ಪ್ರತಿ ಮನೆಯಲ್ಲೂ ಪಾತ್ರೆ ತೊಳೆಯಲು ಬಳಸುವ ಸ್ಪಾಂಜ್ ಇದ್ದೇ ಇರುತ್ತದೆ. ಪಾತ್ರೆ ಮತ್ತು ಅಡುಗೆ ಮನೆಯನ್ನು ಸ್ವಚ್ಛ ಮಾಡಲು ಇದು ಅನಿವಾರ್ಯವೂ ಹೌದು. ಆದರೆ ಈ ಪುಟ್ಟ ಕಿಚನ್ ಸ್ಪಾಂಜ್ ನಮ್ಮ ಪ್ರಾಣವನ್ನೇ ತೆಗೆಯಬಲ್ಲದು, ಅಚ್ಚರಿಯಾದರೂ ಇದು ಸತ್ಯ. ಕಿಚನ್ ಸ್ಪಾಂಜ್‌ಗಳು ಆರೋಗ್ಯಕ್ಕೆ ಎಷ್ಟು ಅಪಾಯಕಾರಿ ಎಂಬುದನ್ನು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಇವುಗಳಲ್ಲಿ ಕಿಡ್ನಿ ವೈಫಲ್ಯಕ್ಕೆ ಕಾರಣವಾಗುವಷ್ಟು ಬ್ಯಾಕ್ಟೀರಿಯಾಗಳಿರುತ್ತವೆ.
ಅಧ್ಯಯನಗಳ ಪ್ರಕಾರ ಈ ಸ್ಪಾಂಚ್‌ಗಳು ಪ್ರತಿ ಘನ ಸೆಂಟಿಮೀಟರ್‌ಗೆ 54 ಶತಕೋಟಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತವೆ. ಈ ಬ್ಯಾಕ್ಟೀರಿಯಾಗಳು ನಮ್ಮ ಆಹಾರವನ್ನು ಕಲುಷಿತಗೊಳಿಸಬಹುದು. ಆಹಾರದ ಮೂಲಕ ಬ್ಯಾಕ್ಟೀರಿಯಾಗಳು ನಮ್ಮ ದೇಹವನ್ನು ಪ್ರವೇಶಿಸಿ ಗಂಭೀರ ಕಾಯಿಲೆಗಳಿಗೆ ಕಾರಣವಾಗಬಹುದು.
ಈ ಸ್ಪಾಂಜ್‌ಗಳಲ್ಲಿ ಕ್ಯಾಂಪಿಲೋಬ್ಯಾಕ್ಟರ್, ಇ.ಕೋಲಿ, ಸಾಲ್ಮೊನೆಲ್ಲಾ, ಸ್ಟ್ಯಾಫಿಲೋಕೊಕಸ್ ಸೇರಿದಂತೆ ಅನೇಕ ರೀತಿಯ ಅಪಾಯಕಾರಿ ಬ್ಯಾಕ್ಟೀರಿಯಾಗಳು ಕಂಡುಬರುತ್ತವೆ. ಈ ಬ್ಯಾಕ್ಟೀರಿಯಾಗಳು ಹೊಟ್ಟೆ ಸೇರಿದರೆ ಅತಿಸಾರ, ಹೊಟ್ಟೆ ನೋವು, ಜ್ವರ, ವಾಕರಿಕೆ, ಮೂತ್ರಪಿಂಡ ವೈಫಲ್ಯ ಮತ್ತು ಇತರ ಗಂಭೀರ ಕಾಯಿಲೆಗಳು ಬರುತ್ತವೆ.
ಕಿಚನ್ ಸ್ಪಾಂಜ್ ಸ್ವಚ್ಛವಾಗಿಡುವುದು ಹೇಗೆ?
ಪ್ರತಿದಿನ ಸ್ಪಾಂಜ್ ಅನ್ನು ತೊಳೆದು ಸ್ವಚ್ಛಗೊಳಿಸಿ. ಬೆಚ್ಚಗಿನ ನೀರಿನಿಂದ ಸ್ಪಾಂಜ್ವನ್ನು ತೊಳೆಯಿರಿ ಮತ್ತು ಅದಕ್ಕೆ ಡಿಟರ್ಜೆಂಟ್ ಸೇರಿಸಿ. ಮೈಕ್ರೊವೇವ್ನಲ್ಲಿ ಸ್ಪಾಂಜ್ವನ್ನು ಬಿಸಿ ಮಾಡಿ. ವಾರಕ್ಕೊಮ್ಮೆ ಸ್ಪಾಂಜ್ ಅನ್ನು ಬದಲಾಯಿಸಿ.