ತನ್ನ ಟೈಟಲ್ ಮೂಲಕವೇ ಸಾಕಷ್ಟು ಕುತೂಹಲ ಮೂಡಿಸಿರುವ ನಟರಾಜ್ ಕೃಷ್ಣೇಗೌಡ ನಿರ್ದೇಶನದ ‘ಕಣ್ಣಾ ಮುಚ್ಚೆ ಕಾಡೇ ಗೂಡೇ’ ಚಿತ್ರದ ಟೀಸರ್ ಇಂದು youtube ನಲ್ಲಿ ಬಿಡುಗಡೆಯಾಗಲಿದೆ. ಈ ಕುರಿತು ಚಿತ್ರ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ಈ ಚಿತ್ರವನ್ನು ಡಾರ್ಲಿಂಗ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ಅನಿತಾ ವೀರೇಶ್ ಕುಮಾರ್ ನಿರ್ಮಾಣ ಮಾಡಿದ್ದು, ಸಂತೋಷ್ ಜೋಶುವಾ, ವಿಜೀತ್ ಕೃಷ್ಣ ಸಂಗೀತ ಸಂಯೋಜನೆ ನೀಡಿದ್ದಾರೆ. ರಾಘವೇಂದ್ರ ರಾಜಕುಮಾರ್ ಸೇರಿದಂತೆ ಅಥರ್ವ ಪ್ರಕಾಶ್, ಜ್ಯೋತಿಶ್ ಶೆಟ್ಟಿ, ಪ್ರಾರ್ಥನಾ, ದೀಪಕ್ ರೈ, ರವಿರಾಮ್ ಕುಂಜ, ಅರವಿಂದ್ ಬೋಳಾರ್, ವೀರೇಶ್ ಕುಮಾರ್ ಬಣ್ಣ ಹಚ್ಚಿದ್ದು, ದೀಪಕ್ ಕುಮಾರ್ ಜೆ.ಕೆ. ಛಾಯಾಗ್ರಹಣ ಹಾಗೂ ಅಲೆಕ್ಸ್ ಹೆನ್ಸನ್ ಸಂಕಲನವಿದೆ.