alex Certify ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಇಷ್ಟೆಲ್ಲಾ ಪ್ರಯೋಜನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೌತೆಕಾಯಿ ನೆನಸಿಟ್ಟ ನೀರು ಕುಡಿದರೆ ಇದೆ ಇಷ್ಟೆಲ್ಲಾ ಪ್ರಯೋಜನ

ದಿನದ ಮುಂಜಾನೆಯನ್ನು ಆರೋಗ್ಯಕರವಾಗಿ ಶುರು ಮಾಡಿದರೆ ದೇಹಕ್ಕೆ ಅನೇಕ ಲಾಭಗಳು ಸಿಗುತ್ತದೆ. ಹಾಗೆಯೇ ಬೆಳಗ್ಗೆ ಎದ್ದ ತಕ್ಷಣ ಬಿಸಿ ನೀರು ಕುಡಿಯುವ ಅಭ್ಯಾಸ ಕೆಲವರಿಗೆ ಇದ್ದರೆ, ಇನ್ನು ಕೆಲವರಿಗೆ ಗ್ರೀನ್ ಟೀಯನ್ನು ಕುಡಿಯುವ ಅಭ್ಯಾಸ ಇರುತ್ತದೆ.

ಇನ್ನು ದೇಹದಲ್ಲಿನ ವಿಷಕಾರಿ ಪದಾರ್ಥಗಳನ್ನು ಹೊರ ಹಾಕಲು ಹಾಗು ದೇಹವನ್ನು ಶುದ್ದಿ ಮಾಡಿ ತೂಕ ಇಳಿಸಲು ನೆರವಾಗುವ ಸೌತೆಕಾಯಿ ನೆನೆಸಿಟ್ಟ ನೀರು ಕುಡಿದರೆ ಇಷ್ಟೆಲ್ಲಾ ಪ್ರಯೋಜನ ಪಡೆಯಬಹುದು.

* ರಕ್ತದೊತ್ತಡಕ್ಕೆ ಮುಖ್ಯ ಕಾರಣವೆಂದರೆ ಆಹಾರದಲ್ಲಿ ಹೆಚ್ಚಿಗೆ ಉಪ್ಪಿನಾಂಶ ಇರುವುದು. ಸೌತೆಕಾಯಿಯಲ್ಲಿರುವ ಪೊಟ್ಯಾಶಿಯಮ್,​ ಇಲೆಕ್ಟ್ರೊಲೈಟ್​ ರೀತಿ ಕೆಲಸ ಮಾಡಿ ಸೋಡಿಯಮ್​ ಪ್ರಮಾಣವನ್ನು ನಿಯಂತ್ರಿಸುತ್ತದೆ.

* ತ್ವಚೆಯ ಆರೋಗ್ಯವನ್ನು ಒಳಗಿನಿಂದಲೂ ಹಾಗೆ ಹೊರಗಿನಿಂದ ಕಾಪಾಡಲು ಇದು ಸಹಕಾರಿ. ಇದು ದೇಹದಲ್ಲಿನ ಟಾಕ್ಸಿನ್​ ಅಂಶವನ್ನು ಹೊರಹಾಕಲು ಸಹಾಯ ಮಾಡುತ್ತದೆ.

* ಇದರಲ್ಲಿರುವ ವಿಟಮಿನ್​ ಬಿ5 ಆರೋಗ್ಯಕಾರಿ ವರ್ಣವನ್ನು ನೀಡುತ್ತದೆ.

* ಸೌತೆಕಾಯಿಯಲ್ಲಿ ವಿಟಮಿನ್​ ಕೆ ಅಂಶವಿದೆ. ಇದು ಪ್ರೋಟಿನ್​ ಉತ್ಪತ್ತಿಗೆ ಸಹಾಯ ಮಾಡಿ ಮೂಳೆಯ ಆರೋಗ್ಯವನ್ನು ಕಾಪಾಡುತ್ತದೆ. ಜೊತೆಗೆ ರಕ್ತ ಹೆಪ್ಪುಗಟ್ಟುವಿಕೆಯನ್ನು ನಿಯಂತ್ರಿಸುತ್ತದೆ.

* ಸೌತೆಕಾಯಿ ನೀರು ದೇಹದ ಚಯಾಪಚನ ಕ್ರಿಯೆಯನ್ನು ಹೆಚ್ಚಿಸಿ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಜೊತೆಗೆ ದೇಹಕ್ಕೆ ಎನರ್ಜಿಯನ್ನೂ ನೀಡುತ್ತದೆ.

* ಸೌತೆಕಾಯಿಯಲ್ಲಿರುವ ಫಿಸ್ಟೆನ್​ ಅಂಶ ಮೆದುಳಿನ ಕಾರ್ಯಕ್ಷಮತೆ ಹೆಚ್ಚಲು ಮತ್ತು ನೆನಪಿನ ಶಕ್ತಿ ಉತ್ತಮಗೊಳ್ಳಲು ಸಹಾಯ ಮಾಡುತ್ತದೆ. ಇದು ಮೆದುಳು ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.

* ಸೌತೆಕಾಯಿಯಲ್ಲಿ ಡೈಯೆಟರಿ ಫೈಬರ್​ ಅಂಶ ಸಮೃದ್ಧವಾಗಿರುವುದರಿಂದ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.

* ಸೌತೆಕಾಯಿ ಸಿಪ್ಪೆಯಲ್ಲಿ ಕರಗದ ಫೈಬರ್​ ಅಂಶವಿದೆ. ಇದು ಆಹಾರ ಸುಲಭವಾಗಿ ಅನ್ನನಾಳದಲ್ಲಿ ಇಳಿದು ಹೋಗಲು ಸಹಾಯ ಮಾಡುತ್ತದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...