ವಿಕಾಸ್ ಪಂಪಾಪತಿ ನಿರ್ದೇಶನದ ರಿಷಿ ಅಭಿನಯದ ‘ರಾಮನ ಅವತಾರ’ ಚಿತ್ರದ ಟೈಟಲ್ ಟ್ರ್ಯಾಕ್ ಇಂದು ಜಾನ್ಕಾರ್ ಮ್ಯೂಸಿಕ್ ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ಈ ಹಾಡಿಗೆ ಕಿಶನ್ ಬಿಜೂರ್ ಧ್ವನಿಯಾಗಿದ್ದು, ಜುಡಾ ಸ್ಯಾಂಡಿ ಸಂಗೀತ ಸಂಯೋಜನೆ ನೀಡಿದ್ದಾರೆ. ಇನ್ನುಳಿದಂತೆ ನಿರ್ದೇಶಕ ವಿಕಾಸ್ ಪಂಪಾಪತಿ ಅವರ ಸಾಹಿತ್ಯವಿದೆ.
ಈ ಚಿತ್ರವನ್ನು ಸ್ಟಾರ್‌ಫ್ಯಾಬ್ ಬ್ಯಾನರ್ ನಲ್ಲಿ ಅಮ್ರೇಜ್ ಸೂರ್ಯವಂಶಿ ನಿರ್ಮಾಣ ಮಾಡಿದ್ದು, ನಟ ರಿಷಿ ಸೇರಿದಂತೆ ಪ್ರಣಿತ ಸುಭಾಷ್, ಅರುಣ್ ಸಾಗರ್, ಶುಬ್ರ ಅಯ್ಯಪ್ಪ, ಅನಿರುದ್ ಆಚಾರ್ಯ ಬಣ್ಣ ಹಚ್ಚಿದ್ದಾರೆ. ಅಮರ್ನಾಥ್ ಸಂಕಲನ, ಕಿರಣ್ ಮನೋಹರ್ ನೃತ್ಯ ನಿರ್ದೇಶನ, ಚೇತನ್ ಆರ್ ಡಿಸೋಜಾ ಹಾಗೂ ಮಂಜು ನಾಗಪ್ಪ ಅವರ ಸಾಹಸ ನಿರ್ದೇಶನವಿದೆ.