alex Certify ಕಡಲೆ ಬೀಜದ ಸೇವನೆಯಿಂದ ಇದೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಡಲೆ ಬೀಜದ ಸೇವನೆಯಿಂದ ಇದೆ ಇಷ್ಟೆಲ್ಲಾ ʼಆರೋಗ್ಯʼ ಪ್ರಯೋಜನ

ಕಡಲೆ ಕಾಯಿಯನ್ನು ಬಡವರ ಬಾದಾಮಿ ಎನ್ನುತ್ತಾರೆ. ಇದರಲ್ಲಿ ಪ್ರೊಟೀನ್, ಕೊಬ್ಬು, ಫೈಬರ್, ಕ್ಯಾಲ್ಸಿಯಂ ಅಪಾರ ಪ್ರಮಾಣದಲ್ಲಿರುತ್ತದೆ. ಮೂಳೆಗಳನ್ನು ಬಲಪಡಿಸಿ ಫಿಟ್ ಆಗಿರಲು ನೆಲಕಡಲೆ ಸಹಕಾರಿ. ಯೌವ್ವನದ ಗುಟ್ಟು ಕಡಲೆ ಕಾಯಿಯಲ್ಲಿದೆ. ಬಡವರ ಬಾದಾಮಿ ಸೇವನೆಯಿಂದ ಇನ್ನೂ ಸಾಕಷ್ಟು ಅನುಕೂಲಗಳಿವೆ.

ಕಡಲೆ ಕಾಯಿ ಕರುಳಿನ ಕಾಯಿಲೆಗಳನ್ನು ನಿವಾರಿಸುತ್ತದೆ. ಪ್ರತಿದಿನ ನೆಲಗಡಲೆ ಸೇವನೆ ಮಾಡುವುದರಿಂದ ಗ್ಯಾಸ್ ಮತ್ತು ಎಸಿಡಿಟಿ ಸಮಸ್ಯೆ ಶಮನವಾಗುತ್ತದೆ.

ಪ್ರತಿ ದಿನ ಪುರುಷ ಹಾಗೂ ಮಹಿಳೆ ನೆಲಗಡಲೆ ಸೇವನೆ ಮಾಡುವುದರಿಂದ ಸೆಕ್ಸ್ ಹಾರ್ಮೋನುಗಳು ಸಮತೋಲನದಲ್ಲಿರುತ್ತವೆ. ಇದರಿಂದಾಗಿ ಲೈಂಗಿಕ ಜೀವನ ಸುಖಮಯವಾಗಿರುತ್ತದೆ.

ಗರ್ಭಿಣಿಯರಿಗೆ ಕಡಲೆ ಕಾಯಿ ಬಹಳ ಒಳ್ಳೆಯದು. ಗರ್ಭದಲ್ಲಿ ಬೆಳೆಯುತ್ತಿರುವ ಮಗುವಿನ ಬೆಳವಣಿಗೆಗೆ ಇದು ಸಹಕಾರಿ.

ಚರ್ಮದ ಕಾಂತಿಗೆ ಕಡಲೆ ಕಾಯಿ ಒಳ್ಳೆಯದು. ಇದ್ರಲ್ಲಿ ಒಮೆಗಾ -6 ಕೊಬ್ಬಿನಂಶವಿರುತ್ತದೆ.

ವಾರದಲ್ಲಿ ಐದು ದಿನ ನೀವು ಕಡಲೆ ಕಾಯಿ ಸೇವಿಸಿದ್ರೆ ಹೃದಯ ಖಾಯಿಲೆಗಳು ನಿಮ್ಮ ಬಳಿ ಸುಳಿಯುವುದಿಲ್ಲ.

ರಕ್ತ ಹೀನತೆ ಇರುವವರು ಅವಶ್ಯವಾಗಿ ಕಡಲೆ ಕಾಯಿ ಸೇವನೆ ಮಾಡಬೇಕು. ಪ್ರತಿದಿನ ಅದನ್ನು ತಿನ್ನುವುದರಿಂದ ರಕ್ತದ ಸಮಸ್ಯೆ ಎದುರಾಗುವುದಿಲ್ಲ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...