
ನವೀನ್ ರೆಡ್ಡಿ ನಿರ್ದೇಶನದ, ಮರಿ ಟೈಗರ್ ವಿನೋದ್ ಪ್ರಭಾಕರ್ ಅಭಿನಯದ ‘ಮಾದೇವ’ ಸಿನಿಮಾ ಟೀಸರ್ ನಾಳೆ ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡುವುದಾಗಿ ಚಿತ್ರತಂಡ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದೆ. a2 ಮ್ಯೂಸಿಕ್ ಅಫಿಶಿಯಲ್ ಯೂಟ್ಯೂಬ್ ಚಾನೆಲ್ ನಲ್ಲಿ ಈ ಟೀಸರ್ ವೀಕ್ಷಿಸುವುದಾಗಿದೆ.
ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ವಿನೋದ್ ಪ್ರಭಾಕರ್ ಸೇರಿದಂತೆ ಸೋನಾಲ್ ಮೊಂಥೆರೋ, ಅಚ್ಯುತ್ ಕುಮಾರ್, ಕಾಕ್ರೋಚ್ ಸುಧಿ, ಶ್ರೀನಗರಕಿಟ್ಟಿ, ಶ್ರುತಿ ತೆರೆ ಹಂಚಿಕೊಂಡಿದ್ದಾರೆ. ರಾಧಾಕೃಷ್ಣ ಬ್ಯಾನರ್ ನಡಿ ಕೇಶವ್ ದೇವಸಂದ್ರ, ನಾಗರಾಜ್ ಮತ್ತು ಸುಮಂತ್ ಬಂಡವಾಳ ಹೂಡಿದ್ದಾರೆ. ವಿಜಯ್ ಕುಮಾರ್ ಸಂಕಲನ, ಬಾಲಕೃಷ್ಣ ಛಾಯಾಗ್ರಹಣ ಹಾಗೂ ಪ್ರದ್ದ್ಯೋತ್ತನ್ ಅವರ ಸಂಗೀತ ಸಂಯೋಜನೆ ಇದೆ.
