ಲೋಹಿತ್ ಹೆಚ್ ನಿರ್ದೇಶನದ ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಅಭಿನಯದ ಬಹುನಿರೀಕ್ಷಿತ ‘ರಾಕ್ಷಸ’ ಚಿತ್ರದ ಕನ್ನಡ ಟೀಸರ್ ಈಗಾಗಲೇ ಯೂಟ್ಯೂಬ್ ನಲ್ಲಿ ಧೂಳ್ ಎಬ್ಬಿಸಿದ್ದು, ತೆಲುಗು ಆವೃತ್ತಿಯ ಟೀಸರ್ ಇದೇ ಜನವರಿ 25ರಂದು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.
ಈ ಚಿತ್ರದಲ್ಲಿ ಪ್ರಜ್ವಲ್ ದೇವರಾಜ್ ಸೇರಿದಂತೆ ಸೋಮಶೇಖರ್, ವಿಹಾನ್ ಕೃಷ್ಣ, ಅರುಣ್ ರಾಥೋಡ್, ಶ್ರೀಧರ್, ಗೌತಮ್, ತೆರೆ ಹಂಚಿಕೊಂಡಿದ್ದು, ಶಾನ್ವಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ದೀಪು ಬಿ ಎಸ್ ನಿರ್ಮಾಣ ಮಾಡಿದ್ದಾರೆ. ನವೀನ್ ಹಾಗೂ ಮಾನಸ ಸಹ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಸಿ ರವಿ ಚಂದ್ರನ್ ಸಂಕಲನ, ಜಬಿನ್ ಜೋಕಾಬ್ ಛಾಯಾಗ್ರಹಣ ಹಾಗೂ ವಿನೋದ್ ಮತ್ತು ರಿಯಲ್ ಸತೀಶ್ ಅವರ ಸಾಹಸ ನಿರ್ದೇಶನವಿದೆ. ನೋಬಿನ್ ಪಾಲ್ ಸಂಗೀತ ಸಂಯೋಜನೆ ನೀಡಿದ್ದಾರೆ.