೆಯರು ಹಾಗೂ ಪುರುಷರು ಕೂದಲಿನ ಸಮಸ್ಯೆಗೆ ಕಾರಣವಾಗುವಂತಹ ಈ ಆಹಾರಗಳನ್ನು ಸೇವಿಸಬೇಡಿ.

*ಸಕ್ಕರೆ : ಕೂದಲಿನ ಆರೋಗ್ಯಕ್ಕೆ ಪ್ರೋಟೀನ್ ಬೇಕು. ಆದರೆ ಸಕ್ಕರೆ ಪ್ರೋಟೀನ್ ಅನ್ನು ಹೀರಿಕೊಳ್ಳುತ್ತದೆ. ಇದರಿಂದ ಕೂದಲಿಗೆ ಬೆಳವಣಿಗೆ ಕುಂಠಿತವಾಗುತ್ತದೆ.

*ಎಣ್ಣೆಯುಕ್ತ ಆಹಾರ : ಇದು ನೆತ್ತಿಯ ತುರಿಕೆ, ತಲೆಹೊಟ್ಟು, ಜಿಡ್ಡಿಗೆ ಕಾರಣವಾಗುತ್ತದೆ. ಇದರಿಂದ ರಂಧ್ರಗಳು ಮುಚ್ಚಿಹೋಗಿ ಕೂದಲುದುರುತ್ತದೆ.

* ಪಿಷ್ಟ ಆಹಾರ : ಹಿಟ್ಟಿನಿಂದ ತಯಾರಿಸಿದ ಬಿಳಿ ಬ್ರೆಡ್, ಬಿಳಿ ಪಾಸ್ತಾ ಮುಂತಾದ ಆಹಾರಗಳನ್ನು ಸೇವಿಸಬೇಡಿ. ಇದರಲ್ಲಿ ಸಕ್ಕರೆ ಅಂಶ ಅಧಿಕವಾಗಿದ್ದು ಕೂದಲುದುರುವಿಕೆಗೆ ಕಾರಣವಾಗುತ್ತದೆ.

*ಪ್ರೋಟೀನ್ ಕಡಿಮೆ ಇರುವ ಆಹಾರ : ಕೂದಲಿನ ಬೆಳವಣಿಗೆಗೆ ಪ್ರೋಟೀನ್ ಅತ್ಯವಶ್ಯಕವಾದ್ದರಿಂದ ಪ್ರೋಟೀನ್ ಹೆಚ್ಚಾಗಿರುವ ಆಹಾರ ಸೇವಿಸಿ. ಪ್ರೋಟೀನ್ ಕಡಿಮೆ ಇರುವ ಆಹಾರ ಸೇವಿಸಿದರೆ ಕೂದಲು ಸರಿಯಾಗಿ ಬೆಳೆಯುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...