alex Certify ಕೆಟ್ಟ ಕೊಲೆಸ್ಟ್ರಾಲ್‌ಗೆ ದಿವ್ಯ ಔಷಧ ಈ ಪಾನೀಯ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಟ್ಟ ಕೊಲೆಸ್ಟ್ರಾಲ್‌ಗೆ ದಿವ್ಯ ಔಷಧ ಈ ಪಾನೀಯ…!

ಕೊಲೆಸ್ಟ್ರಾಲ್‌ನಿಂದಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಎಲ್ಲರಿಗೂ ಗೊತ್ತಿದೆ. ಇದು ರಕ್ತನಾಳಗಳಲ್ಲಿ ಇರುವ ಒಂದು ರೀತಿಯ ಕೊಬ್ಬು. ಕೊಲೆಸ್ಟ್ರಾಲ್‌ ಅನ್ನು ದೇಹವು ಜೀವಕೋಶಗಳು ಮತ್ತು ಹಾರ್ಮೋನುಗಳನ್ನು ತಯಾರಿಸಲು ಬಳಸುತ್ತದೆ. ಕೊಲೆಸ್ಟ್ರಾಲ್‌ನಲ್ಲಿ ಎರಡು ವಿಧಗಳಿವೆ – HDL (ಒಳ್ಳೆಯದು) ಮತ್ತು LDL (ಕೆಟ್ಟದು).

ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣ ಹೆಚ್ಚಾದರೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುವುದಿಲ್ಲ. ಈ ಕಾರಣದಿಂದಾಗಿ ಹೃದಯಾಘಾತ ಮತ್ತು ಪಾರ್ಶ್ವವಾಯುಗಳಂತಹ ಮಾರಣಾಂತಿಕ ಸಮಸ್ಯೆಗಳೂ ಆಗಬಹುದು. ಕೆಟ್ಟ ಕೊಲೆಸ್ಟ್ರಾಲ್‌ನಿಂದ ಇವುಗಳ ಅಪಾಯವು ಹಲವಾರು ಪಟ್ಟು ಹೆಚ್ಚಾಗುತ್ತದೆ.

LDL ಕೊಲೆಸ್ಟ್ರಾಲ್ ಎಷ್ಟಿರಬೇಕು?

ವಯಸ್ಕರಲ್ಲಿ LDL ಅಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವು 100 mg/dL ಗಿಂತ ಕಡಿಮೆಯಿರಬೇಕು. ಆದರೆ ಒಳ್ಳೆಯ ಕೊಲೆಸ್ಟ್ರಾಲ್ HDL ಮಟ್ಟವು 60 mg/dL ಗಿಂತ ಹೆಚ್ಚಿರಬೇಕು.

ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾದಾಗ ಕೆಲವೊಂದು ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ವಿಪರೀತ ಏದುಸಿರುವ ಬರುವುದು, ಎದೆನೋವು, ಆಯಾಸ, ಹೃದಯ ಬಡಿತ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು, ದೌರ್ಬಲ್ಯ, ಕಣ್ಣಿನ ಮೇಲ್ಭಾಗದಲ್ಲಿ ಹಳದಿಯಾಗುವಿಕೆ ಇವೆಲ್ಲವೂ ಕೆಟ್ಟ ಕೊಲೆಸ್ಟ್ರಾಲ್‌ ಹೆಚ್ಚಳದ ಲಕ್ಷಣಗಳು.

ಕೆಟ್ಟ ಕೊಲೆಸ್ಟ್ರಾಲ್‌ಗೆ ರಾಮಬಾಣ ಈ ಜ್ಯೂಸ್‌…

ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಟೊಮೆಟೊ ರಸವು ತುಂಬಾ ಪ್ರಯೋಜನಕಾರಿ. ಇದು ಲಿಪಿಡ್ ಮಟ್ಟವನ್ನು ಸುಧಾರಿಸಬಲ್ಲ ಲೈಕೋಪೀನ್ ಎಂಬ ಸಂಯುಕ್ತವನ್ನು ಹೊಂದಿರುತ್ತದೆ. ಇದಲ್ಲದೆ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಬಲ್ಲ ಫೈಬರ್ ಮತ್ತು ನಿಯಾಸಿನ್‌ ಕೂಡ ಟೊಮೆಟೋದಲ್ಲಿ ಸಮೃದ್ಧವಾಗಿವೆ. 2019ರ ಅಧ್ಯಯನದ ಪ್ರಕಾರ ಉಪ್ಪುರಹಿತ ಟೊಮೆಟೊ ರಸವನ್ನು ಕುಡಿದ ಪರಿಣಾಮ ಜಪಾನ್‌ನಲ್ಲಿ ಒಂದು ವರ್ಷದಲ್ಲಿ 260 ವಯಸ್ಕರಲ್ಲಿ ಎಲ್‌ಡಿಎಲ್ ಕೊಲೆಸ್ಟ್ರಾಲ್ ಮಟ್ಟ ಸುಧಾರಿಸಿದೆ. ಆದರೆ ಕೊಲೆಸ್ಟ್ರಾಲ್‌ ಸಮಸ್ಯೆ ಇರುವವರು ಒಮ್ಮೆ ವೈದ್ಯರ ಸಲಹೆ ಪಡೆದು ಈ ಮನೆಮದ್ದನ್ನು ಅಳವಡಿಸಿಕೊಳ್ಳಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...