ದುನಿಯಾ ವಿಜಯ್ ನಟಿಸಿ ನಿರ್ದೇಶಿಸಿರುವ ‘ಭೀಮ’ ಅಂದುಕೊಂಡಂತೆ ಭರ್ಜರಿ ಯಶಸ್ಸು ಕಂಡಿದ್ದು, ಬಾಕ್ಸ್ ಆಫೀಸ್ ನಲ್ಲಿ ಧೂಳ್ ಎಬ್ಬಿಸಿದೆ. ಈ ಚಿತ್ರದ ‘ಐ ಲವ್ ಯು ಕಣೆ’ ಎಂಬ ಲಿರಿಕಲ್ ಹಾಡು ಈಗಾಗಲೇ ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿದ್ದು, ಇದರ ಸಂಪೂರ್ಣ ವಿಡಿಯೋ ಹಾಡು ಇಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಲಿದೆ. ಈ ಹಾಡಿಗೆ ಚರಣ್ ರಾಜ್ ಮತ್ತು ವೈಶ್ ಧ್ವನಿಯಾಗಿದ್ದು, ಕವಿರಾಜ್ ಅವರ ಸಾಹಿತ್ಯವಿದೆ. ಇನ್ನುಳಿದಂತೆ ಚರಣ್ ರಾಜ್ ಸಂಗೀತ ಸಂಯೋಜನೆ ನೀಡಿದ್ದಾರೆ.
ಈ ಚಿತ್ರವನ್ನು ಕೃಷ್ಣ ಕ್ರಿಯೇಷನ್ಸ್ ಮತ್ತು ಜಗದೀಶ ಫಿಲಂಸ್ ಬ್ಯಾನರ್ ನಲ್ಲಿ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಗೌಡ ನಿರ್ಮಾಣ ಮಾಡಿದ್ದು, ದುನಿಯಾ ವಿಜಯ್ ಹಾಗೂ ಅಶ್ವಿನಿ ಅಂಬರೀಶ್ ಸೇರಿದಂತೆ ಪ್ರಿಯಾ ಶತಮರ್ಶನ್, ಕಲ್ಯಾಣಿ ರಾಜು, ಡ್ರ್ಯಾಗನ್ ಮಂಜು, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲ ಕೃಷ್ಣ ದೇಶಪಾಂಡೆ, ಬಣ್ಣ ಹಚ್ಚಿದ್ದಾರೆ. ದೀಪು. ಎಸ್. ಕುಮಾರ್ ಸಂಕಲನ, ಶಿವಸೇನಾ ಛಾಯಾಗ್ರಹಣ, ಹಾಗೂ ಬಿ.ಧನಂಜಯ್ ನೃತ್ಯ ನಿರ್ದೇಶನವಿದೆ.
No More Wait For This Madness Love Song From #Bheema💞#LoveYouKane Video Song Today At 6 PM