alex Certify ನಾಲ್ಕುಪಟ್ಟು ಹೆಚ್ಚಾಗಿದೆ 35ರ ನಂತರ ತಾಯಿಯಾಗುವ ಪ್ರವೃತ್ತಿ; ಮಹಿಳೆಯರೇಕೆ ತಡವಾಗಿ ಗರ್ಭಿಣಿಯಾಗಲು ನಿರ್ಧರಿಸುತ್ತಿದ್ದಾರೆ….? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾಲ್ಕುಪಟ್ಟು ಹೆಚ್ಚಾಗಿದೆ 35ರ ನಂತರ ತಾಯಿಯಾಗುವ ಪ್ರವೃತ್ತಿ; ಮಹಿಳೆಯರೇಕೆ ತಡವಾಗಿ ಗರ್ಭಿಣಿಯಾಗಲು ನಿರ್ಧರಿಸುತ್ತಿದ್ದಾರೆ….?

ಮಹಿಳೆಯರ ಬದುಕಿನಲ್ಲಿ ತಾಯ್ತನ ಬಹಳ ಮಹತ್ವದ ಘಟ್ಟ. ಆದ್ರೆ ಇತ್ತೀಚಿನ ದಿನಗಳಲ್ಲಿ ಮಹಿಳೆಯರು 35ರ ನಂತರ ತಾಯ್ತನಕ್ಕೆ ಮುಂದಾಗ್ತಿದ್ದಾರೆ. ಅಧ್ಯಯನದ ಪ್ರಕಾರ 35 ವರ್ಷದ ನಂತರ ತಾಯಂದಿರಾಗುವ ಮಹಿಳೆಯರ ಸಂಖ್ಯೆ ನಾಲ್ಕು ಪಟ್ಟು ಹೆಚ್ಚಾಗಿದೆ. ದೆಹಲಿ ಸರ್ಕಾರದ ಜನನ ಮತ್ತು ಮರಣಗಳ ನೋಂದಣಿಯ ವಾರ್ಷಿಕ ವರದಿಯ ಪ್ರಕಾರ 2010 ರಲ್ಲಿ 35 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರ ಈ ಪ್ರಮಾಣ ಶೇ.2.25ರಷ್ಟಿತ್ತು, ಇದು 2023 ರಲ್ಲಿ ಶೇ.8.39ಕ್ಕೆ ಏರಿದೆ.

ಮಹಿಳೆಯರು ಈಗ ತಮ್ಮ ವೃತ್ತಿ ಮತ್ತು ವೈಯಕ್ತಿಕ ಜೀವನವನ್ನು ಸಮತೋಲನಗೊಳಿಸಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ ಮಹಿಳೆಯರು ಈಗ ಮೊದಲಿಗಿಂತ ಹೆಚ್ಚು ವಿದ್ಯಾವಂತರು ಮತ್ತು ಸ್ವತಂತ್ರರು. ತಮ್ಮ ಜೀವನದ ಬಗ್ಗೆ ಸ್ವತಂತ್ರ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಮರ್ಥರಾಗಿದ್ದಾರೆ. ಜೊತೆಗೆ ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿನ ಪ್ರಗತಿಯಿಂದಾಗಿ ಮಹಿಳೆಯರು ವಯಸ್ಸಾದ ನಂತರವೂ ತಾಯಿಯಾಗಲು ಸಾಧ್ಯವಾಗುತ್ತಿದೆ.

ವರದಿಯ ಪ್ರಕಾರ 30 ರಿಂದ 34 ವರ್ಷದಲ್ಲಿ ತಾಯಿಯಾಗುತ್ತಿರುವ ಮಹಿಳೆಯರ ಸಂಖ್ಯೆಯೂ ಹೆಚ್ಚಾಗಿದೆ. 2010 ರಲ್ಲಿ ಈ ವಯಸ್ಸಿನ ಶೇ.9.46 ಮಹಿಳೆಯರು ಮಗು ಪಡೆದಿದ್ದರು. ಇದು 2023 ರಲ್ಲಿ ಶೇ.24.71 ಕ್ಕೆ ಏರಿದೆ. ಅದೇ ಸಮಯದಲ್ಲಿ 20 ರಿಂದ 29 ವರ್ಷ ವಯಸ್ಸಿನಲ್ಲಿ ತಾಯಿಯಾಗುತ್ತಿರುವವರ ಸಂಖ್ಯೆ ಕಡಿಮೆಯಾಗಿದೆ. 2010 ರಲ್ಲಿ ಈ ವಯಸ್ಸಿನ 86.67 ಪ್ರತಿಶತ ಮಹಿಳೆಯರು ತಾಯ್ತನ ಅನುಭವಿಸಿದ್ದರು. ಈ ಪ್ರಮಾಣ 2023 ರಲ್ಲಿ ಅರ್ಧಕ್ಕಿಂತ ಕಡಿಮೆಯಿತ್ತು.

ಈ ಬದಲಾವಣೆಗೆ ಏನು ಕಾರಣ?

ಉದ್ಯೋಗ: ಬಹುತೇಕ ಮಹಿಳೆಯರು ಈಗ ತಮ್ಮ ವೃತ್ತಿಗೆ ಆದ್ಯತೆ ನೀಡುತ್ತಿದ್ದಾರೆ. ಓದು ಪೂರ್ಣಗೊಳಿಸಿ ಉದ್ಯೋಗ ಮಾಡಲು ಇಚ್ಛಿಸುತ್ತಾರೆ. ಆರ್ಥಿಕವಾಗಿ ಸ್ವತಂತ್ರರಾಗುತ್ತಾರೆ.

ಮದುವೆ ವಿಳಂಬ: ಮಹಿಳೆಯರು ಇತ್ತೀಚಿನ ದಿನಗಳಲ್ಲಿ ಮದುವೆಯನ್ನೇ ವಿಳಂಬ ಮಾಡುತ್ತಿದ್ದಾರೆ. ತಮ್ಮ ಜೀವನ ಸಂಗಾತಿಯನ್ನು ಆಯ್ಕೆ ಮಾಡಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಾರೆ.

ಸಂತಾನೋತ್ಪತ್ತಿ ತಂತ್ರಜ್ಞಾನ: ಸಂತಾನೋತ್ಪತ್ತಿ ತಂತ್ರಜ್ಞಾನದಲ್ಲಿನ ಬೆಳವಣಿಗೆಗಳಿಂದಾಗಿ, ಮಹಿಳೆಯರು ಈಗ ತಡವಾಗಿ ತಾಯಂದಿರಾಗಲು ಸಮರ್ಥರಾಗಿದ್ದಾರೆ.

ಜೀವನಶೈಲಿಯಲ್ಲಿ ಬದಲಾವಣೆ: ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಹೆಚ್ಚು ಜಾಗೃತರಾಗಿದ್ದಾರೆ ಮತ್ತು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಾರೆ. ಹಾಗಾಗಿ ತಡವಾದ ತಾಯ್ತನದ ಅನುಕೂಲಗಳು ಮತ್ತು ಅನಾನುಕೂಲಗಳ ಬಗ್ಗೆ ಅವರಿಗೆ ತಿಳಿದಿದೆ.

ಈ ಬದಲಾವಣೆಯ ಪರಿಣಾಮಗಳೇನು?

ಈ ಬದಲಾವಣೆಯು ಸಮಾಜದಲ್ಲಿ ಮಹಿಳೆಯರ ಪಾತ್ರದಲ್ಲಿ ಬದಲಾವಣೆ ತರುತ್ತದೆ. ಮಹಿಳೆಯರು ಹೆಚ್ಚು ಸ್ವತಂತ್ರ ಮತ್ತು ಸಬಲರಾಗುತ್ತಾರೆ. ತಡವಾದ ತಾಯ್ತನದಿಂದಾಗಿ ಕುಟುಂಬದ ರಚನೆಯಲ್ಲಿ ಬದಲಾವಣೆಗಳಾಗುತ್ತವೆ. ಕುಟುಂಬಗಳು ಚಿಕ್ಕದಾಗಿರುತ್ತವೆ ಮತ್ತು ಮಹಿಳೆಯರು ವೃತ್ತಿಯ ಜೊತೆಜೊತೆಗೆ ಕುಟುಂಬವನ್ನು ನಿರ್ವಹಿಸಲು ಸಾಧ್ಯವಾಗುತ್ತದೆ. ತಾಯ್ತನ ವಿಳಂಬ ಮಾಡುತ್ತಿರುವುದರಿಂದ ಮಹಿಳೆಯರ ಆರೋಗ್ಯದ ಮೇಲೆ ಪರಿಣಾಮವಾಗುತ್ತಿದೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...