ಪ್ರತಿಯೊಬ್ಬ ಮಹಿಳೆಯೂ ಮುಟ್ಟಿನ ದಿನಗಳಲ್ಲಿ ನೋವು ತಿನ್ನುತ್ತಾಳೆ. ಕೆಲವರಿಗೆ ವಿಪರೀತ ನೋವಾದ್ರೆ ಮತ್ತೆ ಕೆಲವರಿಗೆ ಬ್ಲೀಡಿಂಗ್ ಜಾಸ್ತಿ ಇರುತ್ತದೆ. ಮತ್ತೆ ಕೆಲ ಮಹಿಳೆಯರು ಮಾನಸಿಕ ಕಿರಿಕಿರಿ ಅನುಭವಿಸ್ತಾರೆ. ಮುಟ್ಟಿನ ದಿನಗಳಲ್ಲಿ ಮಹಿಳೆ ದೇಹದಲ್ಲಿ ಹಾರ್ಮೋನ್ ಬದಲಾವಣೆಯಾಗುತ್ತದೆ. ಇದ್ರಿಂದಾಗಿ ಶಾರೀರಿಕ ಹಾಗೂ ಮಾನಸಿಕ ಸಮಸ್ಯೆ ಎದುರಾಗುತ್ತದೆ.
ಮುಟ್ಟಿನ ಸಮಯದಲ್ಲಿ ಸ್ನಾಯು ನೋವು, ಹೊಟ್ಟೆ ನೋವು, ತಲೆ ತಿರುಗುವುದು, ಸುಸ್ತು ಎಲ್ಲವೂ ಸಾಮಾನ್ಯ ಸಂಗತಿ. ಹಾಗಂತ ಅದನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ. ಮುಟ್ಟಿನ ವೇಳೆ ಆಹಾರ-ವಿಶ್ರಾಂತಿ ಬಗ್ಗೆ ಹೆಚ್ಚಿನ ಗಮನ ನೀಡಬೇಕಾಗುತ್ತದೆ. ಮಹಿಳೆಯರು ಮುಟ್ಟಿನ ಸಮಯದಲ್ಲಿ ಮಾಡುವ ಕೆಲವೊಂದು ಕೆಲಸಗಳು ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ.
ಕೆಲವೊಂದು ಮಹಿಳೆಯರು ಹಾಗೂ ಹುಡುಗಿಯರಿಗೆ ಮುಟ್ಟಿನ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬ್ಲೀಡಿಂಗ್ ಆಗುವುದಿಲ್ಲ. ಅಂತವರು ಒಂದೇ ನ್ಯಾಪ್ಕ್ಲಿನ್ ಬಹಳ ಸಮಯ ಬಳಸ್ತಾರೆ. ಇದ್ರಿಂದಾಗಿ ಬ್ಯಾಕ್ಟೀರಿಯಾ ಉತ್ಪತ್ತಿಯಾಗಿ ಸೋಂಕು ತಗಲುತ್ತದೆ.
ಮುಟ್ಟಿನ ವೇಳೆ ಶಾರೀರಿಕ ಸಂಬಂಧ ಬೆಳೆಸುವಾಗ ಮಹಿಳೆಯರು ಕೆಲವೊಂದು ವಿಷಯದ ಬಗ್ಗೆ ತಿಳಿದಿರಬೇಕಾಗುತ್ತದೆ. ಅಸುರಕ್ಷಿತ ಶಾರೀರಿಕ ಸಂಬಂಧ ಬೆಳೆಸುವುದರಿಂದ ಅನೇಕ ರೋಗಗಳು ಕಾಣಿಸಿಕೊಳ್ಳುತ್ತವೆ. ಹಾಗಾಗಿ ಸೋಂಕಿನಿಂದ ರಕ್ಷಣೆ ಪಡೆಯಲು ಕಾಂಡೋಮ್ ಬಳಸಿ.
ಮುಟ್ಟಿನ ಸಮಯದಲ್ಲಿ ನಿದ್ರೆ ಸರಿಯಾಗಿ ಬರುವುದಿಲ್ಲ. ಆದ್ರೆ ವಿಶ್ರಾಂತಿ ಬೇಕೇಬೇಕು. ತಡ ರಾತ್ರಿಯವರೆಗೆ ಮೊಬೈಲ್, ಲ್ಯಾಪ್ ಟಾಪ್, ಟಿವಿ ಮುಂದೆ ಕುಳಿತಿರುವ ಬದಲು ವಿಶ್ರಾಂತಿ ಪಡೆಯುವುದು ಉತ್ತಮ. ಇಲ್ಲವಾದ್ರೆ ಮುಂದಿನ ತಿಂಗಳು ಸಮಸ್ಯೆ ಎದುರಾಗುತ್ತದೆ.
ಮುಟ್ಟಿನ ವೇಳೆ ಆಹಾರ ಸೇವನೆ ಬಹಳ ಮುಖ್ಯ. ಖಾಲಿ ಹೊಟ್ಟೆ, ನೋವನ್ನು ಹೆಚ್ಚು ಮಾಡುತ್ತದೆ. ನೋವು ಎಷ್ಟೇ ಇರಲಿ. ಆಹಾರ ಸೇವನೆ ಬಿಡಬೇಡಿ.
ಇನ್ನು ಮುಟ್ಟಿನ ವೇಳೆ ಧೂಮಪಾನ ಹಾಗೂ ಮದ್ಯಪಾನದಿಂದ ದೂರವಿರಿ. ಧೂಮಪಾನ ಮಾಡಿದ್ರೆ ನೋವು ಹೆಚ್ಚಾಗುತ್ತದೆ ಎಂಬುದು ನೆನಪಿರಲಿ.