ದೆಹಲಿ ಹಾರರ್ ಪ್ರಕರಣದ ಸಂತ್ರಸ್ತೆ ಅಂಜಲಿ ಮನೆಯಲ್ಲಿ ಕಳ್ಳತನ; ಸ್ನೇಹಿತೆ ನಿಧಿ ಕೈವಾಡವೆಂದು ಕುಟುಂಬಸ್ಥರ ಆರೋಪ

ಹೊಸ ವರ್ಷದ ದಿನದಂದು ತನ್ನ ಸ್ಕೂಟಿಗೆ ಡಿಕ್ಕಿ ಹೊಡೆದ ಕಾರಿನ ಕೆಳಗೆ ಹಲವು ಕಿಲೋಮೀಟರ್ ದೂರ ಎಳೆದೊಯ್ದು ದಾರುಣವಾಗಿ ಸಾವನ್ನಪ್ಪಿದ ದೆಹಲಿ ಯುವತಿ ಅಂಜಲಿ ಸಿಂಗ್ ಅವರ ಮನೆಯಲ್ಲಿ ಕಳ್ಳತನವಾಗಿರೋ ವರದಿಯಾಗಿದೆ.

ಕರಣ್ ವಿಹಾರ್‌ನಲ್ಲಿರುವ ಅವರ ಮನೆಯ ಬೀಗವನ್ನು ಕಳ್ಳರು ಒಡೆದು ಒಳನುಗ್ಗಿದ್ದಾರೆ ಮತ್ತು ಕಳ್ಳತನವಾದ ವಸ್ತುಗಳ ಪೈಕಿ ಎಲ್‌ಸಿಡಿ ಟಿವಿಯೂ ಸೇರಿದೆ ಎಂದು ಅಂಜಲಿಯ ಕುಟುಂಬ ಸದಸ್ಯರು ಹೇಳಿದ್ದಾರೆ. ಕಳ್ಳತನದ ಹಿಂದೆ ಅಂಜಲಿಯ ಸ್ನೇಹಿತೆ ನಿಧಿ ಕೈವಾಡವಿದೆ ಎಂದು ಆರೋಪಿಸಿದ್ದಾರೆ.

ಈ ಬಗ್ಗೆ ಅಂಜಲಿಯ ಸಹೋದರಿ ಮಾತನಾಡಿ, “ಬೆಳಿಗ್ಗೆ 7.30 ರ ಸುಮಾರಿಗೆ ನಮ್ಮ ನೆರೆಹೊರೆಯವರು ಕಳ್ಳತನದ ಬಗ್ಗೆ ನಮಗೆ ಮೊದಲು ಮಾಹಿತಿ ನೀಡಿದರು. ನಾವು ಇಲ್ಲಿಗೆ ಬಂದಾಗ ಬೀಗ ಒಡೆದಿರುವುದು ಕಂಡುಬಂದಿದೆ. ಎಲ್‌ಸಿಡಿ ಟಿವಿ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಕದ್ದೊಯ್ಯಲಾಗಿದೆ. ” ಎಂದಿದ್ದಾರೆ

ಮತ್ತೊಬ್ಬ ಕುಟುಂಬದ ಸದಸ್ಯರು ಮಾತನಾಡಿ ಕಳ್ಳತನ ಪ್ರಕರಣದಲ್ಲಿ ದೆಹಲಿ ಪೊಲೀಸರ ಪಾತ್ರವನ್ನು ಪ್ರಶ್ನಿಸಿದ್ದಾರೆ. “ನಿನ್ನೆ ಮನೆಯ ಮುಂದೆ ಯಾಕೆ ಪೋಲೀಸಿರಲಿಲ್ಲ? ಕಳೆದ 8 ದಿನಗಳಿಂದ ಪೋಲೀಸರು ಇದ್ದರು ಆದರೆ ನಿನ್ನೆ ಯಾರೂ ಇರಲಿಲ್ಲ?. ಕಳ್ಳತನದ ಹಿಂದೆ ನಿಧಿ ಕೈವಾಡವಿದೆ ಎಂದು ನಮಗೆ ಅನಿಸುತ್ತದೆ ಎಂದಿದ್ದಾರೆ. ಕಳ್ಳತನ ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share This Article

Latest News

ಬಸನಗೌಡ ಪಾಟೀಲ್ ಯತ್ನಾಳ್ ಉಚ್ಚಾಟನೆಯಿಂದ ಬಿಜೆಪಿಗೆ ಹಿನ್ನಡೆಯಾಗುತ್ತದಾ ?

View Results

Loading ... Loading ...

Most Read