ಎಲೆಕ್ಟ್ರಿಕ್ ಕಾರುಗಳ ನಡುವೆಯೂ ಜನರಲ್ಲಿ ಬೈಕ್ ಕ್ರೇಝ್ ಸಾಕಷ್ಟಿದೆ. ಅದರಲ್ಲೂ ಪವರ್‌ಫುಲ್ ಸ್ಪೋರ್ಟ್ಸ್ ಬೈಕ್‌ಗಳಲ್ಲಿ ಸುತ್ತಾಡಲು ಇಷ್ಟಪಡುವವರೇ ಹೆಚ್ಚು. ಅಂತಹ 5 ಶಕ್ತಿಶಾಲಿ ಬೈಕ್‌ಗಳ ಬಗ್ಗೆ ತಿಳಿದುಕೊಳ್ಳೋಣ. ಇವು 40hp ಗಿಂತ ಹೆಚ್ಚಿನ ಶಕ್ತಿಯನ್ನು ನೀಡುತ್ತವೆ.
ಯಮಹಾ MT-03, R3
ಯಮಹಾದ MT-03, R3, 321cc ಸಮಾನಾಂತರ ಅವಳಿ-ಸಿಲಿಂಡರ್ ಟ್ವಿನ್ ಎಂಜಿನ್ ಅನ್ನು ಹೊಂದಿದೆ. Yamaha MT-03ನ ಎಕ್ಸ್ ಶೋ ರೂಂ ಬೆಲೆ 4.60 ಲಕ್ಷ ರೂಪಾಯಿಗಳು. R3 ಬೈಕ್‌ನ ಎಕ್ಸ್ ಶೋ ರೂಂ ಬೆಲೆ 4.65 ಲಕ್ಷ ರೂಪಾಯಿ ಇದೆ.
KTM RC 390, 390 ಅಡ್ವೆಂಚರ್
KTM RC 390 ಪ್ರಸ್ತುತ ದೇಶದ ಅತ್ಯಂತ ಶಕ್ತಿಶಾಲಿ ಸಿಂಗಲ್-ಸಿಲಿಂಡರ್ ಸ್ಪೋರ್ಟ್‌ಬೈಕ್ ಆಗಿದೆ. ಇದು 43.5hp ಶಕ್ತಿಯನ್ನು ಉತ್ಪಾದಿಸುವ 373cc ಎಂಜಿನ್ ಅನ್ನು ಹೊಂದಿದೆ. ಇದರ ಆರಂಭಿಕ ಬೆಲೆ 3.20 ಲಕ್ಷ ರೂಪಾಯಿ.
390 ಅಡ್ವೆಂಚರ್ ಬೈಕ್ ಕೂಡ RCಯಂತೆ ಅದೇ ಔಟ್‌ಪುಟ್ ಅನ್ನು ಪಡೆಯುತ್ತದೆ. ಆದರೆ ಹೆಚ್ಚು ಆರಾಮದಾಯಕ ರೈಡಿಂಗ್ ಸೀಟ್ ಮತ್ತು ವಿಭಿನ್ನ ಶೈಲಿಯನ್ನು ಹೊಂದಿದೆ. ಬೆಲೆ ಇದರ ಮಾಡೆಲ್ ಅನ್ನು ಆಧರಿಸಿ ಇರುತ್ತದೆ. ಎಕ್ಸ್ ಶೋ ರೂಂ ಬೆಲೆ 2.83 ಲಕ್ಷದಿಂದ 3.63 ಲಕ್ಷದವರೆಗಿದೆ.
KTM 390 ಡ್ಯೂಕ್
ಹೊಸ 399cc ಎಂಜಿನ್‌ನೊಂದಿಗೆ ಚಿಕ್ಕ ಸಾಮರ್ಥ್ಯದ ಥರ್ಡ್ ಜನರೇಶನ್ 390 ಡ್ಯೂಕ್‌ನಲ್ಲಿ ಬಹಳಷ್ಟು ಬದಲಾವಣೆ ಮಾಡಲಾಗಿದೆ. ಆದರೆ ಇದು ಇನ್ನೂ ಆಕ್ರಮಣಕಾರಿಯಾಗಿದೆ. ಇದರ ಮತ್ತೊಂದು ಪ್ರಯೋಜನವೆಂದರೆ ಬೆಲೆ ಪ್ರತಿಸ್ಪರ್ಧಿಗಳಿಗಿಂತ ಕಡಿಮೆಯಿದೆ. ಈ ಸಾಹಸಿ ಬೈಕ್‌ನ ಆರಂಭಿಕ ಬೆಲೆ 3.12 ಲಕ್ಷ ರೂಪಾಯಿ.
ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650, ಬೆನೆಲ್ಲಿ ಲಿಯೊನ್ಸಿನೊ 500
ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಮತ್ತು ಬೆನೆಲ್ಲಿ ಲಿಯೊನ್ಸಿನೊ ಎರಡೂ ಒಂದೇ ತೆರನಾದ ಪವರ್ ಉತ್ಪಾದಿಸುತ್ತವೆ. ಇಂಟರ್‌ಸೆಪ್ಟರ್ ನೋಟ ಮತ್ತು ಫೀಲ್ ಎರಡರಲ್ಲೂ ರೆಟ್ರೋದಂತಿದೆ. ಸರಳವಾದ ಏರ್/ಆಯಿಲ್-ಕೂಲ್ಡ್ ಎಂಜಿನ್ ಹೊಂದಿದೆ. ಮಾಡರ್ನ್ ಲುಕ್‌ನ ಲಿಯೊನ್ಸಿನೊ 500, ಲಿಕ್ವಿಡ್-ಕೂಲ್ಡ್ ಎಂಜಿನ್ ಹೊಂದಿದೆ. ರಾಯಲ್ ಎನ್‌ಫೀಲ್ಡ್ ಇಂಟರ್‌ಸೆಪ್ಟರ್ 650 ಬೈಕ್‌ನ ಎಕ್ಸ್ ಶೋ ರೂಂ ಬೆಲೆ 3.03 ಲಕ್ಷದಿಂದ 3.45 ಲಕ್ಷ ರೂಪಾಯಿ. ಇತ್ತೀಚಿನ ಬೆಲೆ ಕಡಿತದ ನಂತರ Benelli Leoncino 500 ಬೆಲೆ 4.99 ಲಕ್ಷ ರೂಪಾಯಿ ಆಗಿದೆ.
ಎಪ್ರಿಲಿಯಾ RS 457
ಎಪ್ರಿಲಿಯಾ RS 457 ಈ ಪಟ್ಟಿಯಲ್ಲಿರುವ ಅತ್ಯಂತ ಶಕ್ತಿಶಾಲಿ ಬೈಕ್. ಆದರೂ ಇದು ಬೆನೆಲ್ಲಿ ಮತ್ತು ರಾಯಲ್ ಎನ್‌ಫೀಲ್ಡ್‌ಗಿಂತ ಕೇವಲ 0.1hp ಹೆಚ್ಚಿನ ಪವರ್ ಉತ್ಪಾದಿಸುತ್ತದೆ. 270-ಡಿಗ್ರಿ ಫೈರಿಂಗ್ ಆರ್ಡರ್ ಹೊಂದಿರುವ ಏಕೈಕ ಬೈಕ್ ಇದು.